ಬೆಂಗಳೂರು: ಕೇಂದ್ರ ಸರ್ಕಾರ, ಬಿಜೆಪಿ ನಾಯಕರು, ವಿಶ್ವ ಹಿಂದೂ ಪರಿಷತ್ ಮತ್ತು ಆರ್ಎಸ್ಎಸ್ಗೆ ಗೋವುಗಳ ಪ್ರತಿ ನಿಜವಾದ ಸ್ನೇಹ ಇದ್ದರೆ, ಭಾರತದಿಂದ ವಿದೇಶಗಳಿಗೆ ನಡೆಯುತ್ತಿರುವ ಗೋಮಾಂಸ ರಫ್ತನ್ನು ತಕ್ಷಣ ನಿಲ್ಲಿಸಬೇಕು ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಭಾರತ ಗೋಮಾಂಸ ರಫ್ತಿನಲ್ಲಿ ಮೂರನೇ ಸ್ಥಾನದಲ್ಲಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ಅದು ಎರಡನೇ ಸ್ಥಾನಕ್ಕೇರಿದೆ ಎಂದು ತಿಳಿಸಿದರು. ಗೋವುಗಳ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಗೋಮಾಂಸ ರಫ್ತನ್ನು ನಿಲ್ಲಿಸುವುದು ಅನಿವಾರ್ಯ. Redraft this to English. and give me ash tags and search tags after camas.Bata Women’s Stylish Ballerina Flats – Trendy, Comfortable
ಇದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ನಾಯಕರು, ವಿಹಿಪಿ, ಆರ್ಎಸ್ಎಸ್ಗೆ ನಾನು ಆಗ್ರಹಿಸುತ್ತೇನೆ. ಇದನ್ನು ನಿಲ್ಲಿಸಿದರೆ ಮಾತ್ರ ಗೋವುಗಳು ಉಳಿಯುತ್ತವೆ. ಹಿಂದೂ ಧರ್ಮ ಮತ್ತು ಗೋಸಂರಕ್ಷಣೆಯ ಹೆಸರಿನಲ್ಲಿ ಮಾತ್ರ ರಾಜಕೀಯ ಮಾಡುವುದರಿಂದ ಗೋವುಗಳ ರಕ್ಷಣೆ ಸಾಧ್ಯವಿಲ್ಲ ಎಂದು ಅವರು ಖಂಡಿಸಿದರು. ಬಿಹಾರ ಯುವಕರಿಗೆ ಬಂಪರ್ ಆಫರ್: 1 ಕೋಟಿ ಉದ್ಯೋಗ ಸೃಷ್ಟಿಗೆ ನಿತೀಶ್ ಕುಮಾರ್ ಭರವಸೆ..!
ನನ್ನ ವೈಯಕ್ತಿಕ ಮಾತು: ಗೋವುಗಳ ಹತ್ಯೆ ಮಾತ್ರವಲ್ಲ, ಯಾವುದೇ ಪ್ರಾಣಿಯ ಹತ್ಯೆಯನ್ನೂ ನಾವು ಮಾಡಬಾರದು. ಯಾವ ಪ್ರಾಣಿಯನ್ನೂ ಕೊಲ್ಲುವ ಹಕ್ಕು ನಮಗಿಲ್ಲ. ಪ್ರಪಂಚದಲ್ಲಿ 84 ಲಕ್ಷ ಜೀವರಾಶಿಗಳಿವೆ. ದೇವರು ಅವುಗಳನ್ನು ಸೃಷ್ಟಿಸಿ, ಅವುಗಳಿಗೆ ಸ್ವಂತ ಆಹಾರ, ಬದುಕುವ ಹಕ್ಕು ನೀಡಿದ್ದಾನೆ. ಹೀಗಾಗಿ, ಯಾವುದೇ ಪ್ರಾಣಿಯನ್ನು ಹತ್ಯೆ ಮಾಡಬಾರದು; ಸಂಪೂರ್ಣ ಪ್ರಾಣಿಹತ್ಯೆಯನ್ನು ತಡೆಹಿಡಿಯಬೇಕು ಎಂದು ಸಚಿವರು ಹೇಳಿದರು.