Skip to main content
ವಿಡಿಯೋ
1/2
politics

ಬಿಜೆಪಿ-ಜೆಡಿಎಸ್ ಮೈತ್ರಿಗೆ ಎರಡು ಸಮನ್ವಯ ಸಮಿತಿಗಳ ರಚನೆ

By Vinutha U
ಬಿಜೆಪಿ-ಜೆಡಿಎಸ್ ಮೈತ್ರಿಗೆ ಎರಡು ಸಮನ್ವಯ ಸಮಿತಿಗಳ ರಚನೆ

ಸಮನ್ವಯ ಸಮಿತಿ ರಚನೆಗೆ ಸಂಬಂಧಿಸಿ 8-10 ದಿನಗಳಲ್ಲಿ ಹೆಸರುಗಳನ್ನು ಕಳುಹಿಸುವುದಾಗಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ ಎಂದೂ ಹೇಳಿದರು. ಸಮಿತಿ ರಚನೆಗೆ ಸಂಬಂಧಿಸಿ ಕುಮಾರಸ್ವಾಮಿಯವರಿಂದ ಸಲಹೆಗಳನ್ನು ಸ್ವೀಕರಿಸಿದ್ದೇನೆ.

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಸಮನ್ವಯ ಸಾಧಿಸಲು ಬೆಂಗಳೂರು ಮತ್ತು ರಾಜ್ಯಕ್ಕೆ ಪ್ರತ್ಯೇಕ ಸಮನ್ವಯ ಸಮಿತಿಗಳನ್ನು ರಚಿಸಲು ಯೋಜನೆ ರೂಪಿಸಲಾಗಿದೆ. ಪಕ್ಷ ನಾಯಕರೊಂದಿಗೆ ಚರ್ಚೆ ನಡೆಸಿ ಶೀಘ್ರ ಸಮಿತಿಗಳನ್ನು ಘೋಷಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮಂಗಳವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಸಂಭಾಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ರಾಜಕೀಯ ಸ್ಥಿತಿಗತಿಗಳ ಕುರಿತು ವಿವರವಾದ ಚರ್ಚೆ ನಡೆಸಿದ್ದೇನೆ ಎಂದರು. ಸಮನ್ವಯ ಸಮಿತಿ ರಚನೆಗೆ ಸಂಬಂಧಿಸಿ 8-10 ದಿನಗಳಲ್ಲಿ ಹೆಸರುಗಳನ್ನು ಕಳುಹಿಸುವುದಾಗಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ ಎಂದೂ ಹೇಳಿದರು. ಸಮಿತಿ ರಚನೆಗೆ ಸಂಬಂಧಿಸಿ ಕುಮಾರಸ್ವಾಮಿಯವರಿಂದ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್‌ಗೆ - ದಿ. ಅನಂತಕುಮಾರ್ ಅವರ ಪುತ್ರಿ ಐಶ್ವರ್ಯ ಅನಂತಕುಮಾರ್ ಕಿಡಿ

ಗ್ರೇಟರ್ ಬೆಂಗಳೂರು ಚುನಾವಣೆಗಳು ಸಮೀಪದಲ್ಲಿರುವುದರಿಂದ ಬೆಂಗಳೂರಿಗೆ ಒಂದು ಸಮಿತಿ ಮತ್ತು ರಾಜ್ಯಾದ್ಯಂತ ಮತ್ತೊಂದು ಸಮಿತಿ ರಚಿಸುವುದು ಸೂಕ್ತ ಎಂದು ಅವರು ಸೂಚಿಸಿದ್ದಾರೆ ಎಂದು ವಿಜಯೇಂದ್ರ ವಿವರಿಸಿದರು. ಸಲಹೆಗಳ ನಿರಾಕರಣೆ, ರಾಜ್ಯ ಸರ್ಕಾರ ಮತ್ತು ಸಚಿವರು ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಮೋಹನ್ದಾಸ್ ಪೈ, ಕಿರಣ್ ಮಜುಂದಾರ್ ಷಾ ಅವರಂತಹ ಹಿರಿಯರು ಬೆಂಗಳೂರು ಮತ್ತು ರಸ್ತೆಗಳ ಕುರಿತು ನೀಡಿದ ಸಲಹೆಗಳನ್ನು ಕೇಳುತ್ತಿಲ್ಲ.

ಇಂತಹ ಸಲಹೆಗಳನ್ನು ಸಚಿವರೇ ನಿರಾಕರಿಸುತ್ತಿದ್ದಾರೆ. ಇದು ಸರ್ಕಾರಕ್ಕೆ ಶೋಭೆಯಲ್ಲ ಎಂದು ಟೀಕಿಸಿದ್ದಾರೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಟೀಕೆ-ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದರು ಎಂದು ಹೋಲಿಕೆ ಹಣಿಸಿದರು.

ಮೈತ್ರಿ ಬಲಪಡಿಸಲು ಸಮನ್ವಯ ಸಮಿತಿ: ಚುನಾವಣೆ ತಯಾರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆ ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿಗಳು ಶುರುವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ನಡುವೆ ಸಮನ್ವಯ ಸಾಧಿಸುವಂತೆ ಚಾಲನೆ ದೊರೆತಿದೆ. Redraft this to English. and give me ash tags and search tags after camas.Bata Women’s Stylish Ballerina Flats – Trendy, Comfortable

ಉಭಯ ಪಕ್ಷ ನಾಯಕರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮೈತ್ರಿಯನ್ನು ಇನ್ನಷ್ಟು ಬಲಪಡಿಸುವುದು, ಸ್ಥಳೀಯ ಚುನಾವಣೆಗಳಲ್ಲಿ ಸೀಟು ಹಂಚಿಕೆಯಲ್ಲಿ ಗೊಂದಲ ತಪ್ಪಿಸುವುದು ಸಮಿತಿಯ ಮುಖ್ಯ ಗುರಿ ಎಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಸಮನ್ವಯ ಸಮಿತಿ ರಚನೆ ವಿಚಾರ ಚರ್ಚೆಗೆ ಬಂದಿತ್ತು. ಆದರೆ ವಿವಿಧ ಕಾರಣಗಳಿಂದ ಅದು ಜಾರಿಗೊಳ್ಳಲಿಲ್ಲ.