ಬಾಲಿವುಡ್: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿಗಳು 2024 ರ ಸೆಪ್ಟೆಂಬರ್ 8 ರಂದು ದುವಾಗೆ ಜನ್ಮ ನೀಡಿದ್ದರು. "ದುವಾ" ಎಂದರೆ ಅರೇಬಿಕ್ ಭಾಷೆಯಲ್ಲಿ 'ಪ್ರಾರ್ಥನೆ' ಎಂದರ್ಥ. ಬಾಲಿವುಡ್ನ ಈ ಜನಪ್ರಿಯ ದಂಪತಿಗಳು ತಮ್ಮ ಮಗಳ ಮುಖವನ್ನು (ಫೋಟೋವನ್ನು) ಈ ಹಿಂದೆ ಎಂದಿಗೂ ಸಾರ್ವಜನಿಕವಾಗಿ ತೋರಿಸಿರಲಿಲ್ಲ. 2025 ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಅವರು ತಮ್ಮ ಪುತ್ರಿ ದುವಾಳ ಮೊದಲ ಸ್ಪಷ್ಟ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.TRASE Block Heels Sandals For Women, Dusky Stylish & Comfortable Footwear
ಇದರ ಜೊತೆ ರಣವೀರ್ ಹಾಗೂ ದೀಪಿಕಾ ಸಂಭ್ರಮದಿಂದ ದುವಾ ಜತೆ ದೀಪಾವಳಿ ಆಚರಿಸಿದ್ದಾರೆ. ರಣವೀರ್-ದೀಪಿಕಾ ಜತೆ ದುವಾ ಕುಡ ನಗುತ್ತಾ ಫೋಟೊಕ್ಕೆ ಪೋಸ್ ಕೊಟ್ಟಿದ್ದಾರೆ. ದೀಪಿಕಾ ತಲೆಗೆ ಮಲ್ಲಿಗೆ ಮುಡಿದು, ಕೈತುಂಬಾ ಬಳೆ ತೊಟ್ಟು, ಹಣೆಗೆ ಸಿಂದೂರ ಇಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಣವೀರ್ ಸಿಂಗ್ ಬಿಳಿ ಕುರ್ತಾ-ಪೈಜಾಮ ತೊಟ್ಟಿದ್ದಾರೆ. ದೀಪಿಕಾ ಮತ್ತು ದುವಾ ಕೆಂಪು ಬಣ್ಣದ ಬಟ್ಟೆ ತೊಟ್ಟು ಟ್ವಿನ್ನಿಂಗ್‌ನಲ್ಲಿ ಮಿಂಚಿದ್ದಾರೆ. ಜತೆಗೆ ಪೂಜೆ ವೇಳೆ ದೀಪಿಕಾ ಮಗಳನ್ನು ಮಡಿಲಲ್ಲಿ ಕೂರಿಸಿ ಕೈಮುಗಿದಿದ್ದಾರೆ.ಇದನ್ನು ಓದಿ: ಶ್ವೇತಭವನದಲ್ಲಿ ಭಾರತೀಯರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ ಅಧ್ಯಕ್ಷ ಟ್ರಂಪ್
ಈ ಫೋಟೋಗಳಲ್ಲಿ ರಣವೀರ್, ದೀಪಿಕಾ ಮತ್ತು ದುವಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಮತ್ತು ದುವಾ ಒಂದೇ ಬಣ್ಣದ (ಕೆಂಪು) ಉಡುಗೆ ಧರಿಸಿ 'ಟ್ವಿನ್ನಿಂಗ್' ಮಾಡಿದ್ದಾರೆ. ಅವರ ಮಗಳ ಮುಖವನ್ನು ಮೊದಲ ಬಾರಿಗೆ ನೋಡಿ ಅಭಿಮಾನಿಗಳು ಮತ್ತು ಇತರ ಸೆಲೆಬ್ರಿಟಿಗಳು ಪ್ರೀತಿ ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ. ಮಗಳು ದುವಾಳ ಮುಖವು ದೀಪಿಕಾ ಮತ್ತು ರಣವೀರ್ ಇಬ್ಬರ ಮಿಶ್ರಣದಂತಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.