ಪತಿಯಿಂದ ಪತ್ನಿಯ ಮೇಲೆ ಕಿರುಕುಳ ನಡೆಯುವುದು ಸಾಮಾನ್ಯವಾಗಿದೆ, ಗಂಡನ ಕಿರುಕುಳಕ್ಕೆ ಬೇಸರಗೊಂಡು ಹೆಂಡತಿಯರು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆಗಳೂ ಸಹ ನೋಡಿದ್ದೇವೆ. ಆದರೆ ಹೆಂಡತಿಯ ಕಿರುಕುಳಕ್ಕೆ ಗಂಡ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಅಪರೂಪ. ಇಂತಹ ಒಂದು ದುರಂತ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ನಡೆದಿದ್ದು, ಮದುವೆಯಾದ ಕೇವಲ ಐದು ತಿಂಗಳಲ್ಲಿ ಯುವಕನ ಜೀವನ ಮುಗಿದಿದೆ.
ಬೆಂಗಳೂರು: ಹೆಂಡತಿಯ ಕಿರುಕುಳ ತಾಳಲಾರದೆ ಗಂಡನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಬಳಿ ನಡೆದಿದ್ದು, ಮೃತನಾಗಿರುವುದು ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಕುಮಾರ್. ಬಿಡದಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇವಂತ್, ಕಳೆದ ಐದು ತಿಂಗಳ ಹಿಂದಷ್ಟೇ ಮಲ್ಲಿಕಾ ಎಂಬವಳನ್ನು ವಿವಾಹ ಮಾಡಿಕೊಂಡಿದ್ದ. ಶ್ವೇತಭವನದಲ್ಲಿ ಭಾರತೀಯರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ ಅಧ್ಯಕ್ಷ ಟ್ರಂಪ್
ಮನೆಯಲ್ಲಿ ಪತ್ನಿಯಿಂದ ನಿರಂತರ ಕಿರುಕುಳಕ್ಕೆ ತುಂಬಾ ದುಃಖಪಡುತ್ತಿದ್ದ ರೇವಂತ್, ಸಾಯುವ ಮುನ್ನ ಸೆಲ್ಫಿ ವೀಡಿಯೊ ಮಾಡಿ ಪತ್ನಿಯನ್ನೇ ನನ್ನ ಸಾವಿಗೆ ಕಾರಣವೆಂದು ಆರೋಪಿಸಿದ್ದಾನೆ. ಬಿಡದಿ ರೈಲು ನಿಲ್ದಾಣದ ಬಳಿ ಈ ದುರಂತ ನಡೆದಿದ್ದು, ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯಲ್ಲಿ ವೀಡಿಯೊವನ್ನು ಪಡೆದುಕೊಂಡು ಪರಿಶೀಲಿಸಲಾಗುತ್ತಿದ್ದು, ಘಟನೆಯ ಹಿನ್ನೆಲೆಯನ್ನು ತಿಳಿಯಲು ಪೊಲೀಸ್ ತಂಡ ಚುರುಕುಗೊಳಿಸಿದೆ. Redraft this to English. and give me ash tags and search tags after camas.Bata Women’s Stylish Ballerina Flats – Trendy, Comfortable
ಸಾಯುವ ಮುನ್ನ ರೇವಂತ್ ಮಾಡಿದ ಸೆಲ್ಫಿ ವೀಡಿಯೊದಲ್ಲಿ ಅವರು ಹೀಗೆ ಹೇಳಿದ್ದಾರೆ: "ನಾನು ಇಂದು ಸಾಯಲು ಹೊರಟಿದ್ದೇನೆ, ಇದಕ್ಕೆ ಕಾರಣ ನನ್ನ ಹೆಂಡತಿ. ಅವಳು ನನಗೆ ತುಂಬಾ ಕಷ್ಟ ಕೊಡುತ್ತಿದ್ದಾಳೆ, ಜೀವನ ನಡೆಸಲು ಆಗುತ್ತಿಲ್ಲ, ಬದುಕುವುದೂ ಆಗುತ್ತಿಲ್ಲ. ನನ್ನ ಹೆಂಡತಿ ಮಲ್ಲಿಕಾಳಿಂದ ನಾನು ಅನೇಕ ರೀತಿಯ ಟಾರ್ಚರ್ಗೆ ಒಳಗಾಗಿದ್ದೇನೆ. ನನ್ನ ಸಾವಿಗೆ ಅವಳೇ ಮುಖ್ಯ ಕಾರಣ" ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.