ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಬೆಳಕಿನ ಹಬ್ಬವನ್ನು, ಶ್ವೇತಭವನದಲ್ಲಿ ದೀಪ ಬೆಳಗಿಸುವ ಮೂಲಕ ಆಚರಿಸಿದ್ದಾರೆ. ಭಾರತದ ಸಂಪ್ರದಾಯನಿಷ್ಠೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿನ ಜನತೆಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಉತ್ತಮ ಸಂಭಾಷಣೆ ನಡೆಸಿದ್ದು, ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುವ ಭರವಸೆ ನೀಡಲಾಗಿದೆ. ಪರಸ್ಪರ ವ್ಯಾಪಾರಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಿದ್ದೇವೆ ಎಂದು ತಿಳಿಸಲಾಗಿದೆ.
ರಷ್ಯಾದಿಂದ ಭಾರತವು ಹೆಚ್ಚಿನ ತೈಲ ಖರೀದಿಸುವುದಿಲ್ಲ ಎಂದು ಪ್ರಧಾನಿ ಮೋದಿಯವರು ಭರವಸೆ ನೀಡಿರುವ ಬಗ್ಗೆ ಟ್ರಂಪ್ ತಿಳಿಸಿದ್ದಾರೆ. ಕರೆ ಮುಖಾಂತರ ಮಾತನಾಡಿದ ಉಭಯ ನಾಯಕರು, ಈ ಬಗ್ಗೆ ಖುದ್ದಾಗಿ ಟ್ರಂಪ್ ಮಾಹಿತಿ ನೀಡಿದ್ದಾರೆ. ದೀಪಾವಳಿ ಶುಭಾಶಯ ತಿಳಿಸಲು ಮಾತನಾಡಿದ ಅವರು, ರಷ್ಯಾದಿಂದ ತೈಲ ಖರೀದಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಟ್ರಂಪ್ ಅವರನ್ನು ಟ್ಯಾಗ್ ಮಾಡಿ, ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
“ಧನ್ಯವಾದಗಳು ಅಧ್ಯಕ್ಷ ಟ್ರಂಪ್ ಅವರೇ, ನಿಮ್ಮ ಫೋನ್ ಕರೆ ಮತ್ತು ದೀಪಾವಳಿ ಶುಭಾಶಯಕ್ಕೆ!. ಈ ಬೆಳಕಿನ ಹಬ್ಬದಂದು, ನಮ್ಮ ಎರಡು ಮಹಾನ್ ಪ್ರಜಾಪ್ರಭುತ್ವಗಳು ಜಗತ್ತನ್ನು ಭರವಸೆಯಿಂದ ಬೆಳಗಿಸುವುದನ್ನು ಮುಂದುವರಿಸಲಿ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲಿ.” ಎಂದು ಮೋದಿ ಬರೆದುಕೊಂಡಿದ್ದಾರೆ. IIK COLLECTION Watches for Women Round Dial |Analogue Quartz Movemnet Ladies Watch|Long Battery Life|Metal Bracelet Chain Strap|Double Lock Clasp Safety Watches for Girls
ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ಇದರ ಸಂಕೇತವಾಗಿ ಟ್ರಂಪ್ ಅವರು ಶ್ವೇತಭವನದಲ್ಲಿ, ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಿಸಿದ್ದಾರೆ. ಈ ಇಬ್ಬರು ನಾಯಕರು ತಮ್ಮ ಸ್ನೇಹವನ್ನು ನೆನೆದು ಪರಸ್ಪರ ಶುಭ ಹಾರೈಸಿಕೊಂಡಿದ್ದಾರೆ. ಜಾಗತಿಕ ವ್ಯಾಪಾರ ಸುಂಕ ನೀತಿಗಳ ನಡುವಲ್ಲಿಯೂ, ಫೋನ್ ಸಂಭಾಷನೆ ನಡೆಸಿದ್ದು, ಅಂತರರಾಷ್ಟ್ರೀಯ ಸುದ್ದಿಯಲ್ಲಿ ಪ್ರಸ್ತಾಪಗೊಳ್ಳುತ್ತಲ್ಲಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಗುಡ್‌ನ್ಯೂಸ್..ಅಮೆರಿಕ ಜೊತೆ ಹೊಸ ವ್ಯಾಪಾರ ಒಪ್ಪಂದ, ಸುಂಕದ ಭಾರವೂ ಇಳಿಕೆ!