Skip to main content
ವಿಡಿಯೋ
1/3
cinema

ಬಿಗ್‌ಬಾಸ್‌ ಅಲ್ಲ..ಸೂರಜ್‌ ಸಿಂಗ್‌ಗೋಸ್ಕರ ಶುರುವಾಯ್ತು ಪೈಪೋಟಿ! ಒಬ್ಬನಿಗಾಗಿ ಇಬ್ಬರು, ಗೆಲ್ಲೋರ್ಯಾರು?

By Ram Chethan
ಬಿಗ್‌ಬಾಸ್‌ ಅಲ್ಲ..ಸೂರಜ್‌ ಸಿಂಗ್‌ಗೋಸ್ಕರ ಶುರುವಾಯ್ತು ಪೈಪೋಟಿ! ಒಬ್ಬನಿಗಾಗಿ ಇಬ್ಬರು, ಗೆಲ್ಲೋರ್ಯಾರು?

ಕೆನಡಾದ ಸೂರಜ್ ಸಿಂಗ್ ಅವರ ಹ್ಯಾಂಡ್ಸಮ್ ಲುಕ್‌ನಿಂದ ಮನೆಮಂದಿಯ ಮನಸೆಳೆಯುತ್ತಿದ್ದಾರೆ. ಈಗ ರಾಶಿಕಾ ಮತ್ತು ಸ್ಪಂದನಾ ಇಬ್ಬರೂ ಅವರ ಮೇಲೆ ಕ್ರಶ್ ಹೊಂದಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರೇಮಕಥೆಗಳು ಹೊಸದೇನಲ್ಲ. ಕೆಲವು ಯಶಸ್ವಿಯಾದರೆ, ಇನ್ನು ಕೆಲವು ಕೇವಲ ಜನಪ್ರಿಯತೆ ಗಳಿಸಲು ಮಾತ್ರ ಸೀಮಿತವಾಗುತ್ತವೆ. ಈ ಬಾರಿ ಬಿಗ್ ಬಾಸ್ ಆರಂಭವಾಗಿ ಒಂದು ತಿಂಗಳಾದರೂ ಯಾವುದೇ ಪ್ರೇಮಕಥೆ ಹುಟ್ಟಿಕೊಂಡಿರಲಿಲ್ಲ. ಆದರೆ, ಇದೀಗ ಹೊಸ ಲವ್‌ ಸ್ಟೋರಿ ಶುರುವಾಗುವ ಮುನ್ಸೂಚನೆ ಲಭಿಸಿದೆ.

ಬಿಗ್ ಬಾಸ್ ಮನೆಗೆ ಸೂರಜ್ ಸಿಂಗ್ ಅವರ ಆಗಮನದೊಂದಿಗೆ ಈ ಹೊಸ ಕಥೆ ಶುರುವಾಗಿದೆ. ಕೆನಡಾದಿಂದ ಬಂದಿರುವ ಸೂರಜ್, ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಮನೆಮಂದಿಯ ಗಮನ ಸೆಳೆದಿದ್ದಾರೆ. ಸದ್ಯ ಸ್ಪಂದನಾ ಮತ್ತು ರಾಶಿಕಾ ಇಬ್ಬರೂ ಸೂರಜ್ ಕಡೆಗೆ ಆಕರ್ಷಿತರಾಗಿದ್ದಾರೆ ಎನ್ನಲಾಗಿದೆ. ಈ ವಿಷಯ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.Symbol Premium Mens Smart Casual Fully Lined Mild Winter Jacket (Regular Fit)

ಸೂರಜ್ ಮನೆಯೊಳಗೆ ಬಂದ ಮೊದಲ ದಿನವೇ ರಾಶಿಕಾ ಅವರಿಗೆ ಗುಲಾಬಿ ನೀಡಿ, "ಅವರು ಕ್ಯೂಟ್ ಆಗಿ ಕಾಣಿಸುತ್ತಾರೆ" ಎಂದಿದ್ದರು. ಅಂದಿನಿಂದ ರಾಶಿಕಾ ಸೂರಜ್ ಅವರನ್ನು ನೋಡಿದಾಗಲೆಲ್ಲಾ ನಾಚಿಕೊಳ್ಳುತ್ತಿದ್ದಾರೆ. ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆ ರಾಶಿಕಾ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಅಶ್ವಿನಿ ಗೌಡ ಕೂಡ ಸೂರಜ್ ಬಗ್ಗೆ ತಮ್ಮ ಆಕರ್ಷಣೆಯನ್ನು ವ್ಯಕ್ತಪಡಿಸಿದ್ದಾರೆ. "ನಾನು ಬಿಗ್ ಬಾಸ್ ಮನೆಗೆ ಬರುವ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ರೀಲ್ಸ್ ನೋಡಿದ್ದೆ. ಹ್ಯಾಂಡ್ಸಮ್ ಆಗಿದ್ದಾನೆ ಅಂತ ಅವರ ಪ್ರೊಫೈಲ್ ಚೆಕ್ ಮಾಡಿದ್ದೆ. ಇಲ್ಲಿ ಅವರನ್ನು ನೋಡಿದ ಮೇಲೆ ಒಂದು ಫ್ಲ್ಯಾಶ್ ಆಯ್ತು," ಎಂದು ಅಶ್ವಿನಿ ಹೇಳಿದ್ದಾರೆ.ಕಾಂತಾರ ಚಾಪ್ಟರ್ 1’ ವಿಶ್ವದಾದ್ಯಂತ ಅಬ್ಬರ...20 ದಿನಗಳಲ್ಲಿ 750 ಕೋಟಿ ಗಳಿಕೆ! ಇಂಗ್ಲಿಷ್ ಡಬ್ಬಿಂಗ್ ಜೊತೆ ಹೊಸ ರೆಕಾರ್ಡ್ ಗುರಿ

ನಂತರ, ಅಶ್ವಿನಿ ರಾಶಿಕಾ ಮತ್ತು ಸ್ಪಂದನಾ ಬಳಿ "ಸೂರಜ್ ಯಾರಿಗೆ ಇಷ್ಟ?" ಎಂದು ಪ್ರಶ್ನಿಸಿದರು. ಅದಕ್ಕೆ "ಇಬ್ಬರೂ ಲಿಸ್ಟ್‌ನಲ್ಲಿ ಇದ್ದಾರೆ" ಎಂಬ ಉತ್ತರ ಸಿಕ್ಕಿದೆ. ಈ ಕುರಿತು ಅಶ್ವಿನಿ, "ಇಷ್ಟು ದಿನ ಲವ್ ಟ್ರ್ಯಾಕ್ ಮಿಸ್ ಆಗುತ್ತಿತ್ತು" ಎಂದಿದ್ದಾರೆ.

ಜನಪ್ರಿಯತೆ ಗಳಿಸಲು ಪ್ರೇಮಕಥೆಗಳು ಸಹಾಯಕವಾಗುವುದರಿಂದ, ರಾಶಿಕಾ ಮತ್ತು ಸ್ಪಂದನಾ ಕೂಡ ಇದೇ ಕಾರಣಕ್ಕೆ ಸೂರಜ್ ಕಡೆಗೆ ಆಕರ್ಷಿತರಾಗಿರಬಹುದು ಎಂದು ಊಹಿಸಲಾಗುತ್ತಿದೆ. ಹೆಚ್ಚಿನ ಸಿನಿಮಾ ಸುದ್ದಿಗಳಿಗಾಗಿ ನಮ್ಮ ಪುಟಕ್ಕೆ ಭೇಟಿ ನೀಡಿ.