Skip to main content
ವಿಡಿಯೋ
1/2
sports

ಮೆಲ್ಬೋರ್ನ್ ಪವಾಡ: ಪಾಕ್‌ ವಿರುದ್ಧ ವಿರಾಟ್ ರ ಅಮೋಘ 82* ರನ್‌ ಆಟಕ್ಕೆ 3 ವರ್ಷ; ನೆನಪಿದೆಯಾ 'ಶತಮಾನದ ಶಾಟ್'!

By Gireesh Vasishta
ಮೆಲ್ಬೋರ್ನ್ ಪವಾಡ: ಪಾಕ್‌ ವಿರುದ್ಧ ವಿರಾಟ್ ರ ಅಮೋಘ 82* ರನ್‌ ಆಟಕ್ಕೆ 3 ವರ್ಷ; ನೆನಪಿದೆಯಾ 'ಶತಮಾನದ ಶಾಟ್'!

ಪಾಕಿಸ್ತಾನವು ಭಾರತಕ್ಕೆ 160 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು. ಆದರೆ, ಭಾರತದ ಇನ್ನಿಂಗ್ಸ್ ಆರಂಭದಲ್ಲೇ ಕುಸಿತ ಕಂಡು, ಕೇವಲ 31 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಹಾರ್ದಿಕ್ ಪಾಂಡ್ಯ - ಕೊಹ್ಲಿ40 ರನ್‌ಗಳ ಜೊತೆಯಾಟ ಆಡಿದರು.

ಇಂದಿಗೆ (ಅಕ್ಟೋಬರ್ 23, 2025) ಕ್ರಿಕೆಟ್ ಇತಿಹಾಸದ ಶ್ರೇಷ್ಠ ಇನ್ನಿಂಗ್ಸ್ಗಳಲ್ಲಿ ಒಂದಾದ, ವಿರಾಟ್ ಕೊಹ್ಲಿಯವರ ಅಜೇಯ 82 ರನ್ಗಳ (53 ಎಸೆತ) ಪಂದ್ಯಕ್ಕೆ ಮೂರು ವರ್ಷಗಳು ತುಂಬಿದೆ. 2022 ಟಿ20 ವಿಶ್ವಕಪ್ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸ್ಮರಣೀಯ ಗೆಲುವನ್ನು ತಂದುಕೊಟ್ಟ ದಿನವನ್ನು ಇಂದಿಗೂ 'ದೀಪಾವಳಿ ಪವಾಡ' ಎಂದೇ ಸ್ಮರಿಸಲಾಗುತ್ತದೆ.

ಪಂದ್ಯದ ಸಾರಾಂಶ ಮತ್ತು ಇತಿಹಾಸ ಸೃಷ್ಟಿ;

ಪಾಕಿಸ್ತಾನವು ಭಾರತಕ್ಕೆ 160 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು. ಆದರೆ, ಭಾರತದ ಇನ್ನಿಂಗ್ಸ್ ಆರಂಭದಲ್ಲೇ ಕುಸಿತ ಕಂಡು, ಕೇವಲ 31 ರನ್ಗಳಿಗೆ 4 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಹಾರ್ದಿಕ್ ಪಾಂಡ್ಯ - ಕೊಹ್ಲಿ40 ರನ್‌ಗಳ ಜೊತೆಯಾಟ ಆಡಿದರು.BULLMER Striped Textured Printed Polo Neck Fullsleeve T-Shirt with Rib for Men

ರಾಫ್ ವಿರುದ್ಧ ಸಿಕ್ಸರ್ಗಳು: ಅಂತಿಮ {8 ಎಸೆತಗಳಲ್ಲಿ 28 ರನ್ಗಳ ಅಗತ್ಯವಿದ್ದಾಗ, ವಿರಾಟ್ ಕೊಹ್ಲಿ, ಹ್ಯಾರಿಸ್ ರಾಫ್ ಅವರ ಎಸೆತಗಳಿಗೆ ಸತತ ಎರಡು ಅಮೋಘ ಸಿಕ್ಸರ್ಗಳನ್ನು ಸಿಡಿಸಿದರು. ಅದರಲ್ಲೂ, ರಾಫ್ ಅವರ ಶರವೇಗದ ಎಸೆತಕ್ಕೆ ಕೊಹ್ಲಿ ಬಾರಿಸಿದ ನೇರವಾದ ಸಿಕ್ಸರ್ ಅನ್ನು ಕ್ರಿಕೆಟ್ ಜಗತ್ತು 'ಶತಮಾನದ ಶಾಟ್' ಎಂದು ಬಣ್ಣಿಸಿತು.ಇದನ್ನು ಓದಿ; 150 ವರ್ಷಗಳ ಸಮಸ್ಯೆಯನ್ನು 2 ಗಂಟೆಗಳಲ್ಲಿ ಲೆಕ್ಕಾಚಾರ ಮಾಡಿ ಸಾಬೀತುಪಡಿಸಿದ ಗೂಗಲ್‌ನ ಕ್ವಾಂಟಮ್ ಚಿಪ್; ಏನೀ ಸಮಸ್ಯೆ?

ಅಂತಿಮ ಓವರ್ ರೋಚಕತೆ: 16 ರನ್ ಬೇಕಾಗಿದ್ದ ಅಂತಿಮ ಓವರ್ನಲ್ಲಿ, ಮೊಹಮ್ಮದ್ ನವಾಜ್ ಎಸೆದ ನೋ-ಬಾಲ್ಗೆ ಸಿಕ್ಸ್ ಸಿಡಿಸಿ, ನಂತರ ರವಿಚಂದ್ರನ್ ಅಶ್ವಿನ್ ಕೂಲ್ ಆಗಿ ಸಿಂಗಲ್ ಪಡೆಯುವ ಮೂಲಕ ಭಾರತಕ್ಕೆ ಕೊನೆಯ ಎಸೆತದಲ್ಲಿ ಗೆಲುವು ತಂದುಕೊಟ್ಟರು. ಹೀಗೆ ಇನ್ನಿಂಗ್ಸ್ ಒತ್ತಡದಲ್ಲಿ ವಿರಾಟ್ ಕೊಹ್ಲಿಯವರ ಧೈರ್ಯ, ತಾಂತ್ರಿಕ ಕೌಶಲ್ಯ ಮತ್ತು ಅದ್ಭುತ ಆಟದ ಬುದ್ಧಿವಂತಿಕೆಗೆ ಸಾಕ್ಷಿಯಾಯಿತು. ಇದು ಅವರ ವೃತ್ತಿಜೀವನದ ಶ್ರೇಷ್ಠ T20 ಇನ್ನಿಂಗ್ಸ್ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.