Skip to main content
ವಿಡಿಯೋ
1/3
cinema

1997ರಿಂದ ಇಂದು: ಭೂಮಿ ತಾಯಿಯಿಂದ ಬಂಗಾರಮ್ಮ ವರೆಗೆ – ಮಂಜು ಭಾಷಿಣಿಯ ಯಶಸ್ಸಿನ ದಾರಿ..!

By Ram Chethan
1997ರಿಂದ ಇಂದು: ಭೂಮಿ ತಾಯಿಯಿಂದ ಬಂಗಾರಮ್ಮ ವರೆಗೆ – ಮಂಜು ಭಾಷಿಣಿಯ ಯಶಸ್ಸಿನ ದಾರಿ..!

‘ಭೂಮಿ ತಾಯಿ’, ‘ಸಿಲ್ಲಿ ಲಲ್ಲಿ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಿಂದ ಮಂಜು ಭಾಷಿಣಿ ಕನ್ನಡ ಟಿವಿ ಮನರಂಜನೆಯಲ್ಲಿ ತಮ್ಮ ಸ್ಥಾನ ದೃಢಪಡಿಸಿದ್ದಾರೆ. ಈಗ ಅವರು ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿಯ ಮೂಲಕ ಮುಂದಿನ ತಲೆಮಾರಿಗೆ ಪ್ರೇರಣೆ ನೀಡುತ್ತಿದ್ದಾರೆ.

ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನಲ್ಲಿ 'ಬಂಗಾರಮ್ಮ' ಪಾತ್ರದ ಮೂಲಕ ಮನೆಮಾತಾಗಿರುವ ನಟಿ ಮಂಜು ಭಾಷಿಣಿ, ಇದೀಗ ಧಾರಾವಾಹಿಗೆ ವಿದಾಯ ಹೇಳುವ ಮೂಲಕ ವೀಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. 'ಬಿಗ್ ಬಾಸ್' ರಿಯಾಲಿಟಿ ಶೋ ಕಾರಣದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಮಂಜು ಭಾಷಿಣಿ ಎಂಬ ಹೆಸರು ಹಲವರಿಗೆ ಅಷ್ಟಾಗಿ ಪರಿಚಿತವಿರಲಿಲ್ಲ. ಆದರೆ, 'ಬಂಗಾರಮ್ಮ' ಎಂದೇ ಅವರು ಪ್ರಸಿದ್ಧಿ ಪಡೆದಿದ್ದರು. ಈಗ 'ಬಿಗ್ ಬಾಸ್' ವೇದಿಕೆಯ ಮೂಲಕ ಅವರ ಹೆಸರು ಎಲ್ಲೆಡೆ ಚಿರಪರಿಚಿತವಾಗಿದೆ.

ಮಂಜು ಭಾಷಿಣಿ ಅವರ ಪ್ರಕಾರ, ಅವರಿಗೆ 'ಬಿಗ್ ಬಾಸ್' ಆಫರ್ ಬಹಳ ಹಿಂದೆಯೇ ಬಂದಿತ್ತು. ಆದರೆ, "ಎಲ್ಲೋ ಏನೋ ಸಿಗುತ್ತದೆ ಎಂದು ಇನ್ನೇನನ್ನೋ ಕಳೆದುಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಸೀರಿಯಲ್ ಬಿಟ್ಟು ಹೋಗಿರಲಿಲ್ಲ" ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.Titan Workwear Quartz Analog Hunter Green Dial Olive Green Leather Strap Watch for Men - NT1802NL02

ಸುಮಾರು ನಾಲ್ಕು ವರ್ಷಗಳಿಂದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕೆಲಸ ಮಾಡಿರುವ ಅವರು, ಸೀರಿಯಲ್ ಅಂತ್ಯಗೊಳ್ಳುವ ಹಂತದಲ್ಲಿ ಬಿಗ್ ಬಾಸ್‌ಗೆ ತೆರಳಲು ನಿರ್ಧರಿಸಿದ್ದಾರೆ. "ಈಗ 'ಪುಟ್ಟಕ್ಕನ ಮಕ್ಕಳು' ಮುಗಿಯುತ್ತದೆ ಎಂದು ಹೇಳಿದ್ದರು. ಹಾಗಾಗಿ, ಸೀರಿಯಲ್ ಮುಗಿಯಲು ಒಂದು ತಿಂಗಳು ಇರುವಾಗ ಬಿಟ್ಟರೆ ಯಾರಿಗೂ ಸಮಸ್ಯೆ ಆಗಲ್ಲ. ನನಗೂ ನಾನು ಮೋಸ ಮಾಡಿಲ್ಲ ಎನ್ನುವ ನೆಮ್ಮದಿ ಇರುತ್ತದೆ. ಅದಕ್ಕಾಗಿಯೇ ಎಲ್ಲರಿಗೂ ಹೇಳಿ ಬಿಟ್ಟುಬಂದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಓಝೆಂಪಿಕ್ ಇಂಜೆಕ್ಷನ್ ಆರೋಪಕ್ಕೆ ಕರಣ್ ಜೋಹರ್ ಸ್ಪಷ್ಟನೆ! ‘ನಾನು ದುರ್ಬಲನಾಗಿಲ್ಲ, ಶಿಸ್ತುಬದ್ಧನಾಗಿದ್ದೇನೆ’

'ಬಿಗ್ ಬಾಸ್' ಮನೆಯ ಪ್ರವೇಶಕ್ಕಾಗಿ 2-3 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದ ಬಗ್ಗೆ ಮಂಜು ಭಾಷಿಣಿ ಮಾತನಾಡಿದ್ದಾರೆ. ಆದರೆ, ಮೂರನೇ ವಾರದಲ್ಲಿಯೇ ಎಲಿಮಿನೇಟ್ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಜು ಭಾಷಿಣಿ ಅವರ ವೃತ್ತಿಜೀವನ 1997ರಲ್ಲಿ ತೆರೆಕಂಡ ಪ್ರಶಸ್ತಿ ವಿಜೇತ ಚಲನಚಿತ್ರ 'ಭೂಮಿ ತಾಯಿ'ಯ ಮೂಲಕ ಆರಂಭವಾಯಿತು. ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ 'ಸಮಾಜಸೇವಕಿ ಲಲಿತಾಂಬ' ಪಾತ್ರದ ಮೂಲಕ ಅವರು ಹೆಚ್ಚು ಪ್ರಸಿದ್ಧಿ ಪಡೆದರು.

ನಟನೆಯ ಜೊತೆಗೆ, ಮಂಜು ಭಾಷಿಣಿ ಅವರು 'ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿ'ಯನ್ನು ಸಹ ಯಶಸ್ವಿಯಾಗಿ ನಡೆಸುತ್ತಿದ್ದಾರೆ.