Skip to main content
ವಿಡಿಯೋ
1/2
general

ಬೆಂಗಳೂರಿಗೆ ಬರುತ್ತಿದ್ದ ಬಸ್‌ ಹೊತ್ತಿ ಉರಿದು 20ಕ್ಕೂ ಅಧಿಕ ಪ್ರಯಾಣಿಕರು ದಹನ..!

By Vinutha U
ಬೆಂಗಳೂರಿಗೆ ಬರುತ್ತಿದ್ದ ಬಸ್‌ ಹೊತ್ತಿ ಉರಿದು 20ಕ್ಕೂ ಅಧಿಕ ಪ್ರಯಾಣಿಕರು ದಹನ..!

ಈ ದುರಂತ ಪ್ರಯಾಣಿಕರ ಸುರಕ್ಷತೆಗೆ ಗಮನ ಹರಿಸುವಂತೆ ಸಾರ್ವಜನಿಕರಿಂದ ಒತ್ತಡ ಹೆಚ್ಚಾಗಿದೆ. ಪೊಲೀಸ್ ತಂಡ ತನಿಖೆಯಲ್ಲಿ ತೊಡಗಿದ್ದು, ವರದಿಯನ್ನು ಸಿದ್ಧಪಡಿಸುತ್ತಿದೆ.

ಕರ್ನೂಲು ಅ.24: ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಕರ್ನೂಲು ಹೊರಭಾಗದ ಚಿನ್ನಟಕೂರು ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ, 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿ ಮೃತರಾಗಿದ್ದಾರೆ. ಬಸ್‌ನಲ್ಲಿ 40ಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಚಾಲಕರು ಸೇರಿದಂತೆ ಕೆಲವರು ಮಾತ್ರ ಪ್ರಾಣಾಪಾಯದಿಂದ ಉಳಿದಿದ್ದಾರೆ.

ತಡರಾತ್ರಿ ಚಿನ್ನಟಕೂರು ಪ್ರದೇಶದಲ್ಲಿ ಈ ಭಯಂಕರ ಅಪಘಾತ ಸಂಭವಿಸಿದೆ.

ಬಸ್‌ಗೆ ಡಿಕ್ಕಿ ಹೊಡೆದ ಬೈಕ್ ಕೆಳಗಡೆ ಸಿಲುಕಿ, ಸುಮಾರು 300 ಮೀಟರ್ ದೂರ ಎಳೆದೊಯ್ಯಲ್ಪಟ್ಟಿದೆ. ಈ ಕಾರಣದಿಂದ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಹಾನಿಯಾಗಿ ತೀವ್ರ ಬೆಂಕಿ ಹತ್ತಿಕೊಂಡಿದೆ. ಆರಂಭದಲ್ಲಿ ಸ್ವಲ್ಪ ಬೆಂಕಿ ಎಂದು ಚಾಲಕರಿಗೆ ತಿಳಿದಿದ್ದರೂ, ಕ್ಷಣದಲ್ಲಿ ಸಂಪೂರ್ಣ ಬಸ್ ಉರಿಯುತ್ತಿತ್ತು. ಕೆಲವರು ಉಳಿದರೂ ಬಹುತೇಕರು ಬೆಂಕಿಯ ತಾಣಕ್ಕೆ ಬೆಂಕಿ ಹಬ್ಬುತ್ತಿದ್ದಂತೆ ಚಾಲಕರಿಬ್ಬರು ನಿದ್ದೆಯಲ್ಲಿರುವ ಪ್ರಯಾಣಿಕರನ್ನು ಎಚ್ಚರಗೊಳಿಸಲು ಮುಂದಾಗಿದ್ದಾರೆ. ಕೆಲವರು ಕಿಟಕಿಗಳ ಮೂಲಕ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ, ಚಾಲಕರಿಬ್ಬರೂ ಸುರಕ್ಷಿತರಾಗಿದ್ದಾರೆ. ಆದರೆ, ಬಹುತೇಕ ಪ್ರಯಾಣಿಕರು ಬೆಂಕಿಯಲ್ಲೇ ಸಿಲುಕಿ ಸಜೀವ ದಹನವಾಗಿದ್ದಾರೆ. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ಶೇ.10ರಷ್ಟು ಬಸ್ ಸುಟ್ಟುಕರಕಲಾಗಿದ್ದು, 11 ಶವಗಳನ್ನು ಹೊರತೆಗೆದಿದ್ದಾರೆ, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಚಾಲಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ. ಈ ದುರಂತ ಪ್ರಯಾಣಿಕರ ಸುರಕ್ಷತೆಗೆ ಗಮನ ಹರಿಸುವಂತೆ ಸಾರ್ವಜನಿಕರಿಂದ ಒತ್ತಡ ಹೆಚ್ಚಾಗಿದೆ. ಪೊಲೀಸ್ ತಂಡ ತನಿಖೆಯಲ್ಲಿ ತೊಡಗಿದ್ದು, ವರದಿಯನ್ನು ಸಿದ್ಧಪಡಿಸುತ್ತಿದೆ.