ರಷ್ಯಾದ ಮಿಲಿಟರಿಯೊಂದಿಗೆ ಸಂಪರ್ಕ ಹೊಂದಿರುವ ಕಾರಣಕ್ಕಾಗಿ, ಯುರೋಪಿಯನ್ ಯೂನಿಯನ್ (ಇಯು) ಭಾರತದ ಮೂರು ಕಂಪನಿಗಳು ಸೇರಿದಂತೆ 45 ಕಂಪನಿಗಳ ವಿರುದ್ದವಾಗಿ ನಿರ್ಬಂಧ ಹೇರಿದೆ ಎಂದು ತಿಳಿದುಬಂದಿದೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಒತ್ತಡ ಹೇರಲು EU ತೆಗೆದುಕೊಂಡಿರುವ 19ನೇ ನಿರ್ಬಂಧಗಳ ಪ್ಯಾಕೇಜ್‌ನ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಯೂರೋಪಿಯನ್ ಒಕ್ಕೂಟದ ಈ ಕ್ರಮಕ್ಕೆ ಭಾರತೀಯ ಅಧಿಕಾರಿಗಳಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಭಾರತೀಯ ಘಟಕಗಳಾದ ಏರೋಟ್ರಸ್ಟ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್, ಅಸೆಂಡ್ ಏವಿಯೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೀ ಎಂಟರ್‌ಪ್ರೈಸಸ್ ಎಂದು ಗುರುತಿಸಲಾಗಿದೆ.
ಇವುಗಳಲ್ಲಿ ಕಂಪ್ಯೂಟರ್ ಸಂಖ್ಯಾತ್ಮಕ ನಿಯಂತ್ರಣ (CNC) ಯಂತ್ರೋಪಕರಣಗಳು, ಮೈಕ್ರೋಎಲೆಕ್ಟ್ರಾನಿಕ್ಸ್, ಮಾನವರಹಿತ ವೈಮಾನಿಕ ವಾಹನಗಳು (UAV ಗಳು) ಮತ್ತು ರಷ್ಯಾದ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಬಳಸಲಾಗುವ ಇತರ ಸುಧಾರಿತ ಘಟಕಗಳು ಸೇರಿವೆ ಎನ್ನಲಾಗಿದೆ. WISHKEY 3 in 1 Night Lamp USB Chargeable Light for Bedroom, Night Lamp for Kids with Pencil Sharpener & Pen Holder Stand Girls & Boys, Plastic Design for Child's Room (Multicolor)
"ಈ ಘಟಕಗಳು ದ್ವಿ-ಬಳಕೆಯ ಸರಕುಗಳಿಗೆ ಸಂಬಂಧಿಸಿದಂತೆ ಕಠಿಣ ರಫ್ತು ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ, ಜೊತೆಗೆ ರಷ್ಯಾದ ರಕ್ಷಣಾ ಕ್ಷೇತ್ರದ ತಾಂತ್ರಿಕ ವರ್ಧನೆಗೆ ಕೊಡುಗೆ ನೀಡುವ ವಸ್ತುಗಳಗೂ ಸಹ ಇವೆ" ಎಂದು ಹೇಳಲಾಗಿದೆ. EU ಪ್ರಕಾರ, ನಿರ್ಬಂಧಿಸಿದ ಪಟ್ಟಿಯಲ್ಲಿನ 45 ಘಟಕಗಳಲ್ಲಿ, 17 ರಷ್ಯಾದ ಹೊರಗೆ ನೆಲೆಗೊಂಡಿವೆ. 12 ಚೀನಾದಲ್ಲಿ (ಹಾಂಗ್ ಕಾಂಗ್ ಸೇರಿದಂತೆ), ಮೂರು ಭಾರತದಲ್ಲಿ ಮತ್ತು ಎರಡು ಥೈಲ್ಯಾಂಡ್‌ನಲ್ಲಿವೆ ಎಂಬ ಮಾಹಿತಿ ತಿಳಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಶವ ಹೂತ ಪ್ರಕರಣ: ಎಸ್‌ಐಟಿ ವರದಿ ಶೀಘ್ರದಲ್ಲೇ!?