ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಗೆ ಕೇಂದ್ರ ತನಿಖಾ ದಳ (ಸಿಬಿಐ) ಕ್ಲೀನ್‌ಚಿಟ್ ನೀಡಿದೆ. ಸುಶಾಂತ್ ಅವರ ಸಾವು ಆತ್ಮಹತ್ಯೆಯೇ ಹೊರತು ಅದಕ್ಕೆ ಯಾವುದೇ ಪ್ರಚೋದನೆ ಇಲ್ಲ ಎಂದು ಸಿಬಿಐ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಈ ತನಿಖೆ ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ.
ಸುಶಾಂತ್ ಸಿಂಗ್ ರಜಪೂತ್ ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. 'ಪಿ.ಕೆ.', 'ಚಿಚೋರೆ', 'ಎಂ. ಎಸ್. ಧೋನಿ: ಅನ್ ಟೋಲ್ಡ್ ಸ್ಟೋರಿ' ಮುಂತಾದ ಚಿತ್ರಗಳು ಹಾಗೂ 'ಪವಿತ್ರ ರಿಶ್ತಾ', 'ಝಲಕ್ ದಿಖ್ಲಾಜಾ'ನಂತಹ ಟಿವಿ ಕಾರ್ಯಕ್ರಮಗಳಿಂದ ಅವರು ಜನಪ್ರಿಯರಾಗಿದ್ದರು. 2020ರ ಜೂನ್ 14ರಂದು ಅವರು ತಮ್ಮ ಬಾಂದ್ರಾದ ಫ್ಲಾಟ್‌ನಲ್ಲಿ ನಿಧನರಾಗಿದ್ದರು.Titan Edge Analog Black Dial Men's Watch NM1595NL03/NN1595NL03
ಸುಶಾಂತ್ ಅವರ ಫ್ಲಾಟ್‌ನ ಮಲಗುವ ಕೋಣೆಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರ ತನಿಖೆಯಲ್ಲಿ ಯಾವುದೇ ಕೊಲೆಯ ಅಂಶ ಕಂಡುಬಂದಿರಲಿಲ್ಲ. ಆದರೆ ಸುಶಾಂತ್ ತಂದೆ ಕೆ.ಕೆ. ಸಿಂಗ್ ಅವರು ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿ, ಆಕೆಯ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಿದ್ದರು.
ಅದೇ ರೀತಿ, ರಿಯಾ ಚಕ್ರವರ್ತಿ ಕೂಡ ಸುಶಾಂತ್ ಸಹೋದರಿಯರ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಸಿಬಿಐ, ರಿಯಾಗೆ ಕ್ಲೀನ್‌ಚಿಟ್ ನೀಡಿದೆ. ರಿಯಾ ಮತ್ತು ಸುಶಾಂತ್ ಏಪ್ರಿಲ್ 2019 ರಿಂದ ಜೂನ್ 2020 ರವರೆಗೆ ಲಿವ್-ಇನ್ ಸಂಬಂಧದಲ್ಲಿದ್ದರು.ಇದನ್ನು ಓದಿ:ರಘು ಬಿಗ್ ಬಾಸ್ ಮನೆಯ ಹೊಸ ಕ್ಯಾಪ್ಟನ್ ...ಹೊಸ ಶಕ್ತಿ ಮತ್ತು ಉತ್ಸಾಹ
ಈ ಅವಧಿಯಲ್ಲಿ ಸುಶಾಂತ್ ರಿಯಾಳಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಆಕೆಯನ್ನು ತಮ್ಮ ಕುಟುಂಬದ ಭಾಗವೆಂದೇ ಪರಿಚಯಿಸುತ್ತಿದ್ದರು. ಆದರೆ ರಿಯಾ ಹಣಕಾಸಿನ ವಂಚನೆ ಮಾಡಿದ್ದಾರೆ, ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸುಶಾಂತ್ ತಂದೆ ದೂರು ನೀಡಿದ್ದರು.
ವರದಿಗಳ ಪ್ರಕಾರ, ಸುಶಾಂತ್ ನಿಧನರಾಗುವುದಕ್ಕೆ ಆರು ದಿನಗಳ ಮೊದಲು, ಅಂದರೆ ಜೂನ್ 8ರಂದೇ ರಿಯಾ ಮತ್ತು ಅವರ ಸಹೋದರ ಶೋವಿಕ್ ಬಾಂದ್ರಾದ ಫ್ಲಾಟ್ ತೊರೆದಿದ್ದರು. ಹಣಕಾಸಿನ ಯಾವುದೇ ಅವ್ಯವಹಾರ ನಡೆದಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಶಾಂತ್ ಕುಟುಂಬವು ರಿಯಾ ವಿರುದ್ಧ ಕಳ್ಳತನದ ಆರೋಪ ಮಾಡಿದ್ದನ್ನು ಸಹ ತನಿಖೆ ನಡೆಸಲಾಗಿದೆ.
ಆ ತನಿಖೆಯಲ್ಲಿ, ರಿಯಾ ಕೇವಲ ಸುಶಾಂತ್ ನೀಡಿದ ಲ್ಯಾಪ್‌ಟಾಪ್ ಮತ್ತು ಆಪಲ್ ವಾಚ್ ಅನ್ನು ಮಾತ್ರ ತೆಗೆದುಕೊಂಡಿದ್ದರು. ಬೇರೆ ಯಾವುದೇ ವಸ್ತುಗಳನ್ನು ತೆಗೆದುಕೊಂಡಿರಲಿಲ್ಲ ಎಂಬುದು ತಿಳಿದುಬಂದಿದೆ. ಸುಶಾಂತ್ ತಮ್ಮ ಸ್ವಂತ ಇಚ್ಛೆಯಿಂದ ರಿಯಾಳಿಗಾಗಿ ಹಣ ಖರ್ಚು ಮಾಡಿದ್ದು, ಅದು ಕಳ್ಳತನವಾಗಲಾರದು ಎಂದು ಸಿಬಿಐ ಹೇಳಿದೆ.