Skip to main content
ವಿಡಿಯೋ
1/2
politics

ಕಲಬುರಗಿ ಮತದಾರರ ಪಟ್ಟಿಯಲ್ಲಿ ಅಕ್ರಮ? ಎಸ್‌ಐಟಿ ಹೆಗಲಿಗೆ ತನಿಖೆ!

By Gireesh Vasishta
ಕಲಬುರಗಿ ಮತದಾರರ ಪಟ್ಟಿಯಲ್ಲಿ ಅಕ್ರಮ? ಎಸ್‌ಐಟಿ ಹೆಗಲಿಗೆ ತನಿಖೆ!

ಆಳಂದ ಪ್ರಕರಣದ ದಾಖಲೆಗಳಲ್ಲೇ ಕಲಬುರಗಿ ಉತ್ತರ-ದಕ್ಷಿಣ ಕ್ಷೇತ್ರಗಳ ಅಲ್ಪಸಂಖ್ಯಾತ ಮತದಾರರ ವಿವರಗಳು ಪತ್ತೆಯಾಗಿದ್ದು, ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸಲು ಅಕ್ರಮ ಪ್ರಯತ್ನಗಳ ಶಂಕೆ ಮೂಡಿಸಿದೆ. ಎಸ್‌ಐಟಿ ತನಿಖೆ ಮುಂದುವರಿಯುತ್ತಿದೆ.

ಆಳಂದ ಮತದಾರರ ಪಟ್ಟಿ ಅಕ್ರಮ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಕಲಬುರಗಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಅಕ್ರಮಗಳ ಶಂಕೆಯನ್ನು ವ್ಯಕ್ತಪಡಿಸಿದೆ. ದಾಳಿಯ ವೇಳೆ ದೊರೆತ ದಾಖಲೆಗಳಲ್ಲಿ ಎರಡೂ ಕ್ಷೇತ್ರಗಳ ಅಲ್ಪಸಂಖ್ಯಾತ ಮತದಾರರ ವಿವರಗಳು ಪತ್ತೆಯಾಗಿವೆ.YOHO Bubbles Men Ortho slippers | Soft comfortable and stylish flip flop slippers for Men

 

ಬೆಂಗಳೂರಿನಲ್ಲಿ (.24) ಮಾಹಿತಿ ಹೊರಬಿದ್ದಿದ್ದು, ಆಳಂದ ಪ್ರಕರಣ ಬಯಲಾದ ನಂತರ ಅದೇ ಜಿಲ್ಲೆಯ ಮತ್ತೆರಡು ಕ್ಷೇತ್ರಗಳಲ್ಲೂ ಮತದಾರರ ಪಟ್ಟಿ ಅಕ್ರಮ ಪ್ರಯತ್ನ ನಡೆದಿತ್ತು ಎಂಬ ಅನುಮಾನ ಎಸ್ಐಟಿ ತನಿಖೆಯಲ್ಲಿ ಮೂಡಿದೆ.ಇದನ್ನು ಓದಿ; ಲೈಂಗಿಕ ದೌರ್ಜನ್ಯ ಪ್ರಕರಣ; HD. ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಸಲಿರುವ ಹೈಕೋರ್ಟ್‌

 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಮತದಾರರ ಅಕ್ರಮದ ಪ್ರಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆಳಂದ ಪ್ರಕರಣದ ತನಿಖೆ ವೇಳೆ ಕೆಲವು ಸಂಬಂಧಿತ ದಾಖಲೆಗಳು ಲಭ್ಯವಾಗಿವೆ ಎಂದು ವರದಿಯಾಗಿದೆ. ಗಮನಾರ್ಹವಾಗಿ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು.  

ಇತ್ತೀಚೆಗೆ ಆಳಂದ ಕ್ಷೇತ್ರದ ಮತದಾರರ ಪಟ್ಟಿ ಅಕ್ರಮಕ್ಕೆ ಸಂಬಂಧಿಸಿದಂತೆ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿದಂತೆ ಕೆಲವರ ಮನೆಗಳ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ವೇಳೆ ಕಾಲ್ಸೆಂಟರ್ ಸಿಬ್ಬಂದಿಯ ಮನೆಯಲ್ಲಿ ಪರಿಶೀಲಿಸಿದ ದಾಖಲೆಗಳಲ್ಲಿ ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಮತದಾರರ ಮಾಹಿತಿ ಲಭ್ಯವಾಗಿದೆ.

 

ದಾಖಲೆಗಳಲ್ಲಿ ಮತದಾರರ ಪಟ್ಟಿ ಮತ್ತು ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸುವ ಸಾಧ್ಯತೆಯಿರುವ ಮತದಾರರ ವಿವರಗಳು ಸಹ ಇದ್ದವು ಎಂದು ಮೂಲಗಳು ತಿಳಿಸಿವೆ.