Skip to main content
ವಿಡಿಯೋ
1/3
politics

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಭರದ ಸಿದ್ಧತೆ...ವಿಜಯೇಂದ್ರ ಟೀಂನಲ್ಲಿ ಯಾರೆಲ್ಲ?

By Shravanthi R
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಭರದ ಸಿದ್ಧತೆ...ವಿಜಯೇಂದ್ರ ಟೀಂನಲ್ಲಿ ಯಾರೆಲ್ಲ?

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಬಿಜೆಪಿಯಲ್ಲಿ ಭರದ ತಯಾರಿ ನಡೆಯುತ್ತಿದ್ದು, ಬಿ.ವೈ ವಿಜಯೇಂದ್ರ ತಂಡ ಎಲೆಕ್ಷನ್‌ಗೆ ಸಜ್ಜಾಗಿದೆ. ಟೀಂನಲ್ಲಿ ಯಾರೆಲ್ಲಾ ಇದ್ದಾರೆ ಎಂದು ತಿಳಿಯಿರಿ

ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಬಿಜೆಪಿ ಸಜ್ಜಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರಾಧಿಕಾರದ ಸಂಯೋಜಕರು, ಜಿಲ್ಲಾ ಸಂಯೋಜಕರು ಹಾಗೂ ಐದು ಪಾಲಿಕೆಗಳ ಪ್ರಮುಖರು ಮತ್ತು ಸಹಪ್ರಮುಖರನ್ನು ನೇಮಿಸಲಾಗಿದೆ. ಚುನಾವಣಾ ಪೂರ್ವ ಸಿದ್ಧತೆಗಳ ಭಾಗವಾಗಿ ಈ ನಿಯೋಜನೆ ನಡೆದಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಯೋಜಕರಾಗಿ ಬಿ.ವೈ. ವಿಜಯೇಂದ್ರ, ಆರ್. ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಡಿ.ವಿ. ಸದಾನಂದಗೌಡ, ಎಸ್. ಸುರೇಶ್‌ಕುಮಾರ್‌, ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ್‌, ಡಾ. ಸಿ.ಎನ್‌. ಮಂಜುನಾಥ್‌, ತೇಜಸ್ವಿ ಸೂರ್ಯ, ಡಾ. ಕೆ. ಸುಧಾಕರ್‌ ಮತ್ತು ನಂದೀಶ್ ರೆಡ್ಡಿ ಅವರನ್ನು ನೇಮಿಸಲಾಗಿದೆ.

ಸಂಘಟನಾತ್ಮಕ ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಬೆಂಗಳೂರು ದಕ್ಷಿಣಕ್ಕೆ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರಕ್ಕೆ ಎಸ್‌. ಹರೀಶ್‌ ಮತ್ತು ಬೆಂಗಳೂರು ಕೇಂದ್ರಕ್ಕೆ ಸಪ್ತಗಿರಿಗೌಡ ಅವರನ್ನು ಪ್ರಮುಖರನ್ನಾಗಿ ನಿಯೋಜಿಸಲಾಗಿದೆ.

ಪಾಲಿಕೆಗಳ ಪ್ರಮುಖರು ಮತ್ತು ಸಹ ಪ್ರಮುಖರ ಪಟ್ಟಿಯಲ್ಲಿ ಬೆಂಗಳೂರು ಪೂರ್ವಕ್ಕೆ ಎಂ.ಟಿ.ಬಿ. ನಾಗರಾಜ್‌ ಮತ್ತು ಕೆ.ಎಸ್‌. ನವೀನ್ ಇದ್ದಾರೆ. ಬೆಂಗಳೂರು ಉತ್ತರಕ್ಕೆ ಮುನಿರತ್ನ ಹಾಗೂ ಭಾರತಿ ಶೆಟ್ಟಿ, ಬೆಂಗಳೂರು ದಕ್ಷಿಣಕ್ಕೆ ಬೈರತಿ ಬಸವರಾಜ್ ಮತ್ತು ಎನ್‌. ರವಿಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. Peacock Toys & Games Castle Set | Construction & Building Block | 575-Pieces | Create Forts, Houses & More | Educational Creative Toy & Skill Development | Toy for Kids Ages 6+ Years

ಇದಲ್ಲದೆ, ಬೆಂಗಳೂರು ಕೇಂದ್ರಕ್ಕೆ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಡಿ.ಎಸ್‌. ಅರುಣ್‌, ಮತ್ತು ಬೆಂಗಳೂರು ಪಶ್ಚಿಮಕ್ಕೆ ಕೆ. ಗೋಪಾಲಯ್ಯ, ಎ. ನಾರಾಯಣಸ್ವಾಮಿ ಹಾಗೂ ಅಶ್ವಥ್‌ನಾರಾಯಣ ಅವರನ್ನು ನೇಮಿಸಲಾಗಿದೆ. ಈ ಮೂಲಕ ಬಿಜೆಪಿ ಚುನಾವಣಾ ಕಾರ್ಯತಂತ್ರವನ್ನು ಬಲಪಡಿಸಲು ಮುಂದಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಕರಣ: ಆರೋಪಿ ಪ್ರದೂಷ್‌ಗೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆ, ವಿಚಾರಣೆ ಮಧ್ಯಾಹ್ನ 3 ಕ್ಕೆ ಮುಂದೂಡಿಕೆ