Skip to main content
ವಿಡಿಯೋ
1/3
general

RSS ಪಥಸಂಚಲನ: ಹೈಕೋರ್ಟ್‌ನಿಂದ ಶಾಂತಿ ಸಭೆಗೆ ನಿರ್ದೇಶನ!

By Pavitra Ganapathi Baradavalli
RSS ಪಥಸಂಚಲನ: ಹೈಕೋರ್ಟ್‌ನಿಂದ ಶಾಂತಿ ಸಭೆಗೆ ನಿರ್ದೇಶನ!

ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ RSS ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ವಿವಾದ ಕುರಿತು ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠವು ಇಂದು ಮಹತ್ವದ ಮಧ್ಯಂತರ ಆದೇಶ ನೀಡಿದೆ.

ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ RSS ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ವಿವಾದ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಇಂದು ಮಹತ್ವದ ಮಧ್ಯಂತರ ಆದೇಶ ನೀಡಿದೆ.ಇದನ್ನೂ ಓದಿ: ಭಾರತ-ಟಿಬೆಟ್ ಗಡಿಯಲ್ಲಿ ಚೀನಾದ ಹೊಸ ಚಟುವಟಿಕೆ! ಪಾಂಗಾಂಗ್ ಸರೋವರದ ಬಳಿ ರಹಸ್ಯ ಕ್ಷಿಪಣಿ ಉಡಾವಣಾ ಕೇಂದ್ರ ನಿರ್ಮಾಣ!

ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಪೀಠವು, ಜಿಲ್ಲಾಡಳಿತವು ಅಕ್ಟೋಬರ್ 28 ಕ್ಕೆ ಎಲ್ಲಾ ಸಂಬಂಧಪಟ್ಟ ಸಂಘಟನೆಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಬೇಕು. ಸಭೆಯ ವರದಿಯನ್ನು ನಮಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಶಾಂತಿ ಸಭೆಯ ನಂತರ, ಜಿಲ್ಲಾಡಳಿತವು ಕೈಗೊಂಡ ಅಂತಿಮ ಕ್ರಮಗಳ ಕುರಿತು ಅಕ್ಟೋಬರ್ 30 ರಂದು ನಾವು ಪುನಃ ವಿಚಾರಣೆ ನಡೆಸುತ್ತೇವೆ.ಇದನ್ನೂ ಓದಿ: ಬಿಹಾರ ಚುನಾವಣೆ 2025: ಬಿಹಾರವನ್ನು ಬದಲಾಯಿಸಲು ನಮಗೆ ಒಂದು ಅವಕಾಶ ಕೊಡಿ..!


ಎಲ್ಲವೂ ಸೌಹಾರ್ದಯುತವಾಗಿ ಇತ್ಯರ್ಥವಾದರೆ, ನವೆಂಬರ್ 2 ರಂದು ಪಥಸಂಚಲನ ನಡೆಸಲು ಅವಕಾಶ ನೀಡಬಹುದು ಎಂದು ಪೀಠವು ಸೂಚಿಸಿದೆ. ಇದರಿಂದ ನವೆಂಬರ್ 2 ರಂದು ಪಥಸಂಚಲನ ನಡೆಸುವ ಕುರಿತು ಆರ್ ಎಸ್ ಎಸ್ ಗೆ ತಾತ್ಕಾಲಿಕ ಭರವಸೆ ದೊರೆತಂತಾಗಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece