ಅಮೆರಿಕ ಮತ್ತು ಭಾರತದ ನಡುವಿನ ಸುಂಕ ಸಮರದ ಅಂತ್ಯ ಸಮೀಪಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಫ್ತುಗಳ ಮೇಲೆ ವಿಧಿಸಿದ್ದ ಶೇ. 50ರಷ್ಟು ಸುಂಕ ಎರಡು ದೇಶಗಳ ಸಂಬಂಧದಲ್ಲಿ ಬಿರುಕು ಮೂಡಿಸಿತ್ತು. ಆದರೆ, ಇತ್ತೀಚೆಗೆ ನಡೆದ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳು ಈ ಬಿರುಕನ್ನು ಕಡಿಮೆ ಮಾಡಿವೆ ಎನ್ನಬಹುದು. ಪ್ರಸ್ತುತ, ವ್ಯಾಪಾರ ಒಪ್ಪಂದದ ಮಾತುಕತೆಗಳು ಅಂತಿಮ ಹಂತ ತಲುಪಿದ್ದು, ಬಹುತೇಕ ಎಲ್ಲಾ ವಿಷಯಗಳಲ್ಲಿ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಭಾರತ ಮತ್ತು ಅಮೆರಿಕ ನಡುವೆ ಈಗಾಗಲೇ ಐದು ಸುತ್ತಿನ ಚರ್ಚೆಗಳು ನಡೆದಿವೆ. ಈ ಮಾತುಕತೆಗಳು ಯಾವುದೇ ವೈಮನಸ್ಸು ಇಲ್ಲದೆ ಸುಗಮವಾಗಿ ಸಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದಷ್ಟೇ ಬಾಕಿಯಿದೆ ಎಂದು ಮೂಲಗಳು ವರದಿ ಮಾಡಿವೆ. ಡೊನಾಲ್ಡ್ ಟ್ರಂಪ್ ಆಡಳಿತವು ರಷ್ಯಾಕ್ಕೆ ಸಾಗುವ ಕಚ್ಚಾ ತೈಲದ ರಫ್ತಿನ ಕುರಿತು ಗಂಭೀರ ನಿಲುವು ತಾಳಿದೆ. ಈ ಹಿನ್ನೆಲೆಯಲ್ಲಿ ಭಾರತದಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಅಮೆರಿಕ ಶೇಕಡಾ 50ರಷ್ಟು ಸುಂಕ ವಿಧಿಸಿತ್ತು. ಇದರೊಂದಿಗೆ ರಷ್ಯಾದ ಪ್ರಮುಖ ತೈಲ ಕಂಪನಿಗಳಾದ ರೋಸ್ನೆಫ್ಟ್ (Rosneft) ಮತ್ತು ಲುಕೋಯಿಲ್ (Lukoil) ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z
ಮುಂದಿನ ತಿಂಗಳುಗಳಲ್ಲಿ ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂಬ ನಿರೀಕ್ಷೆಯನ್ನು ಟ್ರಂಪ್ ಇತ್ತೀಚೆಗೆ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಗಮನಾರ್ಹ ಪರಿಣಾಮ ಬೀರಬಹುದು.
ಗೋಯಲ್ ಅವರ ಪ್ರಕಾರ, ವ್ಯಾಪಾರ ಒಪ್ಪಂದಗಳು ತಾತ್ಕಾಲಿಕ ಪ್ರಯೋಜನಕ್ಕಾಗಿ ಅಲ್ಲ, ಬದಲಾಗಿ ದೀರ್ಘಾವಧಿಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡೇ ರೂಪಗೊಳ್ಳಬೇಕು. ಯಾರಾದರೂ ನೀವು ಯುರೋಪಿಯನ್ ಯೂನಿಯನ್ ಜೊತೆ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂದು ಹೇಳಿದರೆ, ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ಭಾರತವು ತನ್ನ ಸ್ನೇಹಿತರನ್ನು ತನ್ನ ಹಿತಾಸಕ್ತಿಯ ಆಧಾರದ ಮೇಲೆ ಆಯ್ಕೆ ಮಾಡುತ್ತದೆ ಎಂದು ಅವರು ತಿಳಿಸಿದರು.