Skip to main content
ವಿಡಿಯೋ
1/2
sports

ಇಂಡಿಯಾ-ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯ, 3ನೇ ಬಾರಿ ಟಾಸ್ ಸೋತ ಗಿಲ್; ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ

By Gireesh Vasishta
ಇಂಡಿಯಾ-ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯ, 3ನೇ ಬಾರಿ ಟಾಸ್ ಸೋತ ಗಿಲ್; ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ

ಆಸ್ಟ್ರೇಲಿಯಾ ಮತ್ತು ಭಾರತದ ವಿರುದ್ಧ ಮೂರನೇ ಏಕದಿನ ಪಂದ್ಯ ಇಂದು ನಡೆಯಲಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತವಿದೆ. ಇಲ್ಲವಾದಲ್ಲಿ ಸರಣಿ ಸೋಲಲಿದೆ.

ಆಸ್ಟ್ರೇಲಿಯಾ; ಆಸ್ಟ್ರೇಲಿಯದ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಏಕೆಂದರೆ ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಕೈ ಚೆಲ್ಲಿದ ಭಾರತ ಸರಣಿಯನ್ನು ಗೆಲ್ಲುವ ಕನಸು ಭಗ್ನವಾಗಿದೆ. ಹೀಗಾಗಿ ಈ ಪಂದ್ಯವನ್ನ ಗೆದ್ದು ಮಾನ ಉಳಿಸಿಕೊಳ್ಳಬೇಕಾದ ಎಲ್ಲಾ ಅವಶ್ಯಕತೆ ಇದೆ..PALAY® Straw Hat Sun Hats for Women,Wide Brim Cap Beach Hat for Women Stylish UV Protection Cap

ಬಲಿಷ್ಠ ತಂಡವಿದ್ದರೂ ಸಹ ಭಾರತೀಯ ಆಟಗಾರರು ಆಸ್ಟ್ರೇಲಿಯಾದಲ್ಲಿ ಹಾಗೂ ಅಲ್ಲಿನ ಬೌನ್ಸಿ ಪಿಚ್‌ನಲ್ಲಿ ಆಡುವುದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಇದಕ್ಕೆ ಸಾಕ್ಷಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್, ರೋಹಿತ್ ಶರ್ಮ ಮತ್ತು ನಾಯಕ ಗಿಲ್ ಅವರ ಬ್ಯಾಟಿಂಗ್‌, ಇವರ ಬ್ಯಾಟಿಂದ ರಂಗಳ ಮಳೆ ಹರಿಯುವುದಕ್ಕೆ ಆಸ್ಟ್ರೇಲಿಯಾದ ಬೌಲರುಗಳು ಬಿಟ್ಟಿಲ್ಲ..ಇದನ್ನು ಓದಿ; ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ವಿಶ್ವ ದಾಖಲೆ ಸರಿಗಟ್ಟಿದ ಸ್ಮೃತಿ ಮಂಧಾನಾ, ಸಿಕ್ಸರ್‌ಗಳ ದಾಖಲೆ ಛಿದ್ರ!

ಹೀಗಿರುವಾಗ ಇಂದಿನ ಪಂದ್ಯದಲ್ಲೂ ಸಹ ಆಸ್ಟ್ರೇಲಿಯಾ ಬೌಲರ್ ಗಳು ಪಾರುಪತ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ. ಆದರೆ ಇಂತಹ ಒತ್ತಡದ ಸನ್ನಿವೇಶದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿರುವ ಭಾರತ ಪುಟಿದೇಳುವ ಸಾಧ್ಯತೆಇದೆ. ಆದರೂ ಈಗಾಗಲೇ ಸರಣಿ ಕಳೆದುಕೊಂಡು ಎರಡು ಸೊನ್ನೆ ಅಂತರದಲ್ಲಿ ಆಸ್ಟ್ರೇಲಿಯಾ ಗೆ ಭಾರತ ಶರಣಾಗಿದೆ. ಪಂದ್ಯವನ್ನಾದರೂ ಗೆದ್ದು 2-1 ಅಂತರದಲ್ಲಿ ಸರಣಿ ಬಿಟ್ಟು ಕೊಡುತ್ತದೆಯೇ ಎಂದು ಕಾದುನೋಡಬೇಕಿದೆ.. ಸತತವಾಗಿ ಮೂರನೇ ಬಾರಿಯೂ ಸಹ ಭಾರತ ಕ್ರಿಕೆಟ್ ತಂಡದ ನಾಯಕ ಗಿಲ್ ಟಾಸನ್ನು ಸೋತಿದ್ದಾರೆ ಹೀಗಾಗಿ ಅದೃಷ್ಟ ಕೈಕೊಟ್ಟಂತೆ ಕಾಣುತ್ತಿದೆ ಎಂದು ಸಾಕಷ್ಟು ಚರ್ಚೆ ನಡೆಯುತ್ತದೆ..

- ಸದ್ಯ ಆಸ್ಟ್ರೇಲಿಯಾ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ-

ಆಸ್ಟ್ರೇಲಿಯಾ - 64-1 (10.1 Ov)