ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿವೆ. ಈ ನಡುವಲ್ಲಿ ಅಲ್ಲಿನ ರಾಜಕೀಯ ಪಕ್ಷಗಳ ಪ್ರಚಾರವು ಬಿರುಸಾಗಿ ಸಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಪ್ರಚಾರಕ್ಕಾಗಿ ಕೃತಕ ಬುದ್ದಿಮತ್ತೆಯ ಬಳಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸಲಹೆ ಸೂಚನೆ ತಿಳಿಸಿದೆ.
ಚುನಾವಣಾ ಪ್ರಚಾರಕ್ಕಾಗಿ ಬಳಸುವ ಎಐ ಆಧಾರಿತ ಫೋಟೋ, ವಿಡಿಯೋ ಹಾಗೂ ಆಡಿಯೋದ ದುರುಪಯೋಗ ಕುರಿತಂತೆ ಆಯೋಗವು ಮುನ್ನೆಚ್ಚರಿಕೆ ನೀಡಿದೆ ಎನ್ನಲಾಗಿದೆ. ದಾರಿತಪ್ಪಿಸುವ ಹಾಗೂ ಮಾಹಿತಿ ಸೋರಿಕೆ ಹಾಗೂ ತಪ್ಪು ಮಾಹಿತಿ ಹರಡುವಿಕೆಯನ್ನು ಗುರಿಯಾಗಿಸುವ ನಡೆಯನ್ನು ತಡೆಯಾಗಿಸಿ ಈ ಕ್ರಮವನ್ನು ಸೂಚಿಸಲಾಗಿದೆ. 2024 ಹಾಗೂ ಈ ವರ್ಷದ ಮೇ ಸಂದರ್ಭದಲ್ಲಿ ಹೊರಡಿಸಿದ್ದ ಮಾರ್ಗಸೂಚಿಗಳನ್ನೇ ಈ ಬಾರಿ ಪುನರುಚ್ಚಿಸಿದೆ ಎನ್ನಲಾಗಿದೆ. realme C71 4G Smartphone 6GB+128GB Sea Blue, 6.745 inch Screen, 90Hz Eye Comfort Display, 6300mAh Battery, 37MP Cameras, Unisoc T7250 Chip, IP54
EC ಪ್ರಕಾರ, ಎಲ್ಲಾ ರಾಜಕೀಯ ಪಕ್ಷಗಳು AI- ರಚಿತವಾದ ವೀಡಿಯೊಗಳನ್ನು ಸ್ಪಷ್ಟವಾಗಿ ಲೇಬಲ್ ಮಾಡಬೇಕಾಗುತ್ತದೆ. ಈ ಲೇಬಲ್ ವೀಡಿಯೊದ ಮೊದಲ 10 ಸೆಕೆಂಡುಗಳ ಕಾಲ ಗೋಚರಿಸಬೇಕು ಮತ್ತು ವೀಡಿಯೊದ ಕನಿಷ್ಠ 10% ಅನ್ನು ಒಳಗೊಂಡಿರಬೇಕು. ಯಾವುದೇ AI ವಿಷಯವು ದಾರಿತಪ್ಪಿಸುವಂತಿದೆ ಎಂದು ಕಂಡುಬಂದರೆ, ಅದನ್ನು 3 ಗಂಟೆಗಳ ಒಳಗೆ ತೆಗೆದುಹಾಕಬೇಕು. AI ವಿಷಯದ ಮೇಲಿನ ಲೇಬಲ್ ದೊಡ್ಡ ಅಕ್ಷರಗಳಲ್ಲಿರಬೇಕು ಮತ್ತು ಪರದೆಯ ಮೇಲ್ಭಾಗದಲ್ಲಿ ಗೋಚರಿಸಬೇಕು ಎಂದು ಆಯೋಗವು ಸ್ಪಷ್ಟಪಡಿಸಿದೆ.
ರಾಜಕೀಯ ಪಕ್ಷಗಳು ಹಾಗೂ ನಾಯಕರು ಪಾರದರ್ಶಕತೆ ಜೊತೆಗೆ ಚುನಾವಣಾ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕೆಂದು ತಿಳಿಸಲಾಗಿ, ಸೂಕ್ಷ್ಮ ಸಂದೇಶಗಳನ್ನು ಪ್ರಕಟಿಸುವಾಗ ಹಾಗೂ ಹಂಚಿಕೊಳ್ಳುವಾಗ ನಿಷ್ಠೆ ವಹಿಸಬೇಕು. ಮತದಾರರನ್ನು ದಾರಿಪಪ್ಪಿಸುವ ಹಾಗೂ ಮೋಸಗೈಯ್ಯುವಂಥ; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಚುನಾವಣಾ ಕಣದಲ್ಲಿ ಕಲುಷಿತ ವಾತಾವರಣವು ಸೃಷ್ಟಿಯಾಗದಂತೆ ಗಂಭೀರತೆ ಕಾಯ್ದುಕೊಳ್ಳಬೇಕೆಂದು ಆಯೋಗವು ಒತ್ತಿ ಹೇಳಿದೆ. ಇದನ್ನೂ ಓದಿ: ಮಲೇಷಿಯಾದ ಕುವಾಲಾಲಂಪುರದಲ್ಲಿ US-ಚೀನಾ ಮಾತುಕತೆ: ವ್ಯಾಪಾರ ಯುದ್ಧ ತಡೆಗಟ್ಟಲು ಮಹತ್ವದ ಚರ್ಚೆ!