Skip to main content
ವಿಡಿಯೋ
1/2
politics

ಚಿತ್ತಾಪುರದಲ್ಲಿ RSS ಪಥಸಂಚಲನ: ಅ.28ಕ್ಕೆ ಶಾಂತಿಸಭೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

By Gireesh Vasishta
ಚಿತ್ತಾಪುರದಲ್ಲಿ RSS ಪಥಸಂಚಲನ: ಅ.28ಕ್ಕೆ ಶಾಂತಿಸಭೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

RSS ನವೆಂಬರ್‌ 2ರಂದು ಪಥಸಂಚಲನ ನಡೆಸಲು ಉದ್ದೇಶಿಸಿರುವ ಚಿತ್ತಾಪುರದಲ್ಲಿ ಉದ್ವಿಗ್ನ ಸ್ಥಿತಿ ಇದೆ. ಹಲವು ಸಂಘಟನೆಗಳು ಸಭೆ/ಪ್ರತಿಭಟನೆಗೆ ಅನುಮತಿ ಕೋರಿವೆ ಎಂದು ಮಾಹಿತಿ ನೀಡಿದ ಅಡ್ವೊಕೇಟ್‌ ಜನರಲ್.

ಚಿತ್ತಾಪುರ; ಕಲಬುರ್ಗಿಯ ಚಿತ್ತಾಪುರದಲ್ಲಿ ನವೆಂಬರ್‌ 2ರಂದು ಪಥ ಸಂಚಲನ ನಡೆಸಲು ಅನುಮತಿ ಕೋರಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ (ಆರ್ಎಸ್ಎಸ್‌) ಸೇರಿದಂತೆ ಸಭೆ/ಸಮಾರಂಭ ಮತ್ತು ಪ್ರತಿಭಟನೆಗೆ ಅನುಮತಿ ಕೋರಿರುವ ಎಲ್ಲಾ ಸಂಘಟನೆಗಳ ಜೊತೆ ಅಕ್ಟೋಬರ್‌ 28ರಂದು ಶಾಂತಿಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್ನಿರ್ದೇಶಿಸಿದೆ. ಅಂತೆಯೇ, ಶಾಂತಿ ಸಭೆಯ ನಿರ್ಣಯವನ್ನು ಅಕ್ಟೋಬರ್‌ 30ಕ್ಕೆ ನ್ಯಾಯಾಲಯಕ್ಕೆ ತಿಳಿಸುವಂತೆ ಆದೇಶಿಸಿದೆ.ಇದನ್ನು ಓದಿ; “ದಿಲ್ಲಿ ಇನ್ನು ದೂರವಿದೆ” ಮಹಾರಾಷ್ಟ್ರದ ಸಿಎಂ ಫಡ್ನಾವಿಸ್‌ರಿಂದ ಹೇಳಿಕೆ; ಕಾರಣ ಹೀಗಿದೆ

ಚಿತ್ತಾಪುರದಲ್ಲಿ ಅಕ್ಟೋಬರ್‌ 19ರಂದು ಪಥಸಂಚಲನ ನಡೆಸಲು ಅನುಮತಿ ನಿರಾಕರಿಸಿರುವ ತಹಶೀಲ್ದಾರ್ಕ್ರಮಕ್ಕೆ ಆಕ್ಷೇಪಿಸಿ ಆರ್ಎಸ್ಎಸ್ಕಲಬುರ್ಗಿ ಜಿಲ್ಲಾ ಸಂಚಾಲಕ ಅಶೋಕ್ಪಾಟೀಲ್ಸಲ್ಲಿಸಿದ್ದ ರ್ಜಿಯನ್ನು ನ್ಯಾಯಮೂರ್ತಿ ಎಂಜಿಎಸ್ಕಮಲ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

"ಅಕ್ಟೋಬರ್‌ 19ರಂದು ನ್ಯಾಯಾಲಯವು ವಾಸ್ತವ ಸ್ಥಿತಿಗತಿ ಮತ್ತು ಅರ್ಜಿದಾರರು ಸಲ್ಲಿಸಿರುವ ಮನವಿಯಯನ್ನು ಪರಿಗಣಿಸುವಂತೆ ನಿರ್ದೇಶಿಸಿತ್ತು. ಇದಕ್ಕೆ ಅನುಗುಣವಾಗಿ ಸರ್ಕಾರವು ವರದಿ ಸಲ್ಲಿಸಿದೆ. ಸಭೆ/ಪ್ರತಿಭಟನೆ ನಡೆಸಲು ಸಂಬಂಧಿತ ಪ್ರಾಧಿಕಾರವು ಸಂಘಟನೆಗಳ ಜೊತೆ ಶಾಂತಿಸಭೆ ನಡೆಸಿ, ನಿರ್ಧರಿಸಲಿದೆ. ಅಕ್ಟೋಬರ್‌ 19ರಿಂದ ಇಲ್ಲಿಯವರೆಗೆ ಚಿತ್ತಾಪುರ ನಗರದಲ್ಲಿ ಒಂದು ರೀತಿಯ ಉದ್ವಿಗ್ನ ಸ್ಥಿತಿಗತಿ ಇದೆ. Safari Flip 32L Casual Printed Backpack, 2 Compartments, Bottle Holder,


ಮಾಧ್ಯಮಗಳಲ್ಲಿ ಹಲವು ಸಂಘಟನೆಗಳು ಪಥಸಂಚಲನದ ಪರ ಮತ್ತು ವಿರೋಧದ ಹೇಳಿಕೆ ನೀಡುತ್ತಿದ್ದು, ಅನುಮತಿಸಿದರೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಲಿದೆ. ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರ ಜೊತೆ ಸ್ಥಳೀಯಾಡಳಿತವು ಶಾಂತಿಸಭೆ ನಡೆಸಲು ನಿರ್ಧರಿಸಿದೆ. ಸಂಬಂಧಿತ ವರದಿ ಮತ್ತು ವಾದವನ್ನು ಪರಿಗಣಿಸಿ, ಪ್ರತಿವಾದಿ ಸ್ಥಳೀಯಾಡಳಿತವು ಅಕ್ಟೋಬರ್‌ 28ರಂದು ಶಾಂತಿಸಭೆ ನಡೆಸಬೇಕು. ಆನಂತರ ಅಕ್ಟೋಬರ್‌ 30 ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಾಗುವುದುಎಂದು ನ್ಯಾಯಾಲಯ ಆದೇಶಿಸಿದೆ.