Skip to main content
ವಿಡಿಯೋ
entertainment

ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ: ಒಂದು ವರ್ಷದಲ್ಲಿ ₹50 ಕೋಟಿ ಗಳಿಸುವ ಬ್ರಾಂಡ್ ಮ್ಯಾಗ್ನೆಟ್!

By Vinutha U
ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ: ಒಂದು ವರ್ಷದಲ್ಲಿ ₹50 ಕೋಟಿ ಗಳಿಸುವ ಬ್ರಾಂಡ್ ಮ್ಯಾಗ್ನೆಟ್!

ವಿರಾಟ್ ಕೊಹ್ಲಿ ಬಿಸಿ ಕ್ರಿಕೆಟ್ ಕಿಂಗ್ ಮಾತ್ರವಲ್ಲ, ಬೃಹತ್ ಆದಾಯದ ಬ್ರಾಂಡ್ ಅಂಬಾಸಿಡರ್‌ ಕೂಡ ಆಗಿದ್ದಾರೆ. BCCI A+ ಶ್ರೇಣಿಯ ಒಪ್ಪಂದದಡಿಯಲ್ಲಿ 7 ಕೋಟಿ ವೇತನ, ODI ಪ್ರತಿ ಪಂದ್ಯಕ್ಕೆ 6 ಲಕ್ಷ, ಮತ್ತು ಐಪಿಎಲ್‌ನಲ್ಲಿ 2024ರ ಸೀಸನ್‌ಗೆ 21 ಕೋಟಿ ಸಂಭಾವನೆ ಪಡೆಯುತ್ತಿದ್ದು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಪ್ರತಿ ಬಾರಿ 12 ಕೋಟಿ ರೂ. ಗಳಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯ A+ ಶ್ರೇಣಿಯ ಒಪ್ಪಂದದ ಅಡಿಯಲ್ಲಿ ವಾರ್ಷಿಕವಾಗಿ 7 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಇದರೊಂದಿಗೆ ಅವರು ಆಡುವ ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಸಂಭಾವನೆಯನ್ನು ಸಹ ಗಳಿಸುತ್ತಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅವಿಭಾಜ್ಯ ಅಂಗವಾಗಿರುವ ಕೊಹ್ಲಿ, 2024ರ ಸೀಸನ್‌ಗಾಗಿ 21 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದು ಅವರನ್ನು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಸಾಲಿನಲ್ಲಿ ನಿಲ್ಲಿಸಿದೆ. “ದಿಲ್ಲಿ ಇನ್ನು ದೂರವಿದೆ” ಮಹಾರಾಷ್ಟ್ರದ ಸಿಎಂ ಫಡ್ನಾವಿಸ್‌ರಿಂದ ಹೇಳಿಕೆ; ಕಾರಣ ಹೀಗಿದೆ

ಕೊಹ್ಲಿಯ ಪ್ರಮುಖ ಆದಾಯದ ಮೂಲವೆಂದರೆ ಬ್ರ್ಯಾಂಡ್ ಜಾಹೀರಾತುಗಳು. ಪೂಮಾ, ಆಡಿ, MRF, ಟಿಸ್ಸೋಟ್, ಮತ್ತು ಮಿಂತ್ರಾ ಸೇರಿದಂತೆ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳ ರಾಯಭಾರಿಯಾಗಿರುವ ಅವರು, ಪ್ರತಿ ಬ್ರ್ಯಾಂಡ್‌ಗೆ 5 ರಿಂದ 10 ಕೋಟಿ ರೂ. ಪಡೆಯುತ್ತಾರೆ.

2024ರ ಕ್ರೋಲ್ ಸೆಲೆಬ್ರಿಟಿ ಬ್ರ್ಯಾಂಡ್ ಮೌಲ್ಯಮಾಪನ ವರದಿಯ ಪ್ರಕಾರ, ವಿರಾಟ್ ಕೊಹ್ಲಿಯ ಬ್ರ್ಯಾಂಡ್ ಮೌಲ್ಯ ಸುಮಾರು 2,048 ಕೋಟಿ ರೂ. ತಲುಪಿದೆ. ಇದು ಅವರನ್ನು ಏಷ್ಯಾದ ಅಗ್ರ ಬ್ರ್ಯಾಂಡ್ ಅಂಬಾಸಿಡರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ಇನ್‌ಸ್ಟಾಗ್ರಾಮ್, ಟ್ವಿಟರ್, ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ವಿರಾಟ್, ಬ್ರ್ಯಾಂಡ್‌ಗಳಿಗಾಗಿ ಮಾಡುವ ಪ್ರತಿ ಪೋಸ್ಟ್‌ಗೆ ಬೃಹತ್ ಮೊತ್ತವನ್ನು ಗಳಿಸುತ್ತಾರೆ. ಅವರ ಪ್ರತಿ ಪೋಸ್ಟ್‌ಗೆ ಸುಮಾರು 12 ಕೋಟಿ ರೂ. ಸಂಭಾವನೆ ದೊರೆಯುತ್ತದೆ.