Skip to main content
ವಿಡಿಯೋ
politics

ತೇಜಸ್ವಿ ಸೂರ್ಯ 'ಖಾಲಿ ಟ್ರಂಕ್' ಇದ್ದಂತೆ, ಅವರ ಮಾತಿಂದ ಸುರಂಗ ಮಾರ್ಗ ಯೋಜನೆ ನಿಲ್ಲಲ್ಲ; ಡಿಕೆಶಿ ಸ್ಪಷ್ಟನೆ

By Vinutha U
ತೇಜಸ್ವಿ ಸೂರ್ಯ 'ಖಾಲಿ ಟ್ರಂಕ್' ಇದ್ದಂತೆ, ಅವರ ಮಾತಿಂದ ಸುರಂಗ ಮಾರ್ಗ ಯೋಜನೆ ನಿಲ್ಲಲ್ಲ; ಡಿಕೆಶಿ ಸ್ಪಷ್ಟನೆ

ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಲ್ಲೂ ಇಂತಹ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. "ವಿರೋಧಿಗಳ ಮಾತು ಕೇಳಿ ಯೋಜನೆಯನ್ನು ನಿಲ್ಲಿಸುವುದಿಲ್ಲ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ"

ಬೆಂಗಳೂರು, ಅಕ್ಟೋಬರ್ 25: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಬೆಂಗಳೂರಿನಲ್ಲಿ ಜನಸಂಪರ್ಕ ಸಭೆಯನ್ನು ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಲಾಲ್ಬಾಗ್ ಸುರಂಗ ಮಾರ್ಗ ಯೋಜನೆಯ ವಿರೋಧದ ಬಗ್ಗೆ ಮಾತನಾಡುತ್ತಾ, ಯೋಜನೆಯಿಂದ ಲಾಲ್ಬಾಗ್ಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಿರ್ಮಾಣ ಅವಧಿಯಲ್ಲಿ ತಾತ್ಕಾಲಿಕವಾಗಿ ಒಂದು ಎಕರೆ ಜಾಗವನ್ನು ಬಳಸಿಕೊಂಡು, ಕೆಲಸ ಮುಗಿದ ನಂತರ ಅದನ್ನು ಪಾರ್ಕ್ ಆಗಿ ಮಾರ್ಪಡಿಸಲಾಗುವುದು ಎಂದು ತಿಳಿಸಿದರು.

 

ಸಂಸದ ತೇಜಸ್ವಿ ಸೂರ್ಯರ ವಿರೋಧಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗ ನಿರ್ಮಾಣ ಅನಿವಾರ್ಯವಾಗಿದೆ ಎಂದು ಹೇಳಿದರು. ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಲ್ಲೂ ಇಂತಹ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. "ವಿರೋಧಿಗಳ ಮಾತು ಕೇಳಿ ಯೋಜನೆಯನ್ನು ನಿಲ್ಲಿಸುವುದಿಲ್ಲ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಆತ್ಮವಿಶ್ವಾಸದಿಂದ ಹೇಳಿದರು. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ಇದರೊಂದಿಗೆ, ತೇಜಸ್ವಿ ಸೂರ್ಯರನ್ನು 'ಖಾಲಿ ಟ್ರಂಕ್' ಎಂದು ಕಿಡಿಕಾರಿ, ಅವರ ವಿರೋಧವನ್ನು ತಮ್ಮ ಖಾಲಿ ಮಾತುಗಳೆಂದು ಖಂಡಿಸಿದರು. ಯೋಜನೆಯು ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರವಾಗುತ್ತದೆ ಎಂದು ಡಿ.ಕೆ.ಶಿ. ಒತ್ತಿ ಹೇಳಿದರು. ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಇತರ ದೂರುಗಳನ್ನೂ ಆಲಿಸಿ, ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.