ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಬ್ಲಾಕ್‌ಮೇಲ್ ಆರೋಪ ಕೇಳಿಬಂದಿದೆ. ಕನ್ನಡದ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಇವರು, ಸ್ನೇಹಿತೆಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಕದ್ದು ಹಂಚಿ ಬ್ಲಾಕ್‌ಮೇಲ್ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಪಾರ್ವತಿ ಎಂಬುವವರು ನಟಿ ಆಶಾ ಜೋಯಿಸ್ ವಿರುದ್ಧ ದೂರು ನೀಡಿದ್ದು, ಎರಡು ಕೋಟಿ ರೂಪಾಯಿಗೆ ಬ್ಲಾಕ್‌ಮೇಲ್ ಮಾಡಲು ಪ್ರಚೋದನೆ ನೀಡಿರುವುದಾಗಿ ಆರೋಪಿಸಿದ್ದಾರೆ. ಆಶಾ ಜೋಯಿಸ್ ಅವರು ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬದ ಸದಸ್ಯೆಯಾಗಿದ್ದು, 2016ರ ಮಿಸ್ ಇಂಡಿಯಾ ಪ್ಲಾನೆಟ್ ಸ್ಪರ್ಧಿಯಾಗಿದ್ದರು.
61 ವರ್ಷದ ಪಾರ್ವತಿ ಮೂರು ವರ್ಷಗಳ ಹಿಂದೆ ಆಶಾ ಜೋಯಿಸ್ ಅವರನ್ನು ಪರಿಚಯಿಸಿಕೊಂಡಿದ್ದರು. ಆಶಾ ಜೋಯಿಸ್ ತಮ್ಮನ್ನು ಶೃಂಗೇರಿ ಮಠದ ಜೋಯಿಸ್ ಕುಟುಂಬದವರು ಮತ್ತು ಸೀರಿಯಲ್ ನಟಿ ಎಂದು ಪರಿಚಯಿಸಿಕೊಂಡಿದ್ದರು.Symbol Premium Men's Genuine Leather Casual Brown Belt
ಪಾರ್ವತಿ ಅವರು ತಾವು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರನ್ನು ಮದುವೆಯಾಗಿದ್ದರು. ಈ ವಿಷಯ ತಿಳಿದ ಆಶಾ ಜೋಯಿಸ್, ಪಾರ್ವತಿ ಅವರ ಪತಿಗೆ ಬ್ಲಾಕ್‌ಮೇಲ್ ಮಾಡಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮೋಹನ್ ಲಾಲ್‌ಗೆ ಹೈಕೋರ್ಟ್ ಶಾಕ್: ಆನೆದಂತ ‘ಮಾಲೀಕತ್ವ ಪ್ರಮಾಣಪತ್ರ’ ರದ್ದು!
ಆಶಾ ಜೋಯಿಸ್ ಎರಡು ಕೋಟಿ ರೂಪಾಯಿ ಹಣಕ್ಕೆ ಬ್ಲಾಕ್‌ಮೇಲ್ ಮಾಡಲು ಬಲವಂತಪಡಿಸಿದ್ದಾರೆ. ಆದರೆ ಪಾರ್ವತಿ ಇದನ್ನು ನಿರಾಕರಿಸಿದ್ದರು. ಇದೇ ದ್ವೇಷಕ್ಕೆ ಖಾಸಗಿ ವಿಡಿಯೋಗಳು, ವಾಯ್ಸ್ ರೆಕಾರ್ಡ್‌ಗಳು ಹಾಗೂ ಖಾಸಗಿ ಫೋಟೋಗಳನ್ನು ನಟಿ ಕದ್ದಿದ್ದಾರೆ ಎನ್ನಲಾಗಿದೆ.
ನಂತರ ಆಶಾ ಜೋಯಿಸ್ ಆ ಖಾಸಗಿ ವಿಡಿಯೋಗಳನ್ನು ಪಾರ್ವತಿ ಅವರಿಗೆ ಪರಿಚಯವಿರುವ ವ್ಯಕ್ತಿಗಳಿಗೆ ಕಳುಹಿಸಿದ್ದಾರೆ. ಇದರಿಂದ ತಮ್ಮ ಘನತೆಗೆ ಕುಂದುಂಟಾಗಿದೆ ಹಾಗೂ ಖಾಸಗಿ ಡೇಟಾವನ್ನು ಕಳವು ಮಾಡಿದ್ದಾರೆಂದು ಆರೋಪಿಸಿ ಪಾರ್ವತಿ ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.