ನೆಲಮಂಗಲ: ರಸ್ತೆ ಗುಂಡಿಯನ್ನು ತಪ್ಪಿಸಲು ಯತ್ನಿಸಿದ ಟೆಕ್ಕಿಯೊಬ್ಬರು ಲಾರಿ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿಯ ಹುಸ್ಕೂರು ಎಪಿಎಂಸಿ ಬಳಿ ಸಂಭವಿಸಿದೆ. ಮೃತ ಯುವತಿಯನ್ನು ಪ್ರಿಯಾಂಕ (26) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಮಹತ್ವದ ತಿರುವು: ಷಡ್ಯಂತ್ರದ ವಿಚಾರಣೆಗೆ ತಿಮರೋಡಿ ಸೇರಿ ನಾಲ್ವರಿಗೆ ನೋಟಿಸ್
ಪ್ರಿಯಾಂಕ ತನ್ನ ಸಹೋದರನೊಂದಿಗೆ ಬೈಕ್ನಲ್ಲಿ ಹುಸ್ಕೂರು ಎಪಿಎಂಸಿ ರಸ್ತೆಯಿಂದ ಮಾದಾವರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರಸ್ತೆ ಕಾಮಗಾರಿಯಿಂದಾಗಿ ರಸ್ತೆಯ ಸ್ಥಿತಿ ಹದಗೆಟ್ಟಿದ್ದು, ಗುಂಡಿಯನ್ನು ತಪ್ಪಿಸಲು ಸಹೋದರ ಯತ್ನಿಸಿದಾಗ, ಯುವತಿ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ.ಇದನ್ನೂ ಓದಿ: ರಷ್ಯಾ ತೈಲದ ಮೇಲೆ ಹೊಸ ನಿರ್ಬಂಧ: ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆ..!!
ಈ ಸಂದರ್ಭದಲ್ಲಿ ಮುಂದೆ ಬಂದ ಲಾರಿಯ ಚಕ್ರಕ್ಕೆ ಯುವತಿಯ ತಲೆ ಸಿಲುಕಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.INDO ERA Women's Straight Linen Floral Printed Kurta & Pant with Dupatta Set (IEOUT10562)