Skip to main content
ವಿಡಿಯೋ
1/3
politics

ಡಿ. 8 ಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ - ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟನೆ

By Shravanthi R
ಡಿ. 8 ಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ - ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟನೆ

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಡಿ.8 ರಂದು ದಿನಾಂಕ ನಿಗದಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ಉತ್ತರ ಕರ್ನಾಟಕದ ಶಾಸಕರು ಸಮಸ್ಯೆಗಳ ಬಗ್ಗೆ ಮಾತನಾಡದೇ ಇದ್ದಾರೆ. ಈ ಬಗ್ಗೆ ಅವರು ಸೀರಿಯೆಸ್‌ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿಯವರು, ಡಿಸೆಂಬರ್‌ 8 ಕ್ಕೆ, ಬೆಳಗಾವಿಯ ಚಳಿಗಾಲದ ಅಧಿವೇಶನವು ಆರಂಭವಾಗುತ್ತದೆ ಎಂದು ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಟ್ಟಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು. 


ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಹೊರಟ್ಟಿಯವರು, ನಿಗದಿಪಡಿಸಲಾದ ಅಧಿವೇಶನದ ದಿನಾಂಕವನ್ನು ತಿಳಿಯಪಡಿಸಿದರಲ್ಲದೇ, ಮುಂದಿನ ವಾರ ಜಿಲ್ಲೆಯ ಡಿಸಿಯೊಂದಿಗೆ ಸಭೆ ಮಾಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಶಾಸಕರು ಅಭಿವೃದ್ದಿ ವಿಚಾರವಾಗಿ ಗಂಭೀರವಾಗಿಲ್ಲ. ರಾಜಕೀಯ ನಾಯಕರ ವೈಯಕ್ತಿಕ ನಿಂದನೆಯು ತೀವ್ರ ಅಸಮಧಾನ ತಂದಿದೆ ಎಂದಿದ್ದಾರೆ. Redmi A4 5G (Starry Black, 4GB RAM, 128GB Storage) | Segment Largest 6.88in 120Hz | 50MP Dual Camera | 18W Fast Charging | Charger in The Box

ಯಾವೊಬ್ಬ ಶಾಸಕರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವುದಿಲ್ಲ. ದಕ್ಷಿಣ ಕರ್ನಾಟಕದ ಮಂದಿ ಮಾತನಾಡುವುದೂ ಇಲ್ಲಿಯವರು ಮಾತನಾಡುವುದಿಲ್ಲ. ಸ್ಥಳೀಯ ನಾಯಕರು ಪ್ರಜಾಪ್ರಭುತ್ವದಲ್ಲಿ ಇರೋವರೆಗೂ ಕೇಳೊದು ತಪ್ಪು ಅನಿಸುತ್ತದೆ. ಕಾಲ ಸುಧಾರಣೆ ಮಾಡಬೇಕಾಗಿದೆ ಹೊರತಾಗಿ, ನಮ್ಮಿಂದ ಏನೂ ಮಾಡಲಾಗದ ಸಂದರ್ಭವಿದಾಗಿದೆ. ಪ್ರಶ್ನೆ ಕೇಳಿದ ಶಾಸಕರೇ ಒಂದು ನಿಮಿಷದಲ್ಲಿ ಓಡಿ ಹೋಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನವೆಂಬರ್‌ ಕ್ರಾಂತಿ ಬಗ್ಗೆ -

“ಸಭಾಪತಿಯಾಗಿ ನನ್ನ ಧರ್ಮ, ಇದು ಯಾಕೋ ಸರಿಯಂತನಿಸುವುದಿಲ್ಲ. ಅದರ ಬಗ್ಗೆ ಮಾತನಾಡುವುದಿಲ್ಲ. ಮಾಧ್ಯಮಗಳು ಗುರುತರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು, ವಿನಾಕಾರಣ ಚರ್ಚೆ ಬೇಡ, ಬೇಕಾದಷ್ಟು ವಿಷಯಗಳಿವೆ. ಶಾಸಕರಾದವರು ಇನ್ನೊಬ್ಬರಿಗೆ ಮಾದರಿಯಾಗಿರಬೇಕು” ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನೇಪಾಳದ ಭೀಕರ ರಸ್ತೆ ಅಪಘಾತ: 700 ಅಡಿ ಕಂದಕಕ್ಕೆ ಉರುಳಿದ ಜೀಪು...8 ಮಂದಿ ಸಾವು, 10 ಗಾಯ!