Skip to main content
ವಿಡಿಯೋ
1/2
politics

ಆರ್‌ಎಸ್‌ಎಸ್ ಒಂದು ರಬ್ಬರ್ ಬಾಲ್‌ನಂತೆ: ಹೊಡೆದಷ್ಟು ಇನ್ನಷ್ಟು ಜೋರಾಗಿ ಹೊರಬೀಸುತ್ತದೆ – ಡಾ. ರಾಮ್ ಮಾಧವ್.

By Vinutha U
ಆರ್‌ಎಸ್‌ಎಸ್ ಒಂದು ರಬ್ಬರ್ ಬಾಲ್‌ನಂತೆ: ಹೊಡೆದಷ್ಟು ಇನ್ನಷ್ಟು ಜೋರಾಗಿ ಹೊರಬೀಸುತ್ತದೆ – ಡಾ. ರಾಮ್ ಮಾಧವ್.

"ಸರ್ಕಾರ ಶಾಖೆಗಳನ್ನು ನಿಲ್ಲಿಸಲು ಅಥವಾ ಅಧಿಕಾರಿಗಳ ಭಾಗವಹಿಸುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ನ್ಯಾಯಾಲಯಗಳು 30ಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿವೆ. ದೇಶ ವಿಶಾಲ, ಸಹಕರಿಸುವವರೂ ಇದ್ದಾರೆ" ಎಂದು ಅವರು ಸ್ಪಷ್ಟಪಡಿಸಿದರು.

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಯೋಜನೆ ಸಂಪೂರ್ಣ ರಾಜಕೀಯ ಉದ್ದೇಶವನ್ನು ಹೊಂದಿದೆ ಎಂದು ಇಂಡಿಯಾ ಫೌಂಡೇಷನ್ಅಧ್ಯಕ್ಷ ಡಾ. ರಾಮ್ ಮಾಧವ್ ಖಂಡಿಸಿದರು. ವಿಜಯನಗರ 1ನೇ ಹಂತದ ಜಗನ್ನಾಥ್ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ವೇದಿಕಾ ಸಭಾಂಗಣದಲ್ಲಿ ಜನಜಾಗೃತಿ ಟ್ರಸ್ಟ್ ಮತ್ತು ಮಂಥನ ಮೈಸೂರು ಸಂಸ್ಥೆಗಳು ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ, ಆರ್ಎಸ್ಎಸ್ 100 ವರ್ಷಗಳ ಆಚರಣೆ ಹಿನ್ನೆಲೆಯಲ್ಲಿ ಸಂಘದ ಪರಿಕ್ರಮೆ ಮತ್ತು ಕಾರ್ಯ ವಿಸ್ತಾರದ ಬಗ್ಗೆ ಅವರು ಮಾತನಾಡಿದರು.

 

ಹೊಡೆದಷ್ಟೇ ಜೋರಾಗಿ ಚಿಮ್ಮುವ ರಬ್ಬರ್ ಬಾಲ್"ಸಂಘವು ರಬ್ಬರ್ ಬಾಲ್ನಂತೆ. ಎಷ್ಟು ಜೋರಾಗಿ ನೆಲಕ್ಕೆ ಬಾರಿಸಿದರೂ, ಅಷ್ಟೇ ಪ್ರಮಾಣದಲ್ಲಿ ಹಿಂದೆ ಚಿಮ್ಮುತ್ತದೆ. ಹತ್ತಿಕ್ಕಿದಷ್ಟು ಸಂಘ ದೊಡ್ಡದಾಗಿ ಬೆಳೆಯುತ್ತದೆ" ಎಂದು ಡಾ. ರಾಮ್ ಮಾಧವ್ ಹೇಳಿದ್ದಾರೆ. ಕೆಲವರು ಆರ್ಎಸ್ಎಸ್ನ್ನು ನೇರವಾಗಿ ವಿರೋಧಿಸಿದರೂ, ಖಾಸಗಿಯಾಗಿ ಅದರ ಚಟುವಟಿಕೆಗಳನ್ನು ಗೌರವಿಸುತ್ತಾರೆ ಎಂದು ಅವರು ತಿಳಿಸಿದರು. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

 

ರಾಜಕೀಯ ನಾಯಕರು ತಮ್ಮ ಶಕ್ತಿಯನ್ನು ತೋರಿಸಿಕೊಳ್ಳಲು ಸಂಘ ವಿರುದ್ಧ ಮಾತನಾಡಿ ನಿಯಂತ್ರಣಕ್ಕೆ ಮುಂದಾಗುತ್ತಾರೆ. ಆದರೂ, ಒಂದು ಸ್ಥಳದಲ್ಲಿ ಚಟುವಟಿಕೆಯನ್ನು ತಡೆದರೆ, ಮತ್ತೊಂದೆಡೆ ನಡೆಸುತ್ತೇವೆ ಎಂದರು. "ಸರ್ಕಾರ ಶಾಖೆಗಳನ್ನು ನಿಲ್ಲಿಸಲು ಅಥವಾ ಅಧಿಕಾರಿಗಳ ಭಾಗವಹಿಸುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಬಗ್ಗೆ ನ್ಯಾಯಾಲಯಗಳು 30ಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿವೆ. ದೇಶ ವಿಶಾಲ, ಸಹಕರಿಸುವವರೂ ಇದ್ದಾರೆ" ಎಂದು ಅವರು ಸ್ಪಷ್ಟಪಡಿಸಿದರು.

 

ಆರ್ಎಸ್ಎಸ್ ಅರ್ಥಮಾಡಿಕೊಳ್ಳಲು ಕಷ್ಟ, ಅಪಾರ್ಥ ಸುಲಭ"ಆರ್ಎಸ್ಎಸ್ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟ, ಆದರೆ ಅಪಾರ್ಥ ಮಾಡಿಕೊಳ್ಳುವುದು ಸುಲಭ" ಎಂದು ಡಾ. ಮಾಧವ್ ಹೇಳಿದರು. ಸಂಘ ಅತಿ ಹೆಚ್ಚು ಯುವಕರನ್ನು ಹೊಂದಿರುವ ಸಂಘಟನೆಯಾಗಿದ್ದು, ಇತಿಹಾಸದಲ್ಲಿ ಇಂತಹ ಸವಾಲುಗಳನ್ನು ಎದುರಿಸಿದ ಇನ್ನೊಂದು ಸಂಸ್ಥೆ ಇಲ್ಲ ಎಂದರು. ಕೆಲವರು ತಪ್ಪು ಹೇಳಿಕೆಗಳ ಮೂಲಕ ಸಂಘದ ಬಗ್ಗೆ ತಪ್ಪು ಧಾರಣೆಗಳನ್ನು ಮೂಡಿಸಿದ್ದಾರೆ ಎಂದು ರೋಪಿಸಿದರು. ಹೈಕಮಾಂಡ್‌ ಹೇಳಿದರೆ ಸಚಿವ ಸ್ಥಾನ ತೊರೆಯಲು ಸಿದ್ದ - ಸಚಿವ ಕೃಷ್ಣ ಬೈರೇಗೌಡ ಹೇಳಿಕೆ!

 

ಆರ್ಎಸ್ಎಸ್ ಮುಖಂಡ ಜಿ. ವಾಸುದೇವ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಿಕೋದ್ಯಮಿ ವಿಕ್ರಮ್ ಮುತ್ತಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ನಲ್ಲಿ ಎಲ್ಲರ ಉದ್ದೇಶವಲ್ಲ"ಆರ್ಎಸ್ಎಸ್ ನಿಯಂತ್ರಣ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲರ ಉದ್ದೇಶವಲ್ಲ. ಹಿಡನ್ ಅಜೆಂಡಾ ಹೊಂದಿರುವ ಕೆಲವು ನಾಯಕರು ತಮ್ಮ ಬೆಳವಣಿಗೆಗಾಗಿ ಇಂತ ಮಾಡುತ್ತಿದ್ದಾರೆ" – ಡಾ. ರಾಮ್ ಮಾಧವ್, ಅಧ್ಯಕ್ಷ, ಇಂಡಿಯಾ ಫೌಂಡೇಷನ್