ಕರ್ನಾಟಕವು ಹೂಡಿಕೆದಾರ ಸ್ನೇಹಿ ಎನಿಸಿಕೊಂಡಿರುವಲ್ಲೂ ನಾನಾ ತೊಂದರೆಗಳು ಉಂಟಾಗಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಸೂಕ್ತ ಹೂಡಿಕೆ ತಾಣವಾಗಿ ಬೆಂಗಳೂರು ಸೇರಿದಂತೆ ಇನ್ನಿತರ ನಗರ ಪ್ರದೇಶಗಳಲ್ಲಿನ ಕೈಗಾರಿಕೋದ್ಯಮಿಗಳು ಭೂಮಿಯ ಲಭ್ಯತೆ ಹಾಗೂ ತಕ್ಕ ಬೆಲೆಗೆ ಸ್ವಾಧೀನ ಪ್ರಕ್ರಿಯೆಯು ಹೊಸ ಹೂಡಿಕೆದಾರರಿಗೆ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ.
ನುರಿತ ಕೆಲಸಗಾರರು, ತಂತ್ರಜ್ಞಾನ ಹಾಗೂ ಬಲವಾದ ಕಾರ್ಯತಂತ್ರಗಳಿಗೆ ರಾಜ್ಯವು ಹೆಸರುಗಳಿಸಿದ್ದರೂ ಸಹ, ಇಲ್ಲಿ ಕೈಗೆಟುಕುವ ದರದಲ್ಲಿ ಕೈಗಾರಿಕಾ ಭೂಮಿಯು ಲಭ್ಯವಾಗುತ್ತಿಲ್ಲ ಹಾಗೂ ಅದರ ಸ್ವಾಧೀನ ಪ್ರಕ್ರಿಯೆಯು ಜಟಿಲವಾಗಿದೆ ಎಂದು ಮಾಜಿ ಎಫ್‌ಕೆಸಿಸಿಐ ಅಧ್ಯಕ್ಷರು ಹಾಗೂ ಕೈಗಾರಿಕೋದ್ಯಮಿಗಳಾದ ಡಿ ಮುರಳೀಧರ್ ಅವರು ಮಾತನಾಡಿ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ. ESR for MagSafe Ring Holder, Phone Grip with 2-Way Adjustable Stand, Phone Ring Grip Holder for iPhone Air 17 16e 16 15 14 13 12, Samsung, Pixel 10, All Smartphones, Black(2 Metal Rings Included)
ವಿದ್ಯುತ್ ಪೂರೈಕೆ ಸಮಸ್ಯೆಗಳು, ಕೈಗಾರಿಕಾ ಕಾರ್ಯಾಚರಣೆ ಸೇರಿದಂತೆ ಹೊಸ ಉದ್ಯಮಗಳು ಕಾರ್ಯವಿಧಾನದ ವಿಳಂಬ, ಸ್ಪಷ್ಟತೆಯ ಕೊರತೆ ಮತ್ತು ವಿವೇಚನಾಯುಕ್ತ ನಿರ್ಧಾರ ಕೈಗೊಳ್ಳುವಲ್ಲಿ ಹಿನ್ನಡೆಯಾಗಿವೆ. ಡಿಜಿಟಲ್ ವ್ಯವಸ್ಥೆಗಳು ಸಮರ್ಥವಾಗಿಲ್ಲ. ಪಕ್ಕದ ತಮಿಳುನಾಡು, ತೆಲಂಗಾಣ ರಾಜ್ಯಗಳಿಗೆ ಹೋಲಿಸುವಂತಾಗದೇ ರಾಜ್ಯವು ಒಂದು ಹೆಜ್ಜೆ ಮುಂದಿರಬೇಕು. ಆದರೆ, ಹೂಡಿಕೆದಾರರು ಅನುಮೋದನೆಗಾಗಿ ಅನೇಕ ಇಲಾಖೆಗಳಿಗೆ ಅಲೆದಾಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾಳೆ ದ.ಕ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ