Skip to main content
ವಿಡಿಯೋ
general

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ದುರಂತ: ಶಿಕಾರಿಪುರ ಮಾಜಿ ಶಾಸಕನನ್ನು ತಿವಿದು ಕೆಳಗೆ ಎಸೆದ ಹೋರಿ

By Vinutha U
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ದುರಂತ: ಶಿಕಾರಿಪುರ ಮಾಜಿ ಶಾಸಕನನ್ನು ತಿವಿದು ಕೆಳಗೆ ಎಸೆದ ಹೋರಿ

ಹೋರಿ ಅವರನ್ನು ಎರಡು ಬಾರಿ ಕೊಂಬಿನಿಂದ ತಿವಿದಿದೆ ಮತ್ತು ಮೇಲೆಕ್ಕೆ ಎತ್ತು ಮತ್ತೆ ನೆಲಕ್ಕೆ ಎಸೆದಿದೆ. ಕೆಲವೇ ಕ್ಷಣಗಳಲ್ಲಿ ಹೋರಿ ಅಲ್ಲಿಂದ ಓಡಿಹೋಗಿದ್ದರೂ, ಘಟನೆಯಲ್ಲಿ ಮಹಾಲಿಂಗಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿವಮೊಗ್ಗ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ದುರಂತಗಳು ಕಂಡುಬರುತ್ತಿವೆ. ಸ್ಪರ್ಧೆಯಲ್ಲಿ ಯುವಕರು ಹೋರಿಯನ್ನು ಕೆರಳಿಸಿ ಓಡಾಡುತ್ತಾ ಅದರ ಎದುರು ಬಂದರೆ 'ಫಿನಿಷ್' ಎಂದೇನಿಸುತ್ತಾರೆ. ಆದರೆ ಇತ್ತೀಚೆಗೆ ಇಂತಹ ಸ್ಪರ್ಧೆಗಳಲ್ಲಿ ಪ್ರಾಣಹಾನಿ ಸೇರಿದಂತೆ ಗಂಭೀರ ಗಾಯಗಳು ಸಂಭವಿಸಿವೆ.

 

ಶಿವಮೊಗ್ಗ ಜಿಲ್ಲೆಯ ಬೆಳಗಾವಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಶಿಕಾರಿಪುರದ ಮಾಜಿ ಶಾಸಕ ಮಹಾಲಿಂಗಪ್ಪ ಅವರಿಗೆ ಗಾಯ ಆಗಿದೆ. ಸ್ಪರ್ಧೆಯನ್ನು ವೀಕ್ಷಿಸಲು ಹೋಗಿದ್ದ ಅವರು, ಒಂದು ಮನೆಯ ಬಾಗಿಲಿನ ಮುಂದೆ ನಿಂತು ನೋಡುತ್ತಿದ್ದಾಗ ಬಿಳಿ-ಬೂದು ಬಣ್ಣದ ಹೋರಿಯೊಂದು ಆಕ್ರಮಣ ಮಾಡಿದೆ. ಹೋರಿ ಅವರನ್ನು ಎರಡು ಬಾರಿ ಕೊಂಬಿನಿಂದ ತಿವಿದಿದೆ ಮತ್ತು ಮೇಲೆಕ್ಕೆ ಎತ್ತು ಮತ್ತೆ ನೆಲಕ್ಕೆ ಎಸೆದಿದೆ. ಕೆಲವೇ ಕ್ಷಣಗಳಲ್ಲಿ ಹೋರಿ ಅಲ್ಲಿಂದ ಓಡಿಹೋಗಿದ್ದರೂ, ಘಟನೆಯಲ್ಲಿ ಮಹಾಲಿಂಗಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ದೃಶ್ಯ ಸಿಸಿ ಕ್ಯಾಮರಾ ಮತ್ತು ಸ್ಥಳೀಯರ ಫೋನ್ಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಯುವಕರು-ಹುಡುಗರು ಹೋರಿಯನ್ನು ಕೆರಳಿಸುತ್ತಾ, ಅದರ ಎದುರು ಬೊಬ್ಬೆ ಹೊಡೆಯುತ್ತಾ ಓಡಾಡುವುದು ಕಂಡುಬರುತ್ತದೆ.