ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಬ್ಬನ್ ಉದ್ಯಾನ ಅಭಿವೃದ್ಧಿ ಜೊತೆಗೆ ಹೈಕೋರ್ಟ್ ಸ್ಥಳಾಂತರದ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಕಬ್ಬನ್ ಪಾರ್ಕ್ ನಲ್ಲಿ ಇಂದು ನಡೆದ ನಡಿಗೆ ಕಾರ್ಯಕ್ರಮದಲ್ಲಿ ನಾಗರೀಕರ ಜೊತೆ ಸಂವಾದ ನಡೆಸಿದ ಅವರು ಅಹವಾಲುಗಳನ್ನು ಸ್ವೀಕರಿಸಿದರು. ಉದ್ಯಾನವನದ ಉನ್ನತೀಕರಣಕ್ಕೆ ನಾಗರಿಕರು ಬೇಡಿಕೆ ಇಟ್ಟಿದ್ದು, ಬಿಡಿಎಯಿಂದ 5 ಕೋಟಿ ರೂಪಾಯಿ ಹಣದಲ್ಲಿ ಅಭಿವೃದ್ಧಿ ಮಾಡಲಾಗುವುದು ಹಾಗೂ ಅಗತ್ಯ ಉಳಿದ ಅನುದಾನವನ್ನು ತೋಟಗಾರಿಕೆ ಇಲಾಖೆಗೆ ಬಿಡುಗಡೆ ಮಾಡಲು ಸೂಚಿಸಲಾಗುವುದು. ಉದ್ಯಾನದ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳಿಗೆ ಆಸ್ಪದ ನೀಡದೇ, ಉದ್ಯಾನಗಳ ರಕ್ಷಣೆ ಆಗಬೇಕೆಂದು ತಿಳಿಸಿದ್ದಾರೆ