ಪಾಕಿಸ್ತಾನ; ಹೌದು, ವರದಿಗಳ ಪ್ರಕಾರ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಇತ್ತೀಚಿನ ಹೇಳಿಕೆಯ ನಂತರ ಪಾಕಿಸ್ತಾನ ಸರ್ಕಾರವು ಅವರನ್ನು ಉಗ್ರಗಾಮಿ ನಿಗಾ ಪಟ್ಟಿಗೆ ಸೇರಿಸಿದೆ. ರಿಯಾದ್ನಲ್ಲಿ ನಡೆದ 'ಜಾಯ್ ಫೋರಂ 2025' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಮಧ್ಯಪ್ರಾಚ್ಯದಲ್ಲಿ ಭಾರತೀಯ ಸಿನಿಮಾಗಳ ವ್ಯಾಪ್ತಿಯ ಬಗ್ಗೆ ಹೇಳುವಾಗ ಬಲೂಚಿಸ್ತಾನ ಮತ್ತು ಪಾಕಿಸ್ತಾನದ ಜನರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದರು. ಅವರ ಈ ಹೇಳಿಕೆಯನ್ನು ಪಾಕಿಸ್ತಾನವು ದೇಶದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾದ ಹೇಳಿಕೆ ಎಂದು ಪರಿಗಣಿಸಿದೆ.
ವರದಿಗಳ ಪ್ರಕಾರ, ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಕಾಯಿದೆ (Anti-Terrorism Act) ಅಡಿಯಲ್ಲಿ ಬರುವ 'ನಾಲ್ಕನೇ ಶೆಡ್ಯೂಲ್' (Fourth Schedule) ಪಟ್ಟಿಗೆ ಸಲ್ಮಾನ್ ಖಾನ್ ಅವರನ್ನು ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಶಂಕಿತ ವ್ಯಕ್ತಿಗಳನ್ನು ಇರಿಸಲಾಗುತ್ತದೆ. ಬಲೂಚಿಸ್ತಾನ ಸರ್ಕಾರದ ಗೃಹ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ (ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ), ಸಲ್ಮಾನ್ ಖಾನ್ ಅವರನ್ನು 'ಆಜಾದ್ ಬಲೂಚಿಸ್ತಾನದ ಸಹಾಯಕ' (Azad Balochistan Facilitator) ಎಂದು ಲೇಬಲ್ ಮಾಡಲಾಗಿದೆ ಎನ್ನಲಾಗಿದೆ.
ಸಲ್ಮಾನ್ ಖಾನ್ ಅವರ ಹೇಳಿಕೆಯನ್ನು ಬಲೂಚಿಸ್ತಾನದ ಪ್ರತ್ಯೇಕತಾವಾದಿ ನಾಯಕರು ಬೆಂಬಲಿಸಿದ್ದು, ಇದು ಬಲೂಚ್ ಜನರಿಗೆ ಸಂತೋಷ ತಂದಿದೆ ಎಂದು ಹೇಳಿದ್ದಾರೆ.TRASE Block Heels Sandals For Women,
ವಿವಾದಕ್ಕೆ ಕಾರಣವಾದ ಸಲ್ಮಾನ್ ಖಾನ್ ಅವರ ಹೇಳಿಕೆ:- ಸೌದಿ ಅರೇಬಿಯಾದ ರಿಯಾದ್ನಲ್ಲಿ ನಡೆದ 'ಜಾಯ್ ಫೋರಂ 2025' ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರು ಭಾರತೀಯ ಸಿನಿಮಾಗಳ ಜಾಗತಿಕ ಪ್ರಭಾವದ ಬಗ್ಗೆ ಮಾತನಾಡುತ್ತಿದ್ದರು. ಆಗ ಅವರು, ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ದಕ್ಷಿಣ ಏಷ್ಯಾದ ವಲಸಿಗರ ಬಗ್ಗೆ ಹೇಳುವಾಗ, "ಇಲ್ಲಿ ಬಲೂಚಿಸ್ತಾನದ ಜನರೂ ಇದ್ದಾರೆ, ಅಫ್ಘಾನಿಸ್ತಾನದ ಜನರೂ ಇದ್ದಾರೆ, ಪಾಕಿಸ್ತಾನದ ಜನರೂ ಇದ್ದಾರೆ. ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದರು. ಇದನ್ನು ಓದಿ; ರಿಲಯನ್ಸ್ ಇಂಡಸ್ಟ್ರೀಸ್ & ಮೆಟಾ ಜಂಟಿ ಉದ್ಯಮದ ಸಹಭಾಗಿತ್ವ; ಭಾರತದ AI ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ
ಬಲೂಚಿಸ್ತಾನದ ಮತ್ತು ಪಾಕ್‌ನ ಜನರನ್ನು ಬೇರೆ ಬೇರೆ ರೀತಿಯಲ್ಲಿ ಉಲ್ಲೇಖಿಸಿದ ಕಾರಣ ಪಾಕ್ ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ ಆದರೆ ಪಾಕ್ ಸರ್ಕಾರದಿಂದ ಇನ್ನೂ ಅಂತಿಮವಾಗಿ ಕನ್ಪರ್ಮ್ ಆಗಿಲ್ಲ ಹಾಗೂ ಅಸಲಿಯಾಗಿ ಬಲೂಚ್ ಇನ್ನು ಪಾಕ್‌ನ ನೆರಳಲ್ಲಿದೆ.