ಇಸ್ಲಾಂಪುರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಲೀಂ ಪಾಷಾ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ. ಬಾಬಾ ಅವರು ತಿಳಿಸಿದ್ದಾರೆ. ಮಟನ್ ಅಂಗಡಿಯಲ್ಲಿ ಸಲೀಂ ಪಾಷಾ ಕುಳಿತಿದ್ದಾಗ, ಒಬ್ಬ ವ್ಯಕ್ತಿ ಬಂದು ಯಾರೋ ಒಬ್ಬರ ಹೆಸರು ತೆಗೆದುಕೊಂಡು "ಆತನಿಂದ" ಎಂದು ಹೇಳಿ ಗುಂಡು ಹಾರಿಸಿದ್ದಾರೆ. ಒಂದು ರೌಂಡ್ ಗುಂಡು ನುಡಿದ್ದು, ತೋಳಿನ ಕೆಳಗೆ ಗಾಯವಾಗಿದೆ.
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ, ಆರೋಪಿಗಳನ್ನು ಹಿಡಿಯಲು ಎರಡು ತಂಡಗಳನ್ನು ರಚಿಸಲಾಗಿದ್ದು, ಆದಷ್ಟು ತ್ವರಿತವಾಗ ಅವರನ್ನು ಬಂಧಿಸುತ್ತೇವೆ ಎಂದರು. 2021 ರಲ್ಲಿ ಇದೇ ಸಲೀಂ ಪಾಷಾ ಅವರ ಮೇಲೆ ದಾಳಿ ಮಾಡಿಸಿದವರೇ ಈ ಬಾರಿಯೂ ಈ ಕೃತ್ಯಕ್ಕೆ ಮೂಲೆಯಾಗಿರಬಹುದು ಎಂಬ ಆರೋಪಗಳು ಕೇಳಿಬರುತ್ತಿವೆ. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z
ನಾವು ಇದನ್ನು ಆಳವಾಗಿ ಪರಿಶೀಲಿಸಿ ತನಿಖೆ ನಡೆಸುತ್ತೇವೆ ಎಂದು ಎಸ್‌ಪಿ ಅವರು ಹೇಳಿದ್ದಾರೆ. ನೆಲಮಂಗಲ ಗ್ರಾಮ ಠಾಣೆಯಲ್ಲಿ ಕೊಲೆಯ ಪ್ರಯತ್ನ ಮತ್ತು ಆರ್ಮ್ಸ್ ಆಕ್ಟ್ ಅಡಿ ಕೇಸು ದಾಖಲಾಗಿದೆ. ಗಾಯಾಳು ಸಲೀಂ ಪಾಷಾ ಸದ್ಯ ಪ್ರಾಣಪಾಯದಿಂದ ಮೀರಿ ಸುರಕ್ಷಿತರಾಗಿದ್ದಾರೆ.