Skip to main content
ವಿಡಿಯೋ
1/2
general

ಅಕ್ರ*ಮ ಸಂಬಂಧಕ್ಕೆ ಬಲಿಯಾದ ಮಹಾರಾಷ್ಟ್ರ ಯುವಕ – ಕಟ್ಟಿಹಾಕಿ ದೊಣ್ಣೆಯಿಂದ ಕ್ರೂರ ಹ*ಲ್ಲೆ..!

By Vinutha U
 ಅಕ್ರ*ಮ ಸಂಬಂಧಕ್ಕೆ ಬಲಿಯಾದ ಮಹಾರಾಷ್ಟ್ರ ಯುವಕ – ಕಟ್ಟಿಹಾಕಿ ದೊಣ್ಣೆಯಿಂದ ಕ್ರೂರ ಹ*ಲ್ಲೆ..!

ಕಳೆದ ಒಂದು ವರ್ಷದಿಂದ ಬೀದರ್ ಜಿಲ್ಲೆಯ ಚಿಂತಾಕಿ ತಾಲೂಕಿನ ನಾಗನಪಳ್ಳಿ ಗ್ರಾಮದ ವಿವಾಹಿತ ಮಹಿಳೆ ಪೂಜಾ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷ್ಣು, ಈ ಸಂಬಂಧದಿಂದಾಗಿ ಜೀವವನ್ನು ಕಳೆದುಕೊಂಡಿದ್ದಾನೆ. ಅಕ್ಟೋಬರ್ 21ರಂದು ವಿಷ್ಣು ತನ್ನ ಇಬ್ಬರು ಸ್ನೇಹಿತರೊಂದಿಗೆ ಪೂಜಾ ಅವರ ಮನೆಗೆ ಆಗಮಿಸಿದ್ದ.

ಬೀದರ್: ಕರ್ನಾಟಕದ 'ಕಿರೀಟ' ಎಂದೇ ಪ್ರಸಿದ್ಧವಾಗಿರುಚ ಬೀದರ್ ಜಿಲ್ಲೆಯಲ್ಲಿ ಘೋರ ದುರಂತ ನಡೆದಿದೆ. ಮಹಾರಾಷ್ಟ್ರ ಮೂಲದ ಯುವಕನೊಬ್ಬನನ್ನು ಅಕ್ರಮ ಸಂಬಂಧದ ಹೆಸರಿನಲ್ಲಿ ಕಟ್ಟಿಹಾಕಿ ದೊಣ್ಣೆಯಿಂದ ಮನಬಂದಂತೆ ಬಡಿದು ಕೊಂದಿರುವ ಘಟನೆ ನಡೆದಿದೆ. ಬಿಹಾರ್, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಸಾಮಾನ್ಯವಾಗಿರುವ ಇಂತಹ ಕೃತ್ಯ ಈಗ ಕರ್ನಾಟಕದಲ್ಲೂ ತಲುಪಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.

 

ಪ್ರೀತಿಯಲ್ಲಿ ಬಿದ್ದವರ ಮೇಲೆ ಕುಟುಂಬದ ಕ್ರೂರತೆ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗೌನಗಾಂವ್ ಗ್ರಾಮದ ನಿವಾಸಿ ವಿಷ್ಣು ಎಂಬ ಯುವಕನು ಮೃತಪಟ್ಟಿದ್ದಾನೆ. ಕಳೆದ ಒಂದು ವರ್ಷದಿಂದ ಬೀದರ್ ಜಿಲ್ಲೆಯ ಚಿಂತಾಕಿ ತಾಲೂಕಿನ ನಾಗನಪಳ್ಳಿ ಗ್ರಾಮದ ವಿವಾಹಿತ ಮಹಿಳೆ ಪೂಜಾ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷ್ಣು, ಸಂಬಂಧದಿಂದಾಗಿ ಜೀವವನ್ನು ಕಳೆದುಕೊಂಡಿದ್ದಾನೆ. ಅಕ್ಟೋಬರ್ 21ರಂದು ವಿಷ್ಣು ತನ್ನ ಇಬ್ಬರು ಸ್ನೇಹಿತರೊಂದಿಗೆ ಪೂಜಾ ಅವರ ಮನೆಗೆ ಆಗಮಿಸಿದ್ದ. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ಸಂದರ್ಭದಲ್ಲಿ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿ, ಮಾತಿನ ಚಕಮಕಿ ನಡೆಯಿತು. ಆಕೆಯ ತಂದೆ ಅಶೋಕ್ ಮತ್ತು ಸಹೋದರ ಗಜಾನನ್ ಸೇರಿದಂತೆ ಕುಟುಂಬದವರು ವಿಷ್ಣುವಿನ ಕೈ-ಕಾಲುಗಳನ್ನು ಕಟ್ಟಿಹಾಕಿ, ದೊಣ್ಣೆಗಳಿಂದ ಮನಬಂದಂತೆ ಕ್ರೂರ ಹಲ್ಲೆ ನಡೆಸಿದ್ದಾರೆ. ಮಗನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆದಿದೆ ಎಂದು ಆರೋಪಿಸಿ, ಮೃತ ವಿಷ್ಣು ಅವರ ತಾಯಿ ಲಕ್ಷ್ಮೀ ಅವರು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

 

ಅಕ್ರಮ ಸಂಬಂಧದ ಶಂಕೆಯಿಂದಾಗಿ ಘಟನೆ ನಡೆದಿದೆ ಎಂದು ಹೇಳಿ, ಪೂಜಾ ಅವರೂ ಕುಟುಂಬದ ಪರವಾಗಿ ಚಿಂತಾಕಿ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ, ಹಲ್ಲೆ ನಡೆಸಿ ಕೊಲೆಗೊಳಿಸಿದ ಆರೋಪದಲ್ಲಿ ಅಶೋಕ್ ಮತ್ತು ಗಜಾನನ್ ಅವರನ್ನು ಚಿಂತಾಕಿ ಪೊಲೀಸರು ಬಂಧಿಸಿದ್ದಾರೆ. ಯುವಕನ ಕೊಲೆಯ ನಿಖರ ಕಾರಣಗಳು ತನಿಖೆಯಿಂದ ಬಹಿರಂಗವಾಗುತ್ತವೆ. ಹಲ್ಲೆಯ ಸಂದರ್ಭದಲ್ಲಿ ಯಾರೋ ಒಬ್ಬರು ಮೊಬೈಲ್ನಲ್ಲಿ ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಸಂಪುಟ ಪುನಾರಚನೆ ದೋಣಿ ಸಿದ್ದ...ನವೆಂಬರ್‌ನಲ್ಲಿ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಗೆ ಸಜ್ಜು!

 

ಘಟನೆಯ ಸುದ್ದಿ ತಿಳಿದು ಚಿಂತಾಕಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಂಭೀರವಾಗಿ ಗಾಯಗೊಂಡ ವಿಷ್ಣುವನ್ನು ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ತೀವ್ರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸ್ತ್ರೀ-ಪುರುಷ ಸಂಬಂಧಗಳಲ್ಲಿ ಉದ್ಭವಿಸುವ ಸಮಸ್ಯೆಗಳು ಮತ್ತು ಕಾನೂನುಬಾಹಿರ ಕ್ರಮಗಳ ಬಗ್ಗೆ ಚಿಂತೆ ವ್ಯಕ್ತವಾಗುತ್ತಿದೆ. ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದ್ದು, ಘಟನೆಯ ಹಿನ್ನೆಲೆಯನ್ನು ಸಂಪೂರ್ಣವಾಗಿ ತಿಳಿಸುವ ಭರವಸೆಯಿದೆ.