ದೂರದ ಬೆಟ್ಟ ನುಣ್ಣಗೆ ಎಂಬ ಮಾತಿದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಅನ್ವಯಿಸುತ್ತದೆ. ಹೊರಗಿನಿಂದ ಬಣ್ಣಬಣ್ಣವಾಗಿ ಕಾಣುವ ಈ ಲೋಕದಲ್ಲಿ ಹಲವು ವೇಷಭೂಷಣಧಾರಿಗಳಿದ್ದಾರೆ. ವಿಶೇಷವಾಗಿ ನಾಯಕಿಯಾಗಲು ಬರುವ ಹಲವರಿಗೆ ಚಿತ್ರರಂಗವು ಕಲ್ಲುಮುಳ್ಳಿನ ಹಾದಿಯೇ ಆಗಿದೆ. ಇಲ್ಲಿ ಪ್ರತಿ ಹೆಜ್ಜೆಯಲ್ಲೂ ಸವಾಲುಗಳು ಎದುರಾಗುತ್ತವೆ.
ಕೆಲವೊಮ್ಮೆ ಪಾತ್ರಕ್ಕಾಗಿ ಅಸಹಜ ಬೇಡಿಕೆಗಳಿಗೆ ಒಪ್ಪಿಕೊಳ್ಳದಿದ್ದರೆ ಅವಕಾಶಗಳು ಸಿಗುವುದಿಲ್ಲ ಎಂಬಂತಹ ವ್ಯವಸ್ಥೆಗಳು ಕಲಾವಿದರಿಗೆ ಮಾನಸಿಕ ಹಿಂಸೆ ನೀಡುತ್ತವೆ. ಒಟ್ಟಿನಲ್ಲಿ ಚಿತ್ರರಂಗದಲ್ಲಿ ಹೆಸರು ಮಾಡಿದವರು ಅಥವಾ ಹೆಸರು ಮಾಡಲಾಗದೆ ಮರಳಿದವರು, ಒಂದಲ್ಲ ಒಂದು ದಿನ, ಒಂದಲ್ಲ ಒಂದು ರೀತಿಯಲ್ಲಿ ಈ ಝಗಮಗ ಲೋಕದ ವಿರೂಪತೆಯನ್ನು ಕಂಡು ಬೆಚ್ಚಿಬಿದ್ದಿರುತ್ತಾರೆ.Columbia Mens Hatana Max Outdry Hiking-Trekking Shoe Green
ಇದಕ್ಕೆ ಡಾಲಿ ಸಿಂಗ್ ಅವರೇ ಒಂದು ಉದಾಹರಣೆ. ಹೌದು, ಬಾಲಿವುಡ್‌ನ ಸುಂದರಿ ಡಾಲಿ ಸಿಂಗ್, 'ಥ್ಯಾಂಕ್ ಯೂ ಫಾರ್ ಕಮಿಂಗ್', 'ಡಬಲ್ ಎಕ್ಸ್ ಎಲ್', 'ಭಾಗ್ ಬಿನ್ನಿ ಭಾಗ್' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಹೌದು.
ಡಾಲಿ ಸಿಂಗ್ ತಮ್ಮ 19ನೇ ವಯಸ್ಸಿನಲ್ಲಿ ನಡೆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. 'ಜೂಮ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಾಲಿ, "ನನಗೆ ಆಗ 19-20 ವರ್ಷ. ದೆಹಲಿಯಲ್ಲಿ ಅವಕಾಶಗಳಿಗಾಗಿ ಅಲೆಯುತ್ತಿದ್ದ ದಿನಗಳವು" ಎಂದು ಆ ದಿನಗಳನ್ನು ನೆನಪಿಸಿಕೊಂಡರು.ಅಶ್ವಿನಿ ಗೌಡಗೆ ಬಿಗ್‌ಬಾಸ್‌ನಲ್ಲಿ ಸುದೀಪ್ ಶಿಕ್ಷೆ...ತಪ್ಪೊಪ್ಪಿಕೊಂಡು ಏನ್ ಮಾಡಿದ್ರು ಗೊತ್ತಾ?
"ದೆಹಲಿಯಲ್ಲಿ ಓಡಾಡುತ್ತಿದ್ದಾಗ ಒಬ್ಬ ಕಾಸ್ಟಿಂಗ್ ಡೈರೆಕ್ಟರ್‌ಗೆ ನಾನು ಕರೆ ಮಾಡಿದ್ದೆ. ಮೊದಲ ಮಾತುಕತೆಯಲ್ಲೇ ಅವರ ಮಾತುಗಳು ತುಂಬಾ ವಿಚಿತ್ರವಾಗಿದ್ದವು. ಆದರೂ ನಾನು ಮಾತು ಮುಂದುವರೆಸಿದೆ. ಏಕೆಂದರೆ ನಾವು ಹೊಸಬರು, ಮಾತನಾಡದಿದ್ದರೆ ಕೆಲಸದಲ್ಲಿ ಆಸಕ್ತಿ ಇಲ್ಲ ಎಂದು ಅವರಿಗೆ ಅನಿಸಬಹುದು. ಹಾಗಾಗಿ ಮನಸ್ಸಿಲ್ಲದಿದ್ದರೂ ಆ ದಿನ ನಾನು ಅವರೊಂದಿಗೆ ಬಹಳಷ್ಟು ಸಮಯ ಮಾತನಾಡಿದೆ" ಎಂದು ಡಾಲಿ ಹೇಳಿದ್ದಾರೆ.
ಮುಂದುವರಿದು ಡಾಲಿ, "ನಂತರ ಆ ವ್ಯಕ್ತಿ ನನ್ನನ್ನು ಹೊಟೇಲ್‌ಗೆ ಕರೆದರು, ನಿರ್ಮಾಪಕರನ್ನು ಭೇಟಿ ಮಾಡಿಸುತ್ತೇನೆ ಬನ್ನಿ ಎಂದರು. ನಾನು ಕೂಡ ಸಂತೋಷದಿಂದ ಅಲ್ಲಿಗೆ ಹೋದೆ. ನಂತರ ನಿರ್ಮಾಪಕರು ಬಂದರು. ಅವರು ಬಂದ ಕೂಡಲೇ ಕುಡಿಯಲು ಶುರುಮಾಡಿದರು. ಅದೃಷ್ಟವಶಾತ್ ನನಗೆ ಕುಡಿಯುವ ಅಭ್ಯಾಸವಿಲ್ಲ, ಹಾಗಾಗಿ ನಾನು ಸುಮ್ಮನೆ ಕುಳಿತಿದ್ದೆ" ಎಂದರು.
"ನಂತರ ನಾವು ಕಾರಿನಲ್ಲಿ ಹಿಂತಿರುಗುವಾಗ ಆ ನಿರ್ಮಾಪಕ ಹಠಾತ್ತಾಗಿ ನನಗೆ ಲಿಪ್ ಕಿಸ್ ಮಾಡಿದರು, ನನ್ನ ಶರ್ಟ್ ಒಳಗೆ ಕೈ ಹಾಕಲು ಕೂಡ ಪ್ರಯತ್ನಿಸಿದರು" ಎಂದು ಡಾಲಿ ಸಿಂಗ್ ಹೇಳಿದ್ದಾರೆ. "ಆ ಕ್ಷಣಕ್ಕೆ ನನಗೆ ನಿಂತ ನೆಲ ಕುಸಿದಂತೆ ಆಗಿತ್ತು. ಸಂಪೂರ್ಣವಾಗಿ ನಡುಗುತ್ತಿದ್ದೆ, ಏನು ಮಾಡಬೇಕೆಂದೇ ನನಗೆ ಗೊತ್ತಾಗಲಿಲ್ಲ. ನನಗೆ ಆಗ 19-20 ವಯಸ್ಸು. ಏನೂ ಹೇಳಲಾಗದ ಸ್ಥಿತಿಯಲ್ಲಿದ್ದೆ, ತಪ್ಪಿಸಿಕೊಳ್ಳಲು ಕೂಡ ಸಾಧ್ಯವಾಗಲಿಲ್ಲ" ಎಂದು ಅವರು ಸೇರಿಸಿದರು.
"ಧೈರ್ಯ ಮಾಡಿ ನನ್ನನ್ನು ಮೆಟ್ರೋ ನಿಲ್ದಾಣದ ಕಡೆ ಬಿಡುವಂತೆ ಹೇಳಿದೆ. ಮುಂದೇನು ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ. ನನ್ನ ಅದೃಷ್ಟ, ಪವಾಡ ಎಂಬಂತೆ ನಾನು ಅವನ ಕಪಿಮುಷ್ಠಿಯಿಂದ ಪಾರಾದೆ, ಮೆಟ್ರೋ ನಿಲ್ದಾಣದ ಬಳಿ ಇಳಿದುಕೊಂಡೆ" ಎಂದು ಡಾಲಿ ಸಿಂಗ್ ವಿವರಿಸಿದರು. "ಇದು ನನಗೆ ತುಂಬಾ ಅನಿರೀಕ್ಷಿತವಾಗಿತ್ತು ಮತ್ತು ಇದರಿಂದ ನಾನು ಆಘಾತಕ್ಕೊಳಗಾಗಿದ್ದೆ" ಎಂದು ಡಾಲಿ ಸಿಂಗ್ ತಿಳಿಸಿದ್ದಾರೆ.