Skip to main content
ವಿಡಿಯೋ
1/2
politics

ಹಿಂದೆ ಈದ್ಗಾ ಮೈದಾನದಲ್ಲಿ 'ಅಲ್ಲಾಹು ಅಕ್ಬರ್' ಎಂದು ಕೂಗಿದ್ದ ಯತ್ನಾಳ್: ಸಚಿವ ಎಂ.ಬಿ. ಪಾಟೀಲರ ಹೇಳಿಕೆ

By Vinutha U
ಹಿಂದೆ ಈದ್ಗಾ ಮೈದಾನದಲ್ಲಿ 'ಅಲ್ಲಾಹು ಅಕ್ಬರ್' ಎಂದು ಕೂಗಿದ್ದ ಯತ್ನಾಳ್: ಸಚಿವ ಎಂ.ಬಿ. ಪಾಟೀಲರ ಹೇಳಿಕೆ

ಇವರ ನಾಲಿಗೆ ಹರಿಬಿಟ್ಟ ಕಾರಣವೇ ಬಿಜೆಪಿಯಿಂದ ಇವರನ್ನು ಹೊರಹಾಕಿದ್ದಾರೆ, ಉಚ್ಚಾಟಿತ ಹಿಂದೂ ಹುಲಿ ಇದು. ಬಸನಗೌಡರೇ, ನಿಮ್ಮ ನಾಲಿಗೆಗೆ ಲಗಾಮು ಇರಲಿ” ಎಂದು ಯತ್ನಾಳ್‌ ಅವರನ್ನು ಟೀಕಿಸಿದರು. ಯತ್ನಾಳ್‌ ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ನಾನು ಗಂಭೀರವಾಗಿ ತೆಗೆದುಕೊಂಡರೆ ಅದು ಸರಿಯಲ್ಲ ಎಂದು ಸಚಿವರು ಹೇಳಿದರು.

ಸಚಿವ ಎಂ.ಬಿ. ಪಾಟೀಲರವರು ತಮ್ಮನ್ನು ಟೀಕಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಹಿಂದೆ ನನ್ನೊಂದಿಗೆ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದುಅಲ್ಲಾಹು ಅಕ್ಬರ್ಎಂದು ಕೂಗಿದ್ದರು. ಈಗ ಹಿಂದೂಗಳ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಯತ್ನಾಳ್ಬಗ್ಗೆ ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ ಅವರು ಏನೆಲ್ಲಾ ಹೇಳಿದ್ದಾರೆ ಕೇಳಿ ಎಂದು ಸುಗ್ಗಿ ಹಾಕಿದರು.

ಹಿಂದೆ ನನ್ನೊಂದಿಗೆ ಇವರು ಈದ್ಗಾ ಮೈದಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು. ಅಂದುಅಲ್ಲಾಹು ಅಕ್ಬರ್ಎಂದು ಕೂಗಿದ್ದಾರೆ, ಇಂದು ಹಿಂದೂಗಳ ಬಗ್ಗೆ ಮಾತಾಡುತ್ತಾರೆ. ಇವರ ನಾಲಿಗೆ ಹರಿಬಿಟ್ಟ ಕಾರಣವೇ ಬಿಜೆಪಿಯಿಂದ ಇವರನ್ನು ಹೊರಹಾಕಿದ್ದಾರೆ, ಉಚ್ಚಾಟಿತ ಹಿಂದೂ ಹುಲಿ ಇದು. ಬಸನಗೌಡರೇ, ನಿಮ್ಮ ನಾಲಿಗೆಗೆ ಲಗಾಮು ಇರಲಿಎಂದು ಯತ್ನಾಳ್ಅವರನ್ನು ಟೀಕಿಸಿದರು. ಯತ್ನಾಳ್ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ನಾನು ಗಂಭೀರವಾಗಿ ತೆಗೆದುಕೊಂಡರೆ ಅದು ಸರಿಯಲ್ಲ ಎಂದು ಸಚಿವರು ಹೇಳಿದರು. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ಯತ್ನಾಳ್ಎಲ್ಲರಿಗೂ ಬಾಯಿ ಬಿಟ್ಟಿದ್ದಾರೆ, ಈಗ ನನಗೂ ಬಾಯಿ ಬಿಟ್ಟಿದ್ದಾರೆ. ನೀವು ಯಾರಿಗಾದರೂ ಧಮ್ಕಿ ಹಾಕಿ, ನನ್ನ ಬಳಿ ಬಂದರೆ ಇದು ನಡೆಯಲ್ಲಎಂದು ಎಚ್ಚರಿಕೆ ನೀಡಿದರು. ಯತ್ನಾಳ್ಅವರಿಗೆ ಪ್ರತಿಕ್ರಿಯೆ ನೀಡಲು ದಿನಕ್ಕೆ ನಾಲ್ಕು ಪತ್ರಿಕಾಗೋಷ್ಠಿಗಳನ್ನು ನಡೆಸಬೇಕಾಗುತ್ತದೆ. ಇವರಂಥವರಿಗೆ ನಾನು ನಿರುದ್ಯೋಗಿ ಅಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಕನ್ಹೇರಿ ಶ್ರೀಗಳ ಕಡೆಯಿಂದಲೇ ಯತ್ನಾಳ್ಅವರನ್ನು ಮಾತನಾಡಿಸಲು ಹಚ್ಚಿಸಿರಬಹುದು ಎಂದೂ ಅನುಮಾನ ವ್ಯಕ್ತಪಡಿಸಿದರು. ಹಾನಗಲ್ಕುಮಾರಸ್ವಾಮಿಗಳಿಗೂ ಪಂಚಪೀಠದವರು ಬೈದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.