Skip to main content
ವಿಡಿಯೋ
1/3
cinema

ವಿಜಯ್-ರಶ್ಮಿಕಾ ಎಂಗೇಜ್‌ಮೆಂಟ್ ವಿಚಾರಕ್ಕೆ ತೆರೆ ಎಳೆದ ನ್ಯಾಷನಲ್‌ ಕ್ರಶ್! ಏನೇಳಿದ್ರು ಗೊತ್ತಾ?

By Ram Chethan
ವಿಜಯ್-ರಶ್ಮಿಕಾ ಎಂಗೇಜ್‌ಮೆಂಟ್ ವಿಚಾರಕ್ಕೆ ತೆರೆ ಎಳೆದ ನ್ಯಾಷನಲ್‌ ಕ್ರಶ್! ಏನೇಳಿದ್ರು ಗೊತ್ತಾ?

ದಿ ಗರ್ಲ್‌ಫ್ರೆಂಡ್ ಟ್ರೇಲರ್ ರಿಲೀಸ್ ಸಂದರ್ಭದಲ್ಲಿ, ರಶ್ಮಿಕಾ ಮಂದಣ್ಣ ಅಭಿಮಾನಿಗಳ ಪ್ರಶ್ನೆಗೆ ನಗು ತೋರಿ, ನಿಮಗೆ ಏನು ಅನಿಸುತ್ತದೆ? ಎಂದು ಉತ್ತರಿಸಿದರು. ನಿಜವಾದ ಎಂಗೇಜ್‌ಮೆಂಟ್ ಸುದ್ದಿ ಇನ್ನೂ ಅಧಿಕೃತವಾಗಿ ಬಾಹ್ಯವಾಗಿಲ್ಲ, ಆದರೆ ಅಭಿಮಾನಿಗಳಿಗೆ ಅವರು ಕೊಟ್ಟ ಸುಳಿವು ಕಾಳಜಿಯ ಹುಚ್ಚು ಮೂಡಿಸಿದೆ.

ಕನ್ನಡ ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಇಬ್ಬರೂ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ವದಂತಿಗಳಿವೆ. ಇತ್ತೀಚೆಗೆ, ರಹಸ್ಯವಾಗಿ ಅವರ ನಿಶ್ಚಿತಾರ್ಥ ನಡೆದಿದ್ದು, ಮುಂದಿನ ವರ್ಷ ವಿವಾಹವಾಗಲಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು.

ಈ ವದಂತಿಗಳ ಕುರಿತು ವಿಜಯ್ ಅಥವಾ ರಶ್ಮಿಕಾ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಷ್ಟೇ ಅಲ್ಲದೆ, ಈ ಬಗ್ಗೆ ಯಾವುದೇ ಫೋಟೋ ಅಥವಾ ವಿಡಿಯೋಗಳು ಬಹಿರಂಗವಾಗಿಲ್ಲ. ಸಿಇತ್ತೀಚೆಗೆ ಗಮನ ಸೆಳೆದ ದಿ ಗರ್ಲ್‌ಫ್ರೆಂಡ್‌ ಸಿನಿಮಾದ ಟ್ರೇಲರ್, ಮುಂದಿನ ವಾರ ರಿಲೀಸ್ ಆಗಲಿದ್ದು, ಸದ್ಯ ರಶ್ಮಿಕಾ ನಿಮಾದ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. Titan Neo Splash Quartz Analog with Day-Date Black Dial Metallic Brown Stainless Steel Strap Watch for Men - NT1805QM05

ಈ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣಲಿದೆ. ಅಲ್ಲು ಅರವಿಂದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಬಳಿಕ ಚಿತ್ರತಂಡ ಅಭಿಮಾನಿಗಳೊಂದಿಗೆ ಸಂವಾದ ನಡೆಸಿತು. ಈ ವೇಳೆ ಹಲವು ಪ್ರಶ್ನೆಗಳು ಎದುರಾದವು.ರಘು ವಿರುದ್ಧ ಫೇವರಿಸಂ ಆರೋಪ ... ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಗರಂ ಆಗಿದ್ದು ಯಾಕೆ ಗೊತ್ತಾ?

ಅಭಿಮಾನಿಯೊಬ್ಬರು, ಮೇಡಂ, ನಿಮಗೂ ವಿಜಯ್ ದೇವರಕೊಂಡಗೂ ಎಂಗೇಜ್‌ಮೆಂಟ್ ಆಯ್ತಂತೆ, ನಿಜವೇ? ಸ್ಪಷ್ಟಪಡಿಸಿ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ರಶ್ಮಿಕಾ, ನಿಮಗೆ ಏನು ಅನಿಸುತ್ತದೆ? ಎಂದು ಮರುಪ್ರಶ್ನೆ ಹಾಕಿದರು. ತಕ್ಷಣವೇ ಅಲ್ಲಿದ್ದವರೆಲ್ಲಾ ಹೌದು ಎಂದು ಕಿರುಚಿದರು. ಅಭಿಮಾನಿಗಳು ನಮಗೆ ನಿಮ್ಮ ಉತ್ತರ ಬೇಕು ಎಂದಾಗ, ರಶ್ಮಿಕಾ ನಕ್ಕು, ಯಾವಾಗ ಹೇಳಬೇಕೋ, ಆಗ ಹೇಳುತ್ತೇನೆ ಎಂದರು. ಪ್ಲೀಸ್ ಹೇಳಿ ಮೇಡಂ ಎಂದು ಮತ್ತೊಮ್ಮೆ ಕೇಳಿದಾಗ, ರಶ್ಮಿಕಾ ನಿಮಗೆ ಏನು ಅನಿಸುತ್ತೋ ಅದೇ ಎಂದು ಸುಳಿವು ನೀಡಿದರು.