Skip to main content
ವಿಡಿಯೋ
1/3
cinema

ಬಿಗ್‌ಬಾಸ್ ಕನ್ನಡ ಶೋಗೆ ಸ್ಪರ್ಧಿಗಳ ಆಯ್ಕೆ ಹೇಗಿರುತ್ತೆ? ಯಾರು ಕರೆ ಮಾಡ್ತಾರೆ? ಆಮೇಲೆ ಏನೆಲ್ಲಾ ಆಗುತ್ತೆ?

By Ram Chethan
ಬಿಗ್‌ಬಾಸ್ ಕನ್ನಡ ಶೋಗೆ ಸ್ಪರ್ಧಿಗಳ ಆಯ್ಕೆ ಹೇಗಿರುತ್ತೆ? ಯಾರು ಕರೆ ಮಾಡ್ತಾರೆ? ಆಮೇಲೆ ಏನೆಲ್ಲಾ ಆಗುತ್ತೆ?

ಬಿಗ್‌ಬಾಸ್ ಸೀಸನ್ 12 ನಿಂದ ಹೊರಬಂದ ಅಮಿತ್, ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯ ಅಂತರಂಗವನ್ನು ಬಹಿರಂಗಪಡಿಸಿದ್ದಾರೆ. ಪ್ರೊಡಕ್ಷನ್ ಹೌಸ್‌ನಿಂದಲೇ ಕರೆ ಬಂದು, ಖಾಸಗಿ ಸಂದರ್ಶನಗಳ ನಂತರ ಆಯ್ಕೆ ನಡೆಯುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್' ತನ್ನ 11 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರಸ್ತುತ 12ನೇ ಸೀಸನ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ದೊಡ್ಮನೆಗೆ ಕಾಲಿಡಲು ಅನೇಕರು ಕನಸು ಕಾಣುತ್ತಾರೆ, ಏಕೆಂದರೆ ಇಲ್ಲಿ ಭಾಗವಹಿಸುವುದರಿಂದ ಜನಪ್ರಿಯತೆ, ಉತ್ತಮ ಬಹುಮಾನ ಮತ್ತು ವೃತ್ತಿಜೀವನಕ್ಕೆ ಹೊಸ ತಿರುವು ಸಿಗುತ್ತದೆ.

ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಲು ಅನೇಕ ಸ್ಪರ್ಧಿಗಳು ಹರಸಾಹಸ ಪಡುತ್ತಾರೆ. ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಹಲವರು ಈ ಹಿಂದೆ ಸ್ಪರ್ಧಿಸಿ ಬಹುಮಾನ ಗೆದ್ದ ಉದಾಹರಣೆಗಳಿವೆ. ಸಿನಿಮಾ ನಟ-ನಟಿಯರು, ಕಿರುತೆರೆ ಕಲಾವಿದರು, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು, ಮತ್ತು ವಿವಾದಿತ ವ್ಯಕ್ತಿಗಳು ಸಹ ಸ್ಪರ್ಧಿಗಳಾಗಿ ಆಯ್ಕೆಯಾಗುತ್ತಾರೆ.

ಹೊಸ ಸೀಸನ್ ಆರಂಭವಾದಾಗಲೆಲ್ಲಾ ಸ್ಪರ್ಧಿಗಳ ಬಗ್ಗೆ ಕುತೂಹಲ ಮೂಡುತ್ತದೆ. ಸಾಮಾನ್ಯವಾಗಿ ಗ್ರ್ಯಾಂಡ್ ಓಪನಿಂಗ್ ದಿನದಂದೇ ಸ್ಪರ್ಧಿಗಳ ಪಟ್ಟಿ ಬಹಿರಂಗಗೊಳ್ಳುತ್ತದೆ. ಆದರೆ, ಈ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಸೀಸನ್ 12ರಲ್ಲಿ ಎಲಿಮಿನೇಟ್ ಆದ ಅಮಿತ್‌ ಸ್ಪರ್ಧಿಗಳನ್ನು ಆಯೋಜಕರೇ ಸಂಪರ್ಕಿಸುತ್ತಾರೆ ಹೊರತು, ಸ್ವಯಂ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.Titan Neo Splash Quartz Analog with Day-Date Black Dial Metallic Brown Stainless Steel Strap Watch for Men - NT1805QM05

ತಮಗೆ ಸುಮಾರು ಮೂರು ತಿಂಗಳ ಮುಂಚೆ ಪ್ರೊಡಕ್ಷನ್ ಹೌಸ್‌ನಿಂದ ಕರೆ ಬಂದಿತ್ತು ಎಂದು ಅಮಿತ್ ತಿಳಿಸಿದ್ದಾರೆ. "ನಿಮ್ಮನ್ನು ಮೂರ್ನಾಲ್ಕು ತಿಂಗಳಿನಿಂದ ಗಮನಿಸುತ್ತಿದ್ದೇವೆ. ನಿಮ್ಮಂತಹವರು ಮನೆ ಒಳಗೆ ಹೋದರೆ ಚೆನ್ನಾಗಿರುತ್ತದೆ. ನಿಮ್ಮ ಹೆಸರು ತೆಗೆದುಕೊಳ್ಳಬಹುದಾ?" ಎಂದು ಕೇಳಿದ್ದರು ಎಂದು ಅಮಿತ್ ನೆನಪಿಸಿಕೊಂಡಿದ್ದಾರೆ.

ಮೊದಲಿಗೆ ಬಿಗ್‌ಬಾಸ್‌ಗೆ ಹೋಗುವ ಮನಸ್ಸು ಇರಲಿಲ್ಲ, ಆದರೆ ಒಂದು ಅವಕಾಶ ನೋಡೋಣ ಎಂದು ಅಮಿತ್ ನಿರ್ಧರಿಸಿದ್ದರು. ಬಳಿಕ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆದು, ಚಾನೆಲ್ ಕಡೆಯಿಂದ ಕರೆ ಬಂದಿತ್ತು. "ಚಾನೆಲ್ ಮುಖ್ಯಸ್ಥರು ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದೆ. ಆಗ ನನ್ನ ಜೀವನದ ಎಲ್ಲಾ ವಿಚಾರಗಳನ್ನು ಕೇಳಿದರು, ಬಾಲ್ಯದಿಂದ ಹಿಡಿದು ಈಗಿನವರೆಗಿನ ಘಟನೆಗಳು, ಯಾವುದೇ ಆಘಾತಕಾರಿ ಅನುಭವಗಳಿವೆಯೇ ಎಂದು ಪ್ರಶ್ನಿಸಿದರು" ಎಂದು ಅಮಿತ್ ವಿವರಿಸಿದ್ದಾರೆ.ಇದನ್ನು ಓದಿ:ರಘು ವಿರುದ್ಧ ಫೇವರಿಸಂ ಆರೋಪ ... ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಗರಂ ಆಗಿದ್ದು ಯಾಕೆ ಗೊತ್ತಾ?

ಅಮಿತ್ ಅವರ ನೇರ ಮಾತಿನ ವ್ಯಕ್ತಿತ್ವ ಆಯೋಜಕರಿಗೆ ಇಷ್ಟವಾಗಿತ್ತು. ಕಾರ್ಯಕ್ರಮ ಆರಂಭವಾಗುವ ಒಂದು ತಿಂಗಳ ಮೊದಲು, ಸಿದ್ಧತೆ ಮಾಡಿಕೊಳ್ಳಲು ಮತ್ತು ಬಟ್ಟೆಗಳನ್ನು ಖರೀದಿಸಲು ತಿಳಿಸಲಾಗಿತ್ತು. ಆದರೆ, ಈ ವಿಷಯವನ್ನು ಯಾರಿಗೂ ಬಹಿರಂಗಪಡಿಸದಂತೆ ಸೂಚಿಸಲಾಗಿತ್ತು.

ತಮ್ಮ ಆಪ್ತರಿಗೆ ಮಾತ್ರ ಮಾಹಿತಿ ನೀಡಿದ ಅಮಿತ್, "ಬಟ್ಟೆ, ಶೂಗಳು, ಮತ್ತು ಇತರೆ ಸಾಮಗ್ರಿಗಳನ್ನು ಖರೀದಿಸಲು ಸುಮಾರು ₹1.5 ಲಕ್ಷ ಖರ್ಚಾಗಿತ್ತು. ಆದರೆ, ಕೇವಲ ಒಂದು ವಾರದಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದು ಬೇಸರ ತಂದಿತು" ಎಂದು ಅಮಿತ್ ಹೇಳಿದ್ದಾರೆ.