ಕಾರವಾರ, ಅಕ್ಟೋಬರ್ 28: ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 1 ಕೋಟಿ ರೂಪಾಯಿ ನಗದು ಹಣವನ್ನು ಕಾರವಾರ ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಜಪ್ತು ಮಾಡಿದ್ದಾರೆ. ಬಸ್‌ನ ತಪಾಸಣೆಯ ಸಂದರ್ಭದಲ್ಲಿ ಕಲ್ಪೇಶ್ ಕುಮಾರ್ ಮತ್ತು ಬೊಂಬ್ರಾ ರಾಮ್ ಎಂಬ ಇಬ್ಬರು ವ್ಯಕ್ತಿಗಳ ಬ್ಯಾಗ್‌ಗಳಲ್ಲಿ ಹಣವು ಪತ್ತೆಯಾಗಿದೆ. ಗೋವಾದಿಂದ ಬೆಂಗಳೂರು ಕಡೆಗೆ ಈ ಹಣವನ್ನು ಸಾಗಿಸುವ ಯತ್ನದಲ್ಲಿದ್ದರು.
ಇದು 'ಎಮ್‌ಎಕ್ಸ್‌ಒಎನ್ ಎಲೆಕ್ಟ್ರಿಕಲ್ ಹಾರ್ಡ್‌ವೇರ್' ಕಂಪನಿಗೆ ಸೇರಿದ್ದು ಎಂದು ದೃಢಪಟ್ಟಿದೆ. ತೆರಿಗೆ ತಪ್ಪಿಸುವ ಉದ್ದೇಶದಿಂದ ಬ್ಯಾಗ್‌ಗಳಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಜಪ್ತಿ ಮಾಡಿದ ಹಣವನ್ನು ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.