Skip to main content
ವಿಡಿಯೋ
1/3
general

ಅಮೆಜಾನ್ ಲೇಆಫ್‌ ಅಬ್ಬರ..30,000 ಉದ್ಯೋಗಿಗಳ ಭವಿಷ್ಯ ಅಂಧಕಾರದಲ್ಲಿ!

By Pavitra Ganapathi Baradavalli
ಅಮೆಜಾನ್ ಲೇಆಫ್‌ ಅಬ್ಬರ..30,000 ಉದ್ಯೋಗಿಗಳ ಭವಿಷ್ಯ ಅಂಧಕಾರದಲ್ಲಿ!

ಇ-ಕಾಮರ್ಸ್ ದೈತ್ಯ ಅಮೆಜಾನ್ ಉದ್ಯೋಗ ಕಡಿತಕ್ಕೆ ಹೊರಟಿವೆ. ಅಮೆಜಾನ್ 30,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, 3.5 ಲಕ್ಷ ಸಿಬ್ಬಂದಿಯಿಂದ ಶೇ. 10ರಷ್ಟು ಮೇಲೆ ಪರಿಣಾಮ ಬೀರುತ್ತಿದೆ.

ಇ-ಕಾಮರ್ಸ್ ದೈತ್ಯ ಅಮೆಜಾನ್, ತನ್ನ ಉದ್ಯೋಗಿಗಳಿಗೆ ಮತ್ತೊಮ್ಮೆ ದೊಡ್ಡ ಆಘಾತ ನೀಡಿದೆ. ವರದಿಗಳ ಪ್ರಕಾರ, ಕಂಪನಿಯು ಸುಮಾರು 30,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಇದು ಅಮೆಜಾನ್‌ನ ಒಟ್ಟು 15.5 ಲಕ್ಷ ಉದ್ಯೋಗಿಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ್ದಾಗಿದ್ದರೂ, ಕಂಪನಿಯ 3.5 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಶೇ. 10ರಷ್ಟನ್ನು ಪ್ರತಿನಿಧಿಸುತ್ತದೆ.ಇದನ್ನೂ ಓದಿ: ನವೆಂಬರ್ ಕಾಂಗ್ರೆಸ್ ಹೈಕಮಾಂಡ್ ಸಭೆಗೆ ಸಿದ್ಧತೆ: ಡಿಕೆ ಶಿವಕುಮಾರ್ ಮೌನ ನಡೆ, ದೆಹಲಿ ಭೇಟಿಯ ಬೆನ್ನಲ್ಲೇ ಅಹಿಂದ ನಾಯಕರ ಸಭೆ..!

ಕಂಪನಿಯು 2022ರಲ್ಲಿ 27,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕಳೆದ ಎರಡು ವರ್ಷಗಳಿಂದ ಅಮೆಜಾನ್ ತನ್ನ ಡಿವೈಸ್‌ಗಳು, ಸಂವಹನ ಮತ್ತು ಪಾಡ್‌ಕಾಸ್ಟಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಣ್ಣ ಪ್ರಮಾಣದ ಉದ್ಯೋಗ ಕಡಿತಗಳನ್ನು ನಡೆಸುತ್ತಲೇ ಬಂದಿದೆ. ಈ ವಾರದಿಂದ ಆರಂಭವಾಗಲಿರುವ ಬೃಹತ್ ವಜಾ ಪ್ರಕ್ರಿಯೆಯು ಮಾನವ ಸಂಪನ್ಮೂಲ, ಡಿವೈಸ್‌ಗಳು ಮತ್ತು ಸೇವೆಗಳು ಹಾಗೂ ಕಾರ್ಯಾಚರಣೆ ವಿಭಾಗಗಳ ಮೇಲೆ ಪರಿಣಾಮ ಬೀರಲಿದೆ.ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕಿಡಿ: ಬೆಂಗಳೂರು ಸೆಂಟ್ರಲ್ ಫಲಿತಾಂಶದ ಬಗ್ಗೆ ಪ್ರಶ್ನೆ!

ಅಮೆಜಾನ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೈಕೆಲ್ ಫಿಡೆಲ್ಕೆ ಈ ಕುರಿತು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಫೆಬ್ರವರಿ 1 ರಂದು ಟಾರ್ಗೆಟ್‌ನ ಮುಂದಿನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಫಿಡೆಲ್ಕೆ, ವಜಾಗೊಳ್ಳುವ ಉದ್ಯೋಗಿಗಳಿಗೆ ಮಂಗಳವಾರ ಬೆಳಗ್ಗೆಯಿಂದ ಇ-ಮೇಲ್ ಮೂಲಕ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಸೋಮವಾರ ಸಂಬಂಧಿತ ತಂಡಗಳ ವ್ಯವಸ್ಥಾಪಕರಿಗೆ ತರಬೇತಿ ನೀಡಲಾಗಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece