Skip to main content
ವಿಡಿಯೋ
1/3
business

MCX ತಾಂತ್ರಿಕ ದೋಷ: 3 ಗಂಟೆಗಳ ಕಾಲ ಸ್ಥಗಿತಗೊಂಡ ಟ್ರೇಡಿಂಗ್; ಷೇರು ಮೌಲ್ಯ ಕುಸಿತ!

By Shravanthi R
MCX ತಾಂತ್ರಿಕ ದೋಷ: 3 ಗಂಟೆಗಳ ಕಾಲ ಸ್ಥಗಿತಗೊಂಡ ಟ್ರೇಡಿಂಗ್; ಷೇರು ಮೌಲ್ಯ ಕುಸಿತ!

ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್‌ (MCX) ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಸುಮಾರು 3 ಗಂಟೆಗಳ ಕಾಲ ಟ್ರೇಡಿಂಗ್ ಸ್ಥಗಿತಗೊಂಡಿತು. ಇದರಿಂದ ಟ್ರೇಡರ್‌ಗಳಲ್ಲಿ ಅಸಮಾಧಾನ ಉಂಟಾಯಿತು ಹಾಗೂ MCX ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಸಮಸ್ಯೆಯ ಮೂಲ ಕಾರಣ ಇನ್ನೂ ತಿಳಿದುಬಾರದಿದ್ದ ಕಾರಣ, MCX ಕ್ಷಮೆಯಾಚಿಸಿದೆ ಎನ್ನಲಾಗಿದೆ.

ಭಾರತದ ಅತಿ ದೊಡ್ಡ ಸರಕು ವಿನಿಮಯ ಕೇಂದ್ರವಾದ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಇಂದು ವ್ಯವಹಾರಿಕ ತೊಂದರೆ ಉಂಟಾಗಿದೆ. ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಟ್ರೇಡಿಂಗ್ ಚಟುವಟಿಕೆಗಳು ಮಧ್ಯಾಹ್ನದವರೆಗೂ ಆರಂಭವಾಗದೆ ಸ್ಥಗಿತಗೊಂಡಿತ್ತು.ಇದರಿಂದ ಟ್ರೇಡರ್ ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ನ ಷೇರು ಬೆಲೆ ಕುಸಿತ ಕಂಡಿದ್ದು, ಈ ಸಂಬಂಧ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸರಕು ವಿನಿಮಯ ಸಂಬಂಧಿತ ವಹಿವಾಟಿಗೆ ಸಮಯವನ್ನು 9 ಗಂಟೆಯಿಂದ 9:30 ಕ್ಕೆ ಮುಂದೂಡಲಾಯಿತು. ಅದಾದ ಬಳಿಕ 10:30ಕ್ಕೆ ಡಿಆರ್ ಸೈಟ್ ಮೂಲಕ ಟ್ರೇಡಿಂಗ್ ಮರುಸ್ಥಾಪಿಸಲಾಯಿತು ಎಂದು ತಿಳಿಸಲಾಗಿದೆ. ಮುಖ್ಯ ಸರ್ವರ್‌ ಕಾರ್ಯನಿರ್ವಹಿಸದಿದ್ದಲ್ಲಿ, ಬ್ಯಾಕಪ್ ಸರ್ವರ್ (ಡಿಸಾಸ್ಟರ್ ರಿಕವರಿ ಸೈಟ್) ಮೂಲಕ ಟ್ರೇಡಿಂಗ್‌ ಪ್ರಾರಂಭಿಸಲಾಗುತ್ತದೆ. ಇದನ್ನು ಸುರಕ್ಷತೆಗಾಗಿ ಮಾಡಲಾಗುತ್ತದೆ ಎಂದು ಎಂಸಿಎಕ್ಸ್ ತಿಳಿಸಿತ್ತು. PUMA Unisex-Adult AOP Backpack IND, Intense Blue-Nimbus Cloud-AOP, X (7854302)

ಆದರೂ, ಮದ್ಯಾಹ್ನ12 ಗಂಟೆಯಾದರೂ ಚಟುವಟಿಕೆಗಳು ಪುನರಾರಂಭಗೊಳ್ಳದೆ ಸಮಸ್ಯೆಯು ಮುಂದುವರೆದಿತ್ತು. ಈ ಅನಾನುಕೂಲಕ್ಕೆ ಟ್ರೇಡರ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಸಮಸ್ಯೆಯ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಎಂಸಿಎಕ್ಸ್ ವಿಷಾದ ವ್ಯಕ್ತಪಡಿಸಿದ್ದು, ಕ್ಷಮೆ ಯಾಚಿಸುವುದಾಗಿ ತಿಳಿಸಿದೆ.

ಈ ಪರಿಣಾಮವಾಗಿ ಷೇರು ಮೌಲ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎನ್ನಲಾಗಿದ್ದು, ಹೂಡಿಕೆದಾರರು ದೊಡ್ಡ ಸಂಖ್ಯೆಯಲ್ಲಿ ಮಾರಾಟ ಮೌಲ್ಯಗಳನ್ನು ಹೊಂದಿರುವ ಕಂಪನಿಯ ಮಾರುಕಟ್ಟೆ ಎಂಸಿಎಕ್ಸ್‌ನಲ್ಲಿ ಷೇರುಗಳು ಅಸ್ಥಿರಗೊಂಡವು ಎನ್ನಲಾಗಿದೆ. ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕಿಡಿ: ಬೆಂಗಳೂರು ಸೆಂಟ್ರಲ್ ಫಲಿತಾಂಶದ ಬಗ್ಗೆ ಪ್ರಶ್ನೆ!