Skip to main content
ವಿಡಿಯೋ
1/2
general

ಪತಂಜಲಿ ಆಯುರ್ವೇದ: ಮನೆಯಿಂದಲೇ ಆನ್‌ಲೈನ್ ಶಾಪಿಂಗ್ – 10% ರಿಯಾಯಿತಿ ಸಹಿತ ಹೋಮ್ ಡೆಲಿವರಿ!

By Vinutha U
ಪತಂಜಲಿ ಆಯುರ್ವೇದ: ಮನೆಯಿಂದಲೇ ಆನ್‌ಲೈನ್ ಶಾಪಿಂಗ್ – 10% ರಿಯಾಯಿತಿ ಸಹಿತ ಹೋಮ್ ಡೆಲಿವರಿ!

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಪತಂಜಲಿ ಕ್ರೆಡಿಟ್ ಕಾರ್ಡ್ ಅಥವಾ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 10% ಕ್ಯಾಶ್‌ಬ್ಯಾಕ್ ಸಹ ಲಭಿಸುತ್ತದೆ. ಕೆಲವು ಉತ್ಪನ್ನಗಳಿಗೆ ಫ್ರೀ ಡೆಲಿವರಿ ಸೇವೆಯೂ ಲಭ್ಯವಿದ್ದು, ಆರ್ಡರ್ ಮಾಡಿದ ಕೆಲ ದಿನಗಳಲ್ಲಿ ಸರಕು ನಿಮ್ಮ ಬಾಗಿಲಿಗೆ ತಲುಪುತ್ತದೆ.

ಬೆಂಗಳೂರು, ಅಕ್ಟೋಬರ್ 28: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಗ್ರಾಹಕರ ಸೌಲಭ್ಯಕ್ಕಾಗಿ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸಿದ್ದು, ನಿಮ್ಮ ನೆಚ್ಚಿನ ಉತ್ಪನ್ನಗಳನ್ನು ಮನೆಯ ಬಾಗಿಲಿಗೆ ತರಿಸಿಕೊಳ್ಳಲು ಸಾಧ್ಯವಾಗಿದೆ. ಅಂಗಡಿಗೆ ತೆರಳುವ ತೊಂದರೆಯಿಲ್ಲ! ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಂತಹ ಪ್ಲಾಟ್‌ಫಾರ್ಮ್‌ಗಳಂತೆಯೇ ಪತಂಜಲಿ ಅಧಿಕೃತ ವೆಬ್‌ಸೈಟ್ www.patanjaliayurved.net ನಲ್ಲಿ ನಿಮ್ಮ ಖಾತೆ ರಚಿಸಿ, ಉತ್ಪನ್ನಗಳನ್ನು ಆಯ್ಕೆಮಾಡಿ ಆರ್ಡರ್ ಮಾಡಬಹುದು.

ಕಂಪನಿ ಅನೇಕ ನಗರಗಳಲ್ಲಿ ತ್ವರಿತ ಹೋಮ್ ಡೆಲಿವರಿ ನೀಡುತ್ತಿದ್ದು, ಶೇ.10ರವರೆಗೆ ಡಿಸ್ಕೌಂಟ್ ಸಹ ಲಭ್ಯವಿದೆ. ಪತಂಜಲಿ ವೆಬ್‌ಸೈಟ್ ಮೂಲಕ ನೀವು ಹರ್ಬಲ್ ಸೋಪುಗಳು, ಟೂತ್‌ಪೇಸ್ಟ್, ಹಿಟ್ಟು, ತುಪ್ಪ, ಹರ್ಬಲ್ ಜ್ಯೂಸ್‌ಗಳು ಸೇರಿದಂತೆ ನೂರಾರು ಆಯುರ್ವೇದಿಕ ಉತ್ಪನ್ನಗಳು ಮತ್ತು ಔಷಧಗಳನ್ನು ಸುಲಭವಾಗಿ ಖರೀದಿಸಬಹುದು. ಇದಲ್ಲದೆ, ಪತಂಜಲಿ ಆ್ಯಾಪ್ ಅನ್ನೂ ಡೌನ್‌ಲೋಡ್ ಮಾಡಿ ಮೊಬೈಲ್‌ನಿಂದಲೇ ಆರ್ಡರ್ ಮಾಡಬಹುದು. ಈ ಸೌಲಭ್ಯದಿಂದ ಗ್ರಾಮೀಣ ಹಾಗೂ ಪಟ್ಟಣದ ಗ್ರಾಹಕರಿಗೂ ಪತಂಜಲಿ ಉತ್ಪನ್ನಗಳು ತಲುಪುವಂತಾಗಿದೆ. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ಗ್ರಾಹಕರಿಗೆ ವಿಶೇಷ ಆಕರ್ಷಣೆಗಳು: 10% ರಿಯಾಯಿತಿ ಮತ್ತು ಹೆಚ್ಚುವರಿ ಲಾಭಗಳುಆನ್‌ಲೈನ್ ಖರೀದಿಯಲ್ಲಿ ಗ್ರಾಹಕರು ಶೇ.೧೦ರವರೆಗೆ ರಿಯಾಯಿತಿ ಪಡೆಯಬಹುದು. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಪತಂಜಲಿ ಕ್ರೆಡಿಟ್ ಕಾರ್ಡ್ ಅಥವಾ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 10% ಕ್ಯಾಶ್‌ಬ್ಯಾಕ್ ಸಹ ಲಭಿಸುತ್ತದೆ. ಕೆಲವು ಉತ್ಪನ್ನಗಳಿಗೆ ಫ್ರೀ ಡೆಲಿವರಿ ಸೇವೆಯೂ ಲಭ್ಯವಿದ್ದು, ಆರ್ಡರ್ ಮಾಡಿದ ಕೆಲ ದಿನಗಳಲ್ಲಿ ಸರಕು ನಿಮ್ಮ ಬಾಗಿಲಿಗೆ ತಲುಪುತ್ತದೆ.

ಆನ್‌ಲೈನ್ ಆರ್ಡರ್ ಮಾಡುವ ಸರಳ ಕ್ರಮಗಳು ಪತಂಜಲಿ ವೆಬ್‌ಸೈಟ್ ಅಥವಾ ಆ್ಯಾಪ್‌ನಲ್ಲಿ ಶಾಪಿಂಗ್ ಮಾಡುವುದು ಬಹಳ ಸರಳ:

  1. ವೆಬ್‌ಸೈಟ್‌ಗೆ ಭೇಟಿ: www.patanjaliayurved.net ಗೆ ಹೋಗಿ, ನಿಮ್ಮ ಖಾತೆ ರಚಿಸಿ ಅಥವಾ ಲಾಗಿನ್ ಆಗಿ.

  2. ವಿವರಗಳು ನಮೂದಿಸಿ: ಹೆಸರು, ವಿಳಾಸ, ಮೊಬೈಲ್ ನಂಬರ್ ಮುಂತಾದ ಮಾಹಿತಿಯನ್ನು ಸರಿಯಾಗಿ ದಾಖಲಿಸಿ.

  3. ಉತ್ಪನ್ನ ಆಯ್ಕೆ: ಬೇಕಾದ ಉತ್ಪನ್ನಗಳನ್ನು ಹುಡುಕಿ, ಕಾರ್ಟ್‌ಗೆ ಸೇರಿಸಿ.

  4. ಚೆಕ್‌ಔಟ್ ಮಾಡಿ: 'ಆರ್ಡರ್ಸ್' ವಿಭಾಗಕ್ಕೆ ಹೋಗಿ, ವಿಳಾಸ ಆಯ್ಕೆಮಾಡಿ, ಆನ್‌ಲೈನ್ ಪಾವತಿ (ಕಾರ್ಡ್, UPI ಇತ್ಯಾದಿ) ಮೂಲಕ ಪಾವತಿಸಿ.

  5. ಡೆಲಿವರಿ ಕಾಯುತ್ತಿರಿ: ಆರ್ಡರ್ ದೃಢೀಕರಣ ಸ್ಮ್ಯಾಕ್ ಬಂದ ನಂತರ, ಕೆಲ ದಿನಗಳಲ್ಲಿ ನಿಮ್ಮ ಮನೆಗೆ ಡೆಲಿವರಿ ಆಗುತ್ತದೆ. ಭಾರತದಿಂದ UK ಗೆ GI ಟ್ಯಾಗ್ ಪಡೆದ ನಿಂಬೆ ಹಣ್ಣುಗಳ ಸಾಗಣೆ; ಇಂಡಿ ನಿಂಬೆ, - ಪುಳಿಯನ್‌ಕುಡಿ ನಿಂಬೆಯ ಮಾಹಿತಿ ಇಲ್ಲಿದೆ

ಪತಂಜಲಿ ಆಯುರ್ವೇದದ ಈ ಆನ್‌ಲೈನ್ ಸೌಲಭ್ಯವು ಆರೋಗ್ಯಕರ ಜೀವನಶೈಲಿಗೆ ಸಹಾಯ ಮಾಡುವ ಉತ್ಪನ್ನಗಳನ್ನು ಸುಲಭವಾಗಿ ಲಭ್ಯಗೊಳಿಸುತ್ತಿದ್ದು, ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಾಪ್‌ನ್ನು ಸಂಪರ್ಕಿಸಿ!