ದೆಹಲಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ, ಮೊದಲ ಕೃತಕ ಮಳೆ ಪ್ರಯೋಗವನ್ನು ನಡೆಸಿದೆ. ಸಿಲ್ವರ್ ಅಯೋಡೈಡ್ ರಾಸಾಯನಿಕದಿಂದ ಮೋಡಗಳಲ್ಲಿ ನೀರಿನ ಆವಿ ಘನೀಕರಿಸಿ ಮಳೆಯಾಗಿಸುವ ಕ್ರಮವಿದಾಗಿದೆ.
ಪುಣೆಯಲ್ಲಿರುವ ಭಾರತೀಯ ಹವಾಮಾನ ಅಧ್ಯಯನ ಸಂಸ್ಥೆಯಿಂದ 2023 ರಲ್ಲಿ ಬಂದ ವರದಿಯ ಆಧಾರವಾಗಿ ಈ ಪ್ರಯೋಗವನ್ನು ನಡೆಸಲಾಗಿದೆ. ಆದರೆ, ಇಂದು ತಜ್ಞರು ಹೇಳುವಂತೆ, ವಿಫಲಗೊಂಡಿದೆ ಎನ್ನಲಾಗಿದೆ. 3.2 ಕೋಟಿ ವೆಚ್ಚದಲ್ಲಿ ನಡೆಸಿರುವ ಈ ಪ್ರಯೋಗವು ಮಳೆ ತರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.
ಕೃತಕ ಮಳೆ ಬರಲಿಲ್ಲ ಏಕೆ ? -
ಮಳೆ ತರಿಸುವಲ್ಲಿ ವಿಫಲಗೊಂಡಿರುವುದಕ್ಕೆ ಮುಖ್ಯ ಕಾರಣಗಳೆಂದರೆ, ಮೋಡಗಳಲ್ಲಿ ತೇವಾಂಶ ಕಡಿಮೆಯಿರುವುದು, ಸೂಕ್ತ ಮೋಡಗಳ ಅನುಪಸ್ಥಿತಿ, ತಂತ್ರಜ್ಞಾನದ ಮಿತಿ ಹಾಗೂ ತಾತ್ಕಾಲಿಕ ಪರಿಣಾಮದಿಂದ ತ್ವರಿತ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ ಎನ್ನಲಾಗಿದೆ. The Psychology of Money Paperback – 1 September 2020
ತಾತ್ಕಾಲಿಕ ಮಳೆ ತರುವಲ್ಲಿ ಈ ಯೋಜನೆಯು ಪರಿಸರಕ್ಕೆ ಪೂರಕವಾಗಿಲ್ಲ ಹಾಗೂ ಈ ತಂತ್ರವೂ ಪರಿಣಾಮಕಾರಿ ಎಂಬುದಕ್ಕೆ ನಿರ್ಧಿಷ್ಟ ಉದಾಹರಣೆಗಳಿಲ್ಲ ಎಂದೂ ಮಾಹಿತಿ ತಿಳಿಸಲಾಗಿದೆ. ಹೀಗಾಗಿ, ಪರಿಣಾಮ ಶೂನ್ಯ ಪ್ರಯೋಗಕ್ಕೆ ಅನೇಕ ಭರವಸೆಯ ಮಾತುಗಳು ಕೇಳಿಬಂದಿತ್ತು. ಇದೀಗ ಈ ಪ್ರಯೋಗವು ನಿರಾಸೆಗೊಳಿಸಿದ್ದು, ತಜ್ಞರು ಈ ಕುರಿತು ಖಂಡಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ತಾಯಿ ಬರ್ತಡೇ ತಂದ ಅದೃಷ್ಟ..UAE ಲಾಟರಿಯಲ್ಲಿ ಇತಿಹಾಸ ನಿರ್ಮಿಸಿದ ಭಾರತೀಯ, ₹240 ಕೋಟಿ ಬಹುಮಾನ!