Skip to main content
ವಿಡಿಯೋ
1/3
cinema

ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅಗಲಿಕೆಗೆ 4 ವರ್ಷ...ಕುಟುಂಬಸ್ಥರು, ಅಭಿಮಾನಿಗಳಿಂದ ಪುಣ್ಯ ಸ್ಮರಣೆ!

By Ram Chethan
ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅಗಲಿಕೆಗೆ 4 ವರ್ಷ...ಕುಟುಂಬಸ್ಥರು, ಅಭಿಮಾನಿಗಳಿಂದ ಪುಣ್ಯ ಸ್ಮರಣೆ!

ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೇ ಉಳಿದ ನಟ ಪುನೀತ್ ರಾಜ್‌ಕುಮಾರ್. ಇಂದು ಅಭಿಮಾನಿಗಳು, ತಮ್ಮ ಪ್ರೀತಿಯ ಅಪ್ಪುನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ಮೂರನೇ ಪುಣ್ಯಸ್ಮರಣೆ ಇಂದು (ಅಕ್ಟೋಬರ್ 29). ಕನ್ನಡ ಚಿತ್ರರಂಗದ 'ಪವರ್ ಸ್ಟಾರ್' ಎಂದು ಖ್ಯಾತರಾಗಿದ್ದ ಪುನೀತ್ ರಾಜ್‌ಕುಮಾರ್ 2021ರಲ್ಲಿ ಇದೇ ದಿನ ಹೃದಯಾಘಾತದಿಂದ ನಿಧನರಾದರು. ಅವರ ನೆನಪಿಗಾಗಿ, ಇಂದು ಕುಟುಂಬಸ್ಥರು ಮತ್ತು ಅಭಿಮಾನಿಗಳು ಅವರ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಪುನೀತ್ ನಿಧನರಾಗಿ 4 ವರ್ಷಗಳೇ ಕಳೆದರೂ, ಅವರ ನೆನಪು ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಕ್ಟೋಬರ್ 29, 2021ರಂದು ನಡೆದ ಆ ದುರಂತ ಘಟನೆ ಇಂದಿಗೂ ಅನೇಕರಿಗೆ ನೋವುಂಟು ಮಾಡುತ್ತದೆ. ಆ ದಿನ ಶಿವರಾಜ್‌ಕುಮಾರ್ ನಟನೆಯ 'ಭಜರಂಗಿ 2' ಚಿತ್ರ ಬಿಡುಗಡೆಯಾಗಿತ್ತು.

ಅಂದು ಬೆಳಗಿನ ಜಾವ 5 ಗಂಟೆಯಿಂದಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ಆರಂಭವಾಗಿದ್ದವು. ಪುನೀತ್ ರಾಜ್‌ಕುಮಾರ್ ಅವರು ಟ್ವಿಟರ್ ಮೂಲಕ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು. ಆದರೆ, ಬೆಳಗ್ಗೆ 10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿತ್ತು.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಯಾವುದೇ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರು ನಿಧನರಾಗಿದ್ದು ಖಚಿತವಾಗಿತ್ತು. ಆದರೆ, ಸರ್ಕಾರದ ಎಲ್ಲಾ ಸಿದ್ಧತೆಗಳ ಬಳಿಕವಷ್ಟೇ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.Titan Maritime Analog Green Dial Men's Watch NM1830KL02/NN1830KL02/NP1830KL02

ಪುನೀತ್ ಅವರ ನಿಧನ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು, ಇಡೀ ರಾಜ್ಯವೇ ಆಘಾತಕ್ಕೆ ಒಳಗಾಗಿ ಶೋಕಸಾಗರದಲ್ಲಿ ಮುಳುಗಿತ್ತು. ಅವರ ಅಗಲಿಕೆ ಕೇವಲ ಕುಟುಂಬಕ್ಕೆ ಮಾತ್ರವಲ್ಲದೆ, ಕರುನಾಡಿಗೆ ಭರಿಸಲಾಗದ ನಷ್ಟವಾಗಿ ಪರಿಣಮಿಸಿತು.45’ ಚಿತ್ರದ ‘ಆಫ್ರೋ ಟಪಾಂಗ್’ ಝಲಕ್: ಉಪೇಂದ್ರ ಜೊತೆ ಘೆಟ್ಟೋ ಕಿಡ್ಸ್ ಕಲರ್‌ಫುಲ್ ಡ್ಯಾನ್ಸ್ ಬ್ಲಾಸ್ಟ್! ರಿಲೀಸ್‌ ಯಾವಾಗ ಗೊತ್ತಾ?

ಪುನೀತ್ ರಾಜ್‌ಕುಮಾರ್ ಅವರ ನಿಧನದ ಬಳಿಕ, ಪಿಆರ್‌ಕೆ ಪ್ರೊಡಕ್ಷನ್ಸ್‌ನ ಜವಾಬ್ದಾರಿಯನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ 'ಒನ್ ಕಟ್ ಟೂ ಕಟ್', 'ಫ್ಯಾಮಿಲಿ ಪ್ಯಾಕ್', 'ಮ್ಯಾನ್ ಆಫ್ ದಿ ಮ್ಯಾಚ್', 'ಗಂಧದಗುಡಿ', 'ಆಚಾರ್ ಆ್ಯಂಡ್ ಕೋ', 'ಒ2' ಹಾಗೂ 'ಎಕ್ಕ' ಸೇರಿದಂತೆ ಹಲವು ಸಿನಿಮಾಗಳು ತೆರೆಕಂಡಿವೆ.

ಈ ಚಿತ್ರಗಳಲ್ಲಿ ಕೆಲವು ಕಥೆಗಳನ್ನು ಪುನೀತ್ ಅವರೇ ಆಯ್ಕೆ ಮಾಡಿದ್ದರೆ, ಉಳಿದವುಗಳನ್ನು ಅಶ್ವಿನಿ ಅವರು ಫೈನಲ್ ಮಾಡಿದ್ದಾರೆ. ಇಂದು ಕಂಠೀರವ ಸ್ಟುಡಿಯೋ ಬಳಿಯ ಪುನೀತ್ ಸಮಾಧಿಗೆ ಕುಟುಂಬಸ್ಥರು, ಆಪ್ತರು ಮತ್ತು ಅಭಿಮಾನಿಗಳು ತೆರಳಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅವರ ಸ್ಮರಣೆ ಕನ್ನಡ ನಾಡಿನ ಜನರ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯಲಿದೆ.