ಚಿಕ್ಕಬಳ್ಳಾಪುರ: ಇಲ್ಲಿನ ನಂದಿಗಿರಿಧಾಮದಲ್ಲಿರುವ ಟಿಪ್ಪು ಸಮ್ಮರ್ ಪ್ಯಾಲೇಸ್ ಮೇಲೆ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ದೊಡ್ಡದಾಗಿ ಬರೆಯಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ, ಸುಮೊಟೊ ಕೇಸ್ ದಾಖಲಾಗಿದೆ. ಈ ರೀತಿ ವಿಕೃತಿ ಮೆರೆದಿರುವ ಕಾರಣ ಟಿಪ್ಪು ಅಭಿಮಾನಿ ಹಾಗೂ ಪ್ರವಾಸಿಗರು ಅಸಮಧಾನ ಸೂಚಿಸಿದ್ದಾರೆ ಎನ್ನಲಾಗಿದೆ.
ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆಯ ಅಧೀನದಲ್ಲಿರುವ ಈ ಅರಮನೆಯು, ದುಷ್ಕರ್ಮಿಗಳ ಕೀಳು ಮನಸ್ಥಿತಿಗೆ ಗುರಿಯಾಗಿದೆ. ಪ್ರಸ್ತುತ, ತಿಹಾರ್ ಜೈಲಿನಲ್ಲಿ ಬಂಧಿತನಾಗಿರುವ ಅಂತರರಾಷ್ಟ್ರೀಯ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಒಂದು ತಿಂಗಳ ಹಿಂದೆಯೇ ಬರೆದಿದ್ದರು. ಇದಾದ ಬಳಿಕ, ಇಲಾಖಾ ಸಿಬ್ಬಂದಿಯಿಂದ ಅದನ್ನು ಅಳಿಸಿ ಹಾಕಲಾಗಿದೆ. Financial Modeling Handbook: Learn to Build Financial Models from Scratch & Value Companies | for Investment Banking, Equity Research, PE/VC | with Templates + Video Course | ZebraLearn Hardcover – 1 January 2023
ಐತಿಹಾಸಿಕವಾಗಿರುವ ಟಿಪ್ಪು ಬೇಸಿಗೆ ಅರಮನೆಗೆ ಇದು, ಚ್ಯುತಿ ತರುವ ಕೆಲಸವಾಗಿದೆ ಎನ್ನಲಾಗಿದೆ. ಹೀಗೆ ಮಾಡಿದ ಕಿಡಿಗೇಡಿಗಳಿಗೆ ಪ್ರತಿಯಾಗಿ, ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆ, ಹಾಗೂ ಸಾರ್ವಜನಿಕ ಆಸ್ತಿ ಹಾನಿ ತಡೆ (ಪಿಡಿಎಲ್‌ಪಿ) ಕಾಯ್ದೆಯ 324(2), 329(3)ರಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಕೇಂದ್ರ ನೌಕರರ ಸಂಬಳ ಮತ್ತು ಪಿಂಚಣಿಗೆ ದೊಡ್ಡ ಪರಿಷ್ಕರಣೆ: 8ನೇ ಸಿಪಿಸಿ ಅನುಮೋದನೆ!