ಅಮೆರಿಕಾ; "ನಾನು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡುತ್ತಿದ್ದೇನೆ, ಮತ್ತು ನನಗೆ ಪ್ರಧಾನಿ ಮೋದಿಯವರ ಬಗ್ಗೆ ಗೌರವ ಮತ್ತು ಪ್ರೀತಿ ಇದೆ. ನಮಗೆ ಉತ್ತಮ ಸಂಬಂಧವಿದೆ. ಅದೇ ರೀತಿ, ಪಾಕಿಸ್ತಾನದ ಪ್ರಧಾನಿ ಕೂಡ ಒಬ್ಬ ಶ್ರೇಷ್ಠ ವ್ಯಕ್ತಿ. ಅವರಿಗೆ ಒಬ್ಬ ಫೀಲ್ಡ್ ಮಾರ್ಷಲ್ ಇದ್ದಾರೆ. ಅವರು ಏಕೆ ಫೀಲ್ಡ್ ಮಾರ್ಷಲ್ ಆಗಿದ್ದಾರೆ ಗೊತ್ತೇ? ಅವರು ಒಬ್ಬ ಶ್ರೇಷ್ಠ ಹೋರಾಟಗಾರ.
ಹಾಗಾಗಿ ನನಗೆ ಅವರೆಲ್ಲರೂ ಗೊತ್ತು. ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಓದುತ್ತಿದ್ದೇನೆ. ಇವು ಎರಡು ಪರಮಾಣು ರಾಷ್ಟ್ರಗಳು. ಮತ್ತು ಅವು ನಿಜವಾಗಿಯೂ ಕಾದಾಟ ನಡೆಸುತ್ತಿದ್ದವು. ಆಗ ನಾನು ಪ್ರಧಾನಿ ಮೋದಿಯವರಿಗೆ ಕರೆ ಮಾಡಿ, 'ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದೆ. ಅವರು 'ಇಲ್ಲ, ಇಲ್ಲ, ನಾವು ವ್ಯಾಪಾರ ಒಪ್ಪಂದ ಮಾಡಲೇಬೇಕು' ಎಂದರು. ನಾನು 'ಇಲ್ಲ, ಸಾಧ್ಯವಿಲ್ಲ. ನೀವು ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭಿಸುತ್ತಿದ್ದೀರಿ. ನಾವು ಅದನ್ನು ಮಾಡುವುದಿಲ್ಲ' ಎಂದೆ.Sun Hat for Men Women, Breathable Summer Hat for Travel, Hiking, Gardening
ನಂತರ ನಾನು ಪಾಕಿಸ್ತಾನಕ್ಕೆ ಕರೆ ಮಾಡಿ, 'ನಾವು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ, ಏಕೆಂದರೆ ನೀವು ಭಾರತದೊಂದಿಗೆ ಹೋರಾಡುತ್ತಿದ್ದೀರಿ' ಎಂದೆ.ಇದನ್ನು ಓದಿ; ಭಾರತದಲ್ಲಿ ಸೈಬರ್ ಅಪರಾಧಗಳ ಮೇಲೆ 'ಚೀನೀ ಆಧಿಪತ್ಯ': ಅಕ್ರಮ ಲೋನ್ ಆ್ಯಪ್,ಕ್ರಿಪ್ಟೋ ಹಗರಣಗಳಲ್ಲಿ ₹28,000 ಕೋಟಿ ಲೂಟಿ!
ಅವರು 'ಇಲ್ಲ, ಇಲ್ಲ, ನೀವು ನಮ್ಮನ್ನು ಹೋರಾಡಲು ಬಿಡಬೇಕು' ಎಂದರು. ಅವರಿಬ್ಬರೂ ಹಾಗೇ ಹೇಳಿದರು. ಅವರು ಬಲಶಾಲಿ ಜನರು. ಪ್ರಧಾನಿ ಮೋದಿ ನೋಡಲು ತುಂಬಾ ಒಳ್ಳೆಯ ವ್ಯಕ್ತಿ. ಅವರು ಅವರು ತುಂಬಾ ಕಠಿಣ ವ್ಯಕ್ತಿ ('tough as hell'). 'ಇಲ್ಲ, ನಾವು ಹೋರಾಡುತ್ತೇವೆ' ಎಂದರು. ನಾನು 'ಓಹೋ, ಇವರು ನನಗೆ ಗೊತ್ತಿರುವ ಅದೇ ವ್ಯಕ್ತಿಯೇ?' ಅಂದೆ. ಅಕ್ಷರಶಃ ಎರಡು ದಿನಗಳ ನಂತರ, ಅವರು ಕರೆ ಮಾಡಿ 'ನಮಗೆ ಅರ್ಥವಾಗಿದೆ' ಎಂದು ಹೇಳಿದರು ಮತ್ತು ಅವರು ಹೋರಾಟ ನಿಲ್ಲಿಸಿದರು. ಅದು ಹೇಗೆ? ಅದು ಆಶ್ಚರ್ಯಕರವಲ್ಲವೇ? ಎಂದರು, ನಂತರ ಬೈಡನ್ ಅದನ್ನು ಮಾಡುತ್ತಿದ್ದರು ಎಂದು ನೀವು ಭಾವಿಸುತ್ತೀರಾ? ನನಗನ್ನಿಸುವುದಿಲ್ಲ..." ಎಂದು ಅವರನ್ನು ಕಿಚಾಯಿಸಿದ್ದಾರೆ..