ಬೆಂಗಳೂರು: ನಗರದ ಜೆಪಿನಗರ ಪೋಲಿಸ್ ಠಾಣೆಯಲ್ಲಿ ದಾಖಲಿಸಿರುವ ಕಳ್ಳತನ ಪ್ರಕರಣವೊಂದರಲ್ಲಿ, ದೀರ್ಘಕಾಲದಿಂದ ಮನೆಗೆಲಸ ಹಾಗೂ ಕೇರ್ ಟೇಕರ್ ಆಗಿದ್ದ ಮಹಿಳೆಯೊಬ್ಬಳು ಲಕ್ಷ ಲಕ್ಷ ಮೌಲ್ಯದ ಚಿನ್ನ ಬೆಳ್ಳಿಕದ್ದು ಅಡಮಾನ ಇಟ್ಟಿದ್ದಳು. ಕದ್ದ ಮೌಲ್ಯಾಭರಣಗಳನ್ನು ಮಹಿಳಾ ಆರೋಪಿ ಮಂಗಳಾ ಎಂಬಾಕೆ ಎಸ್ಕೇಪ್ ಆಗಲು ಪ್ರಯತ್ನಿಸಿ ಪರಾರಿಯಾಗಿದ್ದಳು ಎನ್ನಲಾಗಿದೆ.
ಕದ್ದ ಒಡವೆಗಳನ್ನ ಅಡವಿಟ್ಟು ಮೋಜು ಮಸ್ತಿ ಮಾಡ್ತಿದ್ದ ಆರೋಪಿಯನ್ನು ಜೆಪಿನಗರ ಪೊಲೀಸರು ಬಂಧಿಸಿದ್ದಾರೆ. ಕೇರ್ ಟೇಕರ್ ಆಗಿ ಮನೆಗೆ ಸೇರಿಕೊಂಡಿದ್ದವಳು, ಹತ್ತು ವರ್ಷಗಳಿಂದ ಮನೆಯವರ ನಂಬಿಕೆ ಗಳಿಸಿದ್ದಳು. ಸಮಯ ಕಾದು ಒಡವೆಗಳನ್ನ ಕದ್ದು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಳು. ಮನೆಯವರು, ಕೂಡಲೆ ಜೆಪಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದ ಬೆನ್ನಲ್ಲೇ ತನಿಖೆ ನಡೆಸಿ, ಬಂಧಿತಳಿಂದ 458 ಗ್ರಾಂ ಚಿನ್ನ,3 ಕೆ ಜಿ 868 ಗ್ರಾಂ ಬೆಳ್ಳಿ ವಶಕ್ಕೆ ಪಡೆದುಕೊಂಡಿದ್ದಾರೆ. KLOSIA Women Rayon Printed Anarkali Kurta Set with Dupatta
ಮನೆಗೆ ಮಾರಿಯಾಗಿ ಪರಿಣಮಿಸಿದ ಮನೆಗೆಲಸದಾಕೆಯ್ನು ವಶಪಡಿಸಿಕೊಂಡ ಚಿನ್ನ ಬೆಳ್ಳಿಯ ಒಟ್ಟು ಮೌಲ್ಯ 51.40 ಲಕ್ಷ ರೂಪಾಯಿಯದ್ದು ಎಂದು ತಿಳಿದುಬಂದಿದೆ. ಅಡಮಾನವಿಟ್ಟು ಮೋಜು ಮಸ್ತಿ ಮುಂದುವರೆಸಿದ್ದ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ವಿಚಾರಣೆಯನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕದ ಹೊಸ ನಿಯಮ: ವಲಸೆ ಕಾರ್ಮಿಕರಿಗೆ EAD ಸ್ವಯಂ ವಿಸ್ತರಣೆ ರದ್ದು..ಸಾವಿರಾರು ಭಾರತೀಯರು ಸಂಕಷ್ಟದಲ್ಲಿ!