ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಸಂಘರ್ಷದ ಮಧ್ಯೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದಾರೆ. ಉನ್ನತ ಮಟ್ಟದ ಶೃಂಗಸಭೆಯಲ್ಲಿ ಈ ಇಬ್ಬರೂ ನಾಯಕರು ಮಾತುಕತೆ ನಡೆಸಿದರು.
ಸುದೀರ್ಘ ಆರು ವರ್ಷಗಳ ನಂತರ ಈ ಇಬ್ಬರು ನಾಯಕರು ಮುಖಾಮುಖಿಯಾಗಿದ್ದು, ಗುರುವಾರ ದಕ್ಷಿಣ ಕೊರಿಯಾದ ಬುಸಾನ್ ನಗರದಲ್ಲಿ ಜಿನ್‌ಪಿಂಗ್ ಅವರೊಂದಿಗೆ ನಡೆಸಿದ ಸಭೆ ಅತ್ಯಂತ ಯಶಸ್ವಿ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಎರಡು ಬೃಹತ್ ಆರ್ಥಿಕತೆಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆಗೊಳಿಸಿ, ಸ್ಥಿರತೆಯನ್ನು ಮರಳಿ ತರುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಟ್ರಂಪ್ ಮತ್ತು ಕ್ಸಿ ಇಬ್ಬರೂ ವರದಿಗಾರರೊಂದಿಗೆ ಮಾತನಾಡಿ, ನಾವು ಪರಸ್ಪರ ಚೆನ್ನಾಗಿ ತಿಳಿದಿದ್ದೇವೆ. ಬಿಹಾರ ವಿಧಾನಸಭಾ ಚುನಾವಣೆ : ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಅಮಿತ್ ಶಾ, ಜೆಪಿ ನಡ್ಡಾ ಮಾತನಾಡಲಿದ್ದಾರೆ..!
ನಮ್ಮ ನಡುವೆ ಉತ್ತಮ ಸಂಬಂಧವಿದೆ. ಅವರನ್ನು ಮತ್ತೆ ಭೇಟಿಯಾಗಿದ್ದು ಸಂತೋಷ ತಂದಿದೆ. ಇಂದು ನಾವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ತಿಳಿಸಿದರು. ದ್ವಿಪಕ್ಷೀಯ ಸಭೆ ಪ್ರಾರಂಭವಾಗುತ್ತಿದ್ದಂತೆಯೇ, ಟ್ರಂಪ್, "ನನ್ನ ಸ್ನೇಹಿತನೊಂದಿಗೆ ಇರುವುದು ಯಾವಾಗಲೂ ದೊಡ್ಡ ಗೌರವ. ಚೀನಾದ ಅತ್ಯಂತ ಗೌರವಾನ್ವಿತ ಅಧ್ಯಕ್ಷರೊಂದಿಗೆ ಸಭೆ ನಡೆಸಿರುವುದು ಸಂತಸ ತಂದಿದೆ. ನಾವು ಈಗಾಗಲೇ ಅನೇಕ ವಿಷಯಗಳಿಗೆ ಒಪ್ಪಿಕೊಂಡಿದ್ದೇವೆ, ಮತ್ತು ಈಗ ಇನ್ನೂ ಕೆಲವು ವಿಷಯಗಳಿಗೆ ಒಪ್ಪಿಕೊಳ್ಳುತ್ತೇವೆ. ಅಧ್ಯಕ್ಷ ಕ್ಸಿ ದೊಡ್ಡ ದೇಶದ ಶ್ರೇಷ್ಠ ನಾಯಕರು. ನಾವು ದೀರ್ಘಕಾಲದವರೆಗೆ ಅದ್ಭುತ ಸಂಬಂಧವನ್ನು ಹೊಂದಲಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಈ ಸಭೆಯ ಮೊದಲು, ಕೌಲಾಲಂಪುರದಲ್ಲಿ ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ನಿಗದಿಪಡಿಸಲು ಸಿದ್ಧತೆ ನಡೆಸಿದ್ದರು. ಚೀನಾದ ಉನ್ನತ ವ್ಯಾಪಾರ ಸಮಾಲೋಚಕ ಲಿ ಚೆಂಗ್‌ಗ್ಯಾಂಗ್, ಪ್ರಾಥಮಿಕ ಒಮ್ಮತಕ್ಕೆ ತಲುಪಿದ್ದಾಗಿ ಹೇಳಿಕೆ ನೀಡಿದ್ದು, ಇದನ್ನು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ದೃಢಪಡಿಸಿದರು. Shining Diva Fashion Crystal Tiara and Crown for Women Stylish Headband Crowns with Comb Tiaras for Girls Kids Queen Princess Wedding Bridal Birthday Gift Hair Accessories
ಟಿಡಿ ಇಂಟರ್ನ್ಯಾಷನಲ್‌ನ ಸಿಇಒ, ಮಾಜಿ ವಿದೇಶಾಂಗ ಇಲಾಖೆಯ ಅಧಿಕಾರಿ ಜೇ ಟ್ರೂಸ್‌ಡೇಲ್ ಪ್ರಕಾರ, ಕ್ಸಿ ಜಿನ್‌ಪಿಂಗ್ ಚೀನಾವನ್ನು ವಿಶ್ವಾಸಾರ್ಹ ಪಾಲುದಾರನನ್ನಾಗಿ ಇರಿಸಿಕೊಳ್ಳಲು ಮತ್ತು ಅಮೆರಿಕದ ಆಡಳಿತದ ಸುಂಕ ನೀತಿಯಿಂದ ಬೇಸತ್ತಿರುವ ದೇಶಗಳೊಂದಿಗೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ನೋಡುತ್ತಾರೆ.