Skip to main content
ವಿಡಿಯೋ
1/3
crime

ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯನ್ನೇ ಮುಗಿಸಿದ ಅಪ್ರಾಪ್ತೆ, ಬೆಂಗಳೂರಲ್ಲಿ ನಡೀತು ಭೀಕರ ಮರ್ಡರ್‌..!!

By Pavitra Ganapathi Baradavalli
ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯನ್ನೇ ಮುಗಿಸಿದ ಅಪ್ರಾಪ್ತೆ, ಬೆಂಗಳೂರಲ್ಲಿ ನಡೀತು ಭೀಕರ ಮರ್ಡರ್‌..!!

ಪ್ರಿಯಕರನ ಜೊತೆ ಸೇರಿ ಅಪ್ರಾಪ್ತೆಯಿಂದ ತಾಯಿ ಹತ್ಯೆ ಕೇಸ್‌, ಬೆಂಗಳೂರಿನ ಸುಬ್ರಮಣ್ಯಪುರದ ಮನೆಯಲ್ಲಿ ನಡೆದ ಘಟನೆ. ಪ್ರಿಯಕರ ಮತ್ತು ಆತನ ಸ್ನೇಹಿತರ ಜೊತೆ ಸೇರಿ ತಾಯಿಯನ್ನು ಹತ್ಯೆ ಮಾಡಿದ ಅಪ್ರಾಪ್ತೆ. 34ವರ್ಷದ ತಾಯಿಯನ್ನು ಹತ್ಯೆಗೈದ ಪಾಪಿ ಪುತ್ರಿ. ಅಕ್ಟೋಬರ್‌ 25ರಂದು ನಡೆದಿರುವ ನೇತ್ರಾವತಿ ಕೊಲೆ.

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಅಪ್ರಾಪ್ತೆಯಿಂದ ತಾಯಿ ಹತ್ಯೆ ಕೇಸ್‌, ಬೆಂಗಳೂರಿನ ಸುಬ್ರಮಣ್ಯಪುರದ ಮನೆಯಲ್ಲಿ ನಡೆದ ಘಟನೆ. ಪ್ರಿಯಕರ ಮತ್ತು ಆತನ ಸ್ನೇಹಿತರ ಜೊತೆ ಸೇರಿ ತಾಯಿಯನ್ನು ಹತ್ಯೆ ಮಾಡಿದ ಅಪ್ರಾಪ್ತೆ. 34ವರ್ಷದ ತಾಯಿಯನ್ನು ಹತ್ಯೆಗೈದ ಪಾಪಿ ಪುತ್ರಿ. ಅಕ್ಟೋಬರ್‌ 25ರಂದು ನಡೆದಿರುವ ನೇತ್ರಾವತಿ ಕೊಲೆ.ಇದನ್ನೂ ಓದಿ: ನಗರದ 218 ಕಡೆಗಳಲ್ಲಿ “ಕಸ ಸುರಿಯುವ ಹಬ್ಬ”ದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಸೃಷ್ಟಿ


ಕೊಲೆ ಮಾಡಿ ಆತ್ಮಹತ್ಯೆ ಅಂಥ ಬಿಂಬಸುವ ಸಲುವಾಗಿ ಹೈಡ್ರಾಮಾ ನಡೆದಿದೆ. ಪೊಲೀಸ್‌ ತನಿಖೆ ವೇಳೆ ನೇತ್ರಾವತಿ ಕೊಲೆ ರಹಸ್ಯ ಬಯಲಾಗಿದೆ. ಕೊಲೆ ಮಾಡಿದ ಬಳಿಕ ಕೊಟ್ಟ ಮಿಸ್ಸಿಂಗ್‌ ಕಂಪ್ಲೇಟ್‌ನಿಂದ ಬಯಲಾಯಿತು ಸ್ಫೋಟಕ ಸತ್ಯ.
ಮೃತ ನೇತ್ರಾವತಿಯ ಮಗಳು ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು ಆಗಾಗ ಮನೆಗೆ ಆ ಯುವಕನನ್ನು ಕರೆತರುತ್ತಿದ್ದಳು.ಅಕ್ಟೋಬರ್‌ 25 ರ ರಾತ್ರಿ ಸಹ ಪ್ರಿಯಕರನ ಜೊತೆ ಮನೆಗೆ ಬಂದಿದ್ದಾಳೆ.
ಇದನ್ನೂ ಓದಿ: ನಿತೀಶ್ ಕುಮಾರ್ ಎನ್‌ಡಿಎ'ಸಂಕಲ್ಪ ಪತ್ರ' ಬಿಡುಗಡೆ: ಎಲ್ಲಾ ಉನ್ನತ ನಾಯಕರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ..!


ಜೊತೆಗೆ ಪ್ರಿಯಕರನ ಮೂರು ಸ್ನೇಹಿತರು ಜೊತೆಗೆ ಬಂದಿದ್ದಾರೆ. 11 ರಾತ್ರಿಯಲ್ಲಿ ನೇತ್ರಾವತಿಗೆ ಎಚ್ಚರವಾಗಿದೆ. ಮನೆ ಹೊರಗೆ ಇರೋ ಮಗಳು ಹುಡುಗರ ಜೊತೆ ಇರೋದನ್ನ ನೋಡಿದ ಕೂಡಲೇ ಅವರ ಜೊತೆ ಜಗಳವನ್ನು ಮಾಡಿದ್ದಾಳೆ. ಜಗಳದ ವೇಳೆ ನೇತ್ರಾವತಿ ಬಾಯಿ ಮುಚ್ಚಿದ ಐವರು ಯುವಕರು ಬಳಿಕ ಟವೆಲ್‌ನಿಂದ ಕುತ್ತಿಗೆಗೆ ಬಿಗಿದಾಗ ನೇತ್ರಾವತಿ ಉಸಿರು ಚೆಲ್ಲಿದ್ದಾಳೆ. ನಂತರ ಕುತ್ತಿಗೆಗೆ ಸೀರೆ ಬಿಗಿದು ಫ್ಯಾನ್‌ಗೆ ನೇತು ಹಾಕಿ ಮನೆ ಬೀಗ ಹಾಕಿದ್ರು.ಹತ್ಯೆ ಬಳಿಕ ಪ್ರಿಯಕರ ಮತ್ತವರ ಸ್ನೇಹಿತರು ಎಸ್ಕೇಪ್‌ ಆಗಿದ್ದಾರೆ. ಆದರೆ ಬಳಿಕ ಪೊಲೀಸ್‌ ತನಿಖೆ ವೇಳೆ ಎಲ್ಲರೂ ತಗಲಾಕೊಂಡಿದ್ದಾರೆ.
SGF11 Women's Kanjivaram Pure Soft Silk Saree With Unstitched Blouse Piece