Skip to main content
ವಿಡಿಯೋ
1/3
crime

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ PFI ಸಂಘಟನೆ ಭಾಗಿ: NIA ಚಾರ್ಜ್‌ಶೀಟ್ ಸಲ್ಲಿಕೆ!

By Vinutha U
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ PFI ಸಂಘಟನೆ ಭಾಗಿ: NIA ಚಾರ್ಜ್‌ಶೀಟ್ ಸಲ್ಲಿಕೆ!

ಮಂಗಳೂರಿನಲ್ಲಿ 2023ರ ಮೇ 1ರಂದು ನಡೆದ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರು ಭಾಗಿಯಾಗಿದ್ದಾರೆ ಎಂದು ಎನ್‌ಐಎ ಚಾರ್ಜ್‌ಶೀಟ್ ತಿಳಿಸಿದೆ. ಎನ್‌ಐಎ ತನಿಖೆ ಪ್ರಕಾರ, ಆರೋಪಿಗಳು ಹತ್ಯೆ ಯೋಜನೆ ರೂಪಿಸಿ, ಸುಹಾಸ್ ಶೆಟ್ಟಿ ಅವರನ್ನು ವಾಹನ ತಡೆ ಮತ್ತು ಡಿಕ್ಕಿ ಮೂಲಕ ಹತ್ಯೆ ಮಾಡಿದ್ದಾರೆ.

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರು ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (NIA) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. ಮಂಗಳೂರಿನಲ್ಲಿ ನಡೆದ ಈ ಪ್ರಕರಣದ ಸಂಬಂಧ, ಎನ್ಐಎ 11 ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಮಂಗಳೂರಿನ ಬಜ್ಪೆ ಸಮೀಪ 2023ರ ಮೇ 1ರಂದು ಸುಹಾಸ್ ಶೆಟ್ಟಿ ಹತ್ಯೆ ನಡೆದಿತ್ತು. ಈ ಪ್ರಕರಣವು ತೀವ್ರ ಸ್ವರೂಪ ಪಡೆದು, ದಕ್ಷಿಣ ಕನ್ನಡದ ಹಲವು ತಾಲೂಕುಗಳಲ್ಲಿ ಬಂದ್‌ಗೆ ಕಾರಣವಾಗಿತ್ತು. ಘಟನೆಯ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡ ಮೇಲ್ನೋಟಕ್ಕೆ ಪತ್ತೆಯಾದ ಹಿನ್ನೆಲೆಯಲ್ಲಿ, ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು. Shining Diva Fashion Crystal Tiara and Crown for Women Stylish Headband Crowns with Comb Tiaras for Girls Kids Queen Princess Wedding Bridal Birthday Gift Hair Accessories

ಎನ್ಐಎ ತನಿಖೆಯ ಪ್ರಕಾರ, ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ಒಂದು ದೊಡ್ಡ ಸಂಚು ಅಡಗಿದೆ. ಆರೋಪಿಗಳು ಹಲವಾರು ತಿಂಗಳುಗಳ ಕಾಲ ಸುಹಾಸ್ ಶೆಟ್ಟಿ ಅವರ ಚಟುವಟಿಕೆಗಳನ್ನು ಗಮನಿಸಿದ್ದು, ಹತ್ಯೆಯನ್ನು ಎಲ್ಲಿ, ಹೇಗೆ ಮಾಡಬೇಕು, ತಪ್ಪಿಸಿಕೊಳ್ಳುವ ಮಾರ್ಗಗಳು ಮತ್ತು ಪ್ರತಿರೋಧ ಎದುರಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಯೋಜನೆ ರೂಪಿಸಿದ್ದರು. ಹತ್ಯೆಯ ದಿನ ಎರಡು ಕಾರುಗಳನ್ನು ಬಳಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸುಹಾಸ್ ಶೆಟ್ಟಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರನ್ನು ಹಿಂಬಾಲಿಸಿ, ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು, ಮತ್ತೊಂದು ವಾಹನದಿಂದ ಮುಂಭಾಗವನ್ನು ತಡೆದು ಹತ್ಯೆ ಮಾಡಲಾಗಿದೆ. ಈ ಸಂಚಿನ ಪ್ರಮುಖ ರೂವಾರಿ ಕಳವಾರು ಸಫ್ವಾನ್ ಅಲಿಯಾಸ್ ಅಬ್ದುಲ್ ಸಫ್ವಾನ್ ಎಂದು ಗುರುತಿಸಲಾಗಿದೆ. ಈತ ನಿಷೇಧಿತ PFI ಸಂಘಟನೆಯ ಮಾಜಿ ಸದಸ್ಯನಾಗಿದ್ದಾನೆ. ನಗರದ 218 ಕಡೆಗಳಲ್ಲಿ “ಕಸ ಸುರಿಯುವ ಹಬ್ಬ”ದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಸೃಷ್ಟಿ

PFI ಸಂಘಟನೆಯು ನಿಷೇಧದ ನಂತರವೂ ಸಕ್ರಿಯವಾಗಿದೆ ಎಂಬ ಆರೋಪಗಳಿಗೆ ಈ ಹತ್ಯೆ ಪುಷ್ಟಿ ನೀಡಿದಂತಾಗಿದೆ. ಕಳವಾರು ಸಫ್ವಾನ್ ಜೊತೆಗೆ ನಿಯಾಜ್ ಅಲಿಯಾಸ್ ನಿಯಾ, ಮಹಮ್ಮದ್ ಮುಸಾಮಿರ್ ಅಲಿಯಾಸ್ ಮಹಮ್ಮದ್ ಮುಸಾಮೀರ್, ಮಹಮ್ಮದ್ @ ಮುಜಮ್ಮಿಲ್, ನೌಶಾದ್ ಅಲಿಯಾಸ್ ವಾಮಂಜೂರ್ ನೌಶಾದ್ ಅಲಿಯಾಸ್ ಚೊಟ್ಟೆ ನೌಶಾದ್ ಮತ್ತು ಆದಿಲ್ ಮಹರೂಫ್ ಸೇರಿದಂತೆ ಇತರ ಸದಸ್ಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.