ಬೆಂಗಳೂರು - ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB)ಯಿಂದ ಭೂಸ್ವಾಧೀನ ಪರಿಹಾರದ ಹೆಸರಿನಲ್ಲಿ 13,19,52,917/- ಕೋಟಿ ಅಕ್ರಮವಾಗಿ ವಿತರಿಸಲಾಗಿದೆ ಎಂಬ ಗಂಭೀರ ಆರೋಪ ಹೊರಬಿದ್ದಿದೆ. ಲಿಂಗಾರಾಜಪುರ ಗ್ರಾಮದ ಭೂ ಪರಿಹಾರ ಸಂಬಂಧ ತನಿಖೆ ಮಾಡುವಂತೆ ಲೋಕಾಯುಕ್ತರಿಗೆ ಜಿಪಿಎ ಹೋಲ್ಡರ್ ಲಕ್ಷ್ಮೀ ನಾರಾಯಣ್ ಹಾಗೂ ರೂಪೇಶ್ ಕುಮಾರ್ ಎಂಬುವವರು ದೂರು ನೀಡಿದ್ದಾರೆ.
ಲಿಂಗರಾಜಪುರ ಗ್ರಾಮದ ಭೂಮಾಲಿಕರು ವಿಶೇಷ ಭೂಸ್ವಾಧೀನಾಧಿಕಾರಿ (SLAO)-2 ಅವರಿಗೆ ಸಲ್ಲಿಸಿದ ದೂರು ಪತ್ರದಲ್ಲಿ ಈ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.
ದೂರುದಾರ ಪ್ರಕಾರ ನಾರಾಯಣಸ್ವಾಮಿ ಕೆ. ಎಂಬುವವರು ವಾಸ್ತವಾಂಶಗಳನ್ನು ಮುಚ್ಚಿ, KIADB ದಲ್ಲಾಳಿ ಪದ್ಮನಾಭ ಹಾಗೂ ಕೆಲ ಅಧಿಕಾರಿಗಳ ಸಹಾಯದಿಂದ ಪರಿಹಾರ ಪಡೆದಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ದೂರಿನಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಎನ್. ತೇಜಸ್ ಕುಮಾರ್ , ಮ್ಯಾನೇಜರ್ ಮಾರೂತಿ ಪ್ರಸಾದ್ ಎಂ.ಎನ್ , ಕೇಸ್ ವರ್ಕರ್ ಶಶಿ ಪ್ರಭಾ ಹೆಸರನ್ನು ಉಲ್ಲೇಖಿಸಲಾಗಿದೆ.
ಲಿಂಗರಾಜಪುರ, ಕಸಬ ಹೋಬಳಿ, ಬೆಂಗಳೂರು ಉತ್ತರ ತಾಲೂಕು (ಪ್ರಸ್ತುತ ಬಿಬಿಎಂಪಿ ವಾರ್ಡ್ 28) ಸರ್ವೆ ನಂ. 53/1, ಸಿಟಿಎಸ್ ನಂ. 599 ನಲ್ಲಿ 15 ಗುಂಟೆ ಹಾಗೂ ಭೂಮಿಯ ಪೂರ್ವಕ್ಕೆ ಸರ್ವೆ ನಂ. 53/1 ಉಳಿದ ಭಾಗ, ಪಶ್ಚಿಮಕ್ಕೆ ರಸ್ತೆ, ಉತ್ತರಕ್ಕೆ ಸೇಲಂ ರೈಲು ಹಳಿ ಹಾಗೂ ದಕ್ಷಿಣಕ್ಕೆ ಬಾಣಸವಾಡಿ ಮುಖ್ಯರಸ್ತೆ ಇದೆ. ಇದರಲ್ಲಿ ಕಾನೂನು ವಿವಾದಗಳು ಬಾಕಿ ಉಳಿದಿದೆ.
ಕಾನೂನು ವಿವಾದಗಳು ಬಾಕಿ
O.S. No. 15418/2006 : ನ್ಯಾಯಾಲಯವು ನಾರಾಯಣಸ್ವಾಮಿ ಕೆ. ಮಾಲೀಕರು ಅಲ್ಲ ಎಂದು ತೀರ್ಪು ನೀಡಿತು. RFA No. 2083/2016 : ಹೈಕೋರ್ಟ್‌ನಲ್ಲಿ ಅಪೀಲು ಬಾಕಿ ಇದೆ. CTS No. 599/1 ಹಕ್ಕು ಬದಲಾವಣೆ – SSLR ಆಯುಕ್ತರ ಸುಒ ಮೋಟೋ ತನಿಖೆ ಬಾಕಿ ಇದೆ. W.P. No. 20013/2019 : ಖಾತೆ ಹಕ್ಕು ಪಡೆಯಲು ಆದೇಶ ಪಡೆದರೂ, ಅದು W.A. No. 1209/2022 ಹಾಗೂ W.A. No. 142/2023ರಲ್ಲಿ ಪ್ರಶ್ನಿಸಲ್ಪಟ್ಟಿದೆ.
ಈ ಎಲ್ಲಾ ಪ್ರಕರಣಗಳು ಬಾಕಿಯಿರುವ ನಡುವೆಯೇ, 2024ರಲ್ಲಿ ಹೊರಡಿಸಲಾದ Notification No. CI 149/SPQ/2024 (KIADB Identification No. C2/R/3/2/Lingarajpur/02) ಆಧಾರವಾಗಿ 1000.06 ಚ.ಮೀ. ಭೂಮಿಗೆ ಅಕ್ರಮ ಪರಿಹಾರ ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಲೋಪಗಳ ಉಲ್ಲೇಖ ?
ದೂರುದಾರರು SLAO ಮುಂದೆ ಆಕ್ಷೇಪಣೆ ಸಲ್ಲಿಸಿದ್ದರೂ, ತೀರ್ಪಿನ ದಿನಾಂಕ ತಿಳಿಸಲಾಗಿಲ್ಲ. 21/05/2025ರಂದು ಪರಿಹಾರ ದಾಖಲೆಗಳು ಪೂರ್ಣಗೊಂಡಿದ್ದರೂ, ಅಂತಿಮ ಆದೇಶವನ್ನು 30/05/2025ರಂದು ಮಾತ್ರ ಹೊರಡಿಸಲಾಗಿದೆ. ಇದು ಪ್ರಿ ಪ್ಲಾನ್ಡ್ ಅಕ್ರಮ ಹಾಗೂ ಅಧಿಕಾರಿಗಳ ಶಾಮೀಲು ತೋರಿಸುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. Shining Diva Fashion Crystal Tiara and Crown for Women Stylish Headband Crowns with Comb Tiaras for Girls Kids Queen Princess Wedding Bridal Birthday Gift Hair Accessories
ದೂರುದಾರರ ಬೇಡಿಕೆಗಳು
1. ಅಕ್ರಮವಾಗಿ ನೀಡಲಾದ ₹13.19 ಕೋಟಿ ಪರಿಹಾರವನ್ನು ತಕ್ಷಣ ವಾಪಸ್ ಪಡೆಯುವುದು.
2. ಕಾನೂನು ಉಲ್ಲಂಘನೆಯ ಮೂಲಕ ನೀಡಲಾದ ಮೊತ್ತ ಮರುಪಡೆಯಲು ಕ್ರಮ ಕೈಗೊಳ್ಳುವುದು.
3. ಕರ್ತವ್ಯ ಲೋಪಕ್ಕೆ ಕಾರಣರಾದ KIADB ಅಧಿಕಾರಿಗಳ ವಿರುದ್ಧ ಶಿಸ್ತು ಹಾಗೂ ಕ್ರಿಮಿನಲ್ ಕ್ರಮ ಕೈಗೊಳ್ಳುವುದು.
ಲೋಕಾಯುಕ್ತ ಹಾಗೂ CEO–KIADB ಮುಂದೆ ದೂರು ಸಲ್ಲಿಸಲಾಗಿದೆ.