ಬೆಂಗಳೂರು:ರಾಜ್ಯ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC)ವು, ಕೇರಳದ ವಯನಾಡು ಪ್ರವಾಸೋದ್ಯಮದ ಕುರಿತು ಪ್ರಚಾರ ಕೈಗೊಂಡಿರುವುದು ಸಚಿವ ಎಚ್.ಕೆ. ಪಾಟೀಲ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಈಶಾನ್ಯ ದೆಹಲಿ ಗಲಭೆ ಕೇಸ್; ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಜಾಮೀನು ಮೇಲ್ಮನವಿಗಳು ಇಂದು ಸುಪ್ರೀಂನಲ್ಲಿ ವಿಚಾರಣೆ
ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ಅವರು, ಬೇರೆ ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡಲು ಯಾರು ಸೂಚನೆ ನೀಡಿದ್ದು ಎಂದು KSTDC ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ನಿಗಮವು ತನ್ನ ಸ್ವಂತ ರಾಜ್ಯದ ಪ್ರವಾಸಿ ತಾಣಗಳ ಪ್ರಚಾರದ ಬದಲಿಗೆ ನೆರೆಯ ರಾಜ್ಯದ ತಾಣದ ಬಗ್ಗೆ ಜಾಹೀರಾತು ನೀಡಿರುವುದು ಸರಿಯೇ ಎಂದು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ಭಾರತ-ಅಮೆರಿಕ 10 ವರ್ಷಗಳ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ: ಹೊಸ ಅಧ್ಯಾಯಕ್ಕೆ ನಾಂದಿ
ಕೂಡಲೇ ಈ ಕುರಿತು ಸಮಗ್ರ ಕಾರಣವನ್ನು ವಿವರಿಸಿ ವರದಿಯನ್ನು ಸಲ್ಲಿಸುವಂತೆ ಸಚಿವರು KSTDCಯ ವ್ಯವಸ್ಥಾಪಕ ನಿರ್ದೇಶಕರಿಗೆ (MD) ಖಡಕ್ ಸೂಚನೆ ನೀಡಿದ್ದಾರೆ. ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ಬೇರೆ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕ್ರಮಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.SGF11 Women's Kanjivaram Pure Soft Silk Saree With Unstitched Blouse Piece