Skip to main content
ವಿಡಿಯೋ
1/3
crime

ಗೃಹಿಣಿ ಪೂಜಾ ಅನುಮಾನಾಸ್ಪದ ಸಾವು; ಪತಿ, ಮಾವ ಬಂಧನ! ವರದಕ್ಷಿಣೆ ಕಿರುಕುಳ ಆರೋಪ..!!

By Pavitra Ganapathi Baradavalli
ಗೃಹಿಣಿ ಪೂಜಾ ಅನುಮಾನಾಸ್ಪದ ಸಾವು; ಪತಿ, ಮಾವ ಬಂಧನ! ವರದಕ್ಷಿಣೆ ಕಿರುಕುಳ ಆರೋಪ..!!

ಜಿಲ್ಲೆಯಲ್ಲಿ ಗೃಹಿಣಿ ಪೂಜಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ತಿರುವು ದೊರೆತಿದೆ. ಪೂಜಾಗೆ ವಿಷ ನೀಡಿ ಹತ್ಯೆ ಮಾಡಿರುವ ಪ್ರಬಲ ಶಂಕೆ ವ್ಯಕ್ತವಾಗಿದೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್‌ ಆರ್‌ ಪುರದಲ್ಲಿ ಗೃಹಿಣಿ ಪೂಜಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ತಿರುವು ದೊರೆತಿದೆ. ಪೂಜಾಗೆ ವಿಷ ನೀಡಿ ಹತ್ಯೆ ಮಾಡಿರುವ ಪ್ರಬಲ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: ವಿದೇಶಿ ಪ್ರವಾಸ ಭಾರಿ ದುಬಾರಿ ಅಲ್ಲ! ಈ 7 ದೇಶಗಳಿಗೆ ಹೋಗಲು ಬೇಕಿರೋದು ಎಷ್ಟು ಕಮ್ಮಿ ಹಣ ಗೊತ್ತಾ?

ಮೃತ ಪೂಜಾ ಅವರ ಪೋಷಕರು, ಪತಿ ಶರತ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಎನ್‌ ಆರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪತಿ ಶರತ್ ಮತ್ತು ಮಾವ ಸುಧಾಕರ್ ಅವರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಬಿಹಾರ ಚುನಾವಣೆ 2025: ಸಿವಾನ್ ರ್ಯಾಲಿಯಲ್ಲಿ ಯೋಗಿ ಗುಡುಗು..!

ಹೆಚ್ಚುವರಿ ವರದಕ್ಷಿಣೆ ತಗೋಬಾ ಎಂದು ಪತ್ನಿಗೆ ವಿಪರೀತ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇತ್ತ, ಪ್ರಕರಣದ ಪ್ರಮುಖ ಆರೋಪಿಗಳಾದ ಪೂಜಾ ಅತ್ತೆ ರಾಧಾ ಮತ್ತು ನಾದಿನಿ ಶಬರಿ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಈ ದುರಂತದಲ್ಲಿ ಕೇವಲ 2 ವರ್ಷದ ಗಂಡು ಮಗು ತಬ್ಬಲಿಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.SGF11 Women's Kanjivaram Pure Soft Silk Saree With Unstitched Blouse Piece