Skip to main content
ವಿಡಿಯೋ
1/3
cinema

ಪ್ರಾಣಿ ಬಲಿಯ ಆಶಯದ ‘ಕೋಣ’: ನಿರ್ದೇಶನದಲ್ಲಿ ಬಲ-ದುರ್ಬಲತೆ ಏನು?

By Ram Chethan
ಪ್ರಾಣಿ ಬಲಿಯ ಆಶಯದ ‘ಕೋಣ’: ನಿರ್ದೇಶನದಲ್ಲಿ ಬಲ-ದುರ್ಬಲತೆ ಏನು?

ಪ್ರಾಣಿ ಬಲಿಯಂತಹ ಸಾಮಾಜಿಕ ಪಿಡುಗಿಗೆ ವಿರುದ್ಧವಾಗಿ ಧ್ವನಿ ಎತ್ತುವ ಕಥೆ ಹೊಂದಿದ ‘ಕೋಣ’, ಹಾಸ್ಯ, ಹಾರರ್ ಮತ್ತು ಥ್ರಿಲ್ಲರ್ ಅಂಶಗಳನ್ನು ಸೇರಿಸುವ ಪ್ರಯತ್ನ ಮಾಡಿದೆ. ಆದರೆ, ಈ ಮಿಶ್ರಣ ಸಮತೋಲನ ಸಾಧಿಸಿಲ್ಲ ಎನ್ನುವ ಭಾವನೆ ಮೂಡಿಸುತ್ತದೆ.

ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ತನಿಷಾ ಕುಪ್ಪಂಡ ಅವರು ಈಗ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ನಿರ್ಮಾಣದ ಚೊಚ್ಚಲ ಚಿತ್ರ ‘ಕೋಣ’ ತೆರೆಕಂಡಿದೆ. ಕಾರ್ತಿಕ್ ಕಿರಣ್ ಸಂಕಪಾಲ್ ಮತ್ತು ರವಿ ಕಿರಣ್ ನಿರ್ಮಾಣದಲ್ಲಿ ತನಿಷಾ ಅವರಿಗೆ ಸಹಕಾರ ನೀಡಿದ್ದಾರೆ. ಕಾಮಿಡಿ, ಹಾರರ್, ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಹಲವು ಕಲಾವಿದರು ನಟಿಸಿದ್ದು, ಕೋಮಲ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಾಚೀನ ಕಾಲದಲ್ಲಿ ಆಚರಣೆ, ಪದ್ಧತಿ, ಮತ್ತು ನಂಬಿಕೆಗಳ ಹೆಸರಿನಲ್ಲಿ ಪ್ರಾಣಿ ಬಲಿ ಸಾಮಾನ್ಯ ಸಂಗತಿಯಾಗಿತ್ತು. ಇದೇ ವಿಷಯವನ್ನು ಆಧರಿಸಿ ನಿರ್ದೇಶಕ ಹರಿಕೃಷ್ಣ ಎಸ್. ‘ಕೋಣ’ ಚಿತ್ರವನ್ನು ರೂಪಿಸಿದ್ದಾರೆ. ಒಂದು ಹಳ್ಳಿಯಲ್ಲಿ ಜಾತ್ರೆಯ ಸಂದರ್ಭದಲ್ಲಿ ಕೋಣವನ್ನು ಬಲಿ ಕೊಡಲು ಗ್ರಾಮಸ್ಥರು ಮುಂದಾದಾಗ ಏನೆಲ್ಲಾ ಘಟನೆಗಳು ನಡೆಯುತ್ತವೆ ಎಂಬುದೇ ಚಿತ್ರದ ಹೈಲೈಟ್.

ಕೋಣವನ್ನು ಬಲಿ ನೀಡದಿದ್ದರೆ ಊರಿಗೆ ಸಂಕಷ್ಟ ಎದುರಾಗುತ್ತದೆ ಎಂಬುದು ಗ್ರಾಮಸ್ಥರ ಅಚಲ ನಂಬಿಕೆ. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಇಂತಹ ಗಂಭೀರ ಕಥಾಹಂದರದಲ್ಲಿ ಹಾರರ್ ಅಂಶಗಳನ್ನು ಸೇರಿಸಲಾಗಿದ್ದು, ಹಾಸ್ಯಮಯ ಶೈಲಿಯಲ್ಲಿ ನಿರೂಪಿಸಲು ಪ್ರಯತ್ನಿಸಲಾಗಿದೆ.Titan Titan Neo Analog Black Dial Men's Watch NM1730SL02/NN1730SL02/NP1730SL02

ಚಿತ್ರದಲ್ಲಿ ತನಿಷಾ ಕುಪ್ಪಂಡ ಮತ್ತು ಕೋಮಲ್ ಕುಮಾರ್ ದಂಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಗಳಲ್ಲಿ ಕೆಲವು ಅನಿರೀಕ್ಷಿತ ತಿರುವುಗಳಿವೆ. ಅವುಗಳನ್ನು ತೆರೆಯ ಮೇಲೆ ನೋಡಿದಾಗಲೇ ಅದರ ಅಸಲಿಯತ್ತು ತಿಳಿದುಕೊಳ್ಳಲು ಸಾಧ್ಯ. ಬಿಗ್ ಬಾಸ್ ಮತ್ತು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಕೋಮಲ್ ಕುಮಾರ್, ತನಿಷಾ ಕುಪ್ಪಂಡ ಜೊತೆಗೆ ಜಗಪ್ಪ, ಸುಶ್ಮಿತಾ, ಶಿಶಿರ್ ಶಾಸ್ತ್ರಿ, ನಮ್ರತಾ ಗೌಡ, ರಂಜಿತ್, ವಿನಯ್ ಗೌಡ, ತುಕಾಲಿ ಸಂತೋಷ್, ಮಂಜು ಪಾವಗಡ, ವಿಜಯ್ ಚಂಡೂರ್, ರಘು ರಾಮನಕೊಪ್ಪ, ರಿತ್ವಿ ಜಗದೀಶ್, ಎಂ.ಕೆ. ಮಠ, ಕೀರ್ತಿರಾಜ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಖಲಿಸ್ತಾನಿ ಸಂಘಟನೆಯಿಂದ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ಗೆ ಬೆದರಿಕೆ? ಕಾರಣ ಏನು?

ಹಾಸ್ಯ ಕಲಾವಿದರ ಬಹುಸಂಖ್ಯೆ ಇರುವುದರಿಂದ ಚಿತ್ರ ವೇಗವಾಗಿ ಸಾಗುತ್ತದೆ. ಕೋಮಲ್ ಕುಮಾರ್ ಸಿನಿಮಾ ಎಂದರೆ ಅಭಿಮಾನಿಗಳು ಹಾಸ್ಯವನ್ನು ನಿರೀಕ್ಷಿಸುವುದು ಸಹಜ. ಆದರೆ, ಹಾಸ್ಯದ ಜೊತೆಗೆ ಹಾರರ್ ಮತ್ತು ಥ್ರಿಲ್ಲರ್ ಅಂಶಗಳನ್ನು ಸೇರಿಸಲು ಪ್ರಯತ್ನಿಸಿರುವುದು ಸ್ವಲ್ಪ ಅಸಮತೋಲನಕ್ಕೆ ಕಾರಣವಾಗಿದೆ.

ಪೂರ್ಣ ಪ್ರಮಾಣದ ಹಾರರ್-ಥ್ರಿಲ್ಲರ್ ಆಗಿಯೂ ಇಲ್ಲದೆ, ಪೂರ್ಣ ಹಾಸ್ಯ ಚಿತ್ರವಾಗಿಯೂ ರೂಪುಗೊಳ್ಳದೆ, ಒಂದು ನಿರ್ದಿಷ್ಟ ಚೌಕಟ್ಟಿಲ್ಲದೆ ಸಿನಿಮಾ ಮೂಡಿಬಂದಿದೆ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಹಾರರ್ ಕಥೆಗೆ ಇನ್ನಷ್ಟು ತೀವ್ರತೆ ಅಗತ್ಯವಿತ್ತು. ಹಾಸ್ಯ ದೃಶ್ಯಗಳನ್ನು ಸುಧಾರಿಸುವ ಬಗ್ಗೆ ಹೆಚ್ಚು ಗಮನ ಹರಿಸಬಹುದಿತ್ತು.

ಇಂತಹ ಕೆಲವು ಕೊರತೆಗಳು ‘ಕೋಣ’ ಚಿತ್ರದಲ್ಲಿ ಎದ್ದು ಕಾಣಿಸುತ್ತವೆ. ಆದರೂ, ಮೇಲು-ಕೀಳು, ಪ್ರಾಣಿ ಬಲಿಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತುವ ಚಿತ್ರದ ಆಶಯದಿಂದಾಗಿ, ಸಿನಿಮಾ ತನ್ನದೇ ಆದ ನೆಲೆಯಲ್ಲಿ ವೀಕ್ಷಕರನ್ನು ತಲುಪುತ್ತದೆ.